ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ ಚಾಲಕರೇ ಹುಷಾರ್ : ನಿಮ್ಮ ಕಾರನ್ನೂ ಹೀಗೆ ಕದಿಯಬಹುದು

|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಪ್ರಯಾಣಿಕರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಓಲಾ ಚಾಲಕನ ಬಳಿ ಇದ್ದ ಹಣದ ಜೊತೆಗೆ ಕಾರನ್ನೂ ಕೂಡ ದರೋಡೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಡುಗೋಡಿಯಲ್ಲಿ ಪ್ರಯಾಣಿಕರ ಸೋಗಿನಲ್ಲಿ ಇಬ್ಬರು ಕಾರನ್ನು ಹತ್ತಿದ್ದಾರೆ, ಅವರು ಎಲ್ಲರಂತೆಯೇ ಓಲಾ ಅಪ್ಲಿಕೇಷನ್ ಮೂಲಕವೇ ಓಲಾ ಕ್ಯಾಬ್ ಬುಕ್ ಮಾಡಿದ್ದರು.ಕಾರು ಮತ್ತು ಹಣ ನೀಡದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದರು ಎಂದು ಚಾಲಕ ಹೇಳಿಕೊಂಡಿದ್ದಾರೆ.

ಬೆಂಗಳೂರಲ್ಲಿ ಓಲಾದಿಂದ self drive ಕಾರು ಸೇವೆ ಆರಂಭ ಬೆಂಗಳೂರಲ್ಲಿ ಓಲಾದಿಂದ self drive ಕಾರು ಸೇವೆ ಆರಂಭ

ಚಾಲಕ ಶಿವಕುಮಾರ್ ಹೊಸೂರು ರಸ್ತೆಯ ನಿವಸಿಯಾಗಿದ್ದು, ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ದುಷ್ಕರ್ಮಿಗಳು 25-30 ವರ್ಷದೊಳಗಿನವರಾಗಿದ್ದಾರೆ. ಚಾಲಕ ಶಿವಕುಮಾರ್ ದೇವನಹಳ್ಳಿ ಪ್ಲಾಜಾ ಬಳಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಮೆಸೇಜ್ ಬಂದಿದ್ದ ನಂಬರ್‌ಗೆ ಕರೆ ಚಾಲಕ ಕರೆ ಮಾಡಿದ್ದರು.

Three Passengers Robs Ola Driver

ಟೋಲ್ ಗೇಟ್ ಬಳಿ ಬರುವಂತೆ ಅವರು ಮಾಹಿತಿ ನೀಡಿದ್ದರು. ಅಲ್ಲಿ ತಲುಪಿದ ಬಳಿಕ ಮೂವರು ಮಂದಿ ಕ್ಯಾಬ್‌ ಹತ್ತಿದ್ದರು. ಓಟಿಪಿ ಕೂಡ ಮ್ಯಾಚ್ ಆಗಿತ್ತು. ವೈಟ್‌ಫೀಲ್ಡ್‌ ಕಡೆ ತೆರಳುವಂತೆ ಹೇಳಿದ್ದರು.

ಅಲ್ಲಿ ಒಂದೆಡೆ ನಿಲ್ಲಿಸಿ ಕತ್ತಿಗೆ ಚಾಕು ಹಿಡಿದು ಹಣ ಕೊಡುವಂತೆ ಬಲವಂತ ಮಾಡಿದ್ದರು. ಬಳಿಕ ಮೊಬೈಲ್, ಹಣ, ಕಾರು ತೆಗೆದುಕೊಂಡು ಪರಾರಿಯಾಗಿದ್ದರು.
ಬೆಳಗಿನ ಜಾವ ಸುಮಾರು 2 ಗಂಟೆ ಹೊತ್ತಿಗೆ. ಚಾಲಕ ಕತ್ತಲಲ್ಲೇ ನಡೆದುಕೊಂಡು ಬಂದು ಮನೆ ತಲುಪಿದ್ದಾರೆ.

English summary
An Ola cab driver was robbed of his cash and vehicle by three unidentified men who boarded the car posing as passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X