ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕತಾರ್ ನಲ್ಲಿ ಪ್ರೇಮ, ಕಳ್ಳತನದಿಂದ ಭಾರತಕ್ಕೆ ಪಾಕಿಸ್ತಾನಿ ಎಂಟ್ರಿ!

ನಕಲಿ ಪಾಸ್ ಪೋರ್ಟ್ ಹೊಂದಿದ್ದ ಮೂವರು ಪಾಕಿಸ್ತಾನಿಗಳನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. ಕುಮಾರಸ್ವಾಮಿ ಲೇ ಔಟ್ ಪೊಲೀಸರ ಬಲೆಗೆ ಬಿದ್ದ ಮೂವರು ಭಾರತದ ನಕಲಿ ಪಾಸ್ ಪೋರ್ಟ್ ಹೊಂದಿದ್ದರು.

By ಅನುಷಾ ರವಿ
|
Google Oneindia Kannada News

ಬೆಂಗಳೂರು, ಮೇ 25: ನಕಲಿ ಪಾಸ್ ಪೋರ್ಟ್ ಹೊಂದಿದ್ದ ಮೂವರು ಪಾಕಿಸ್ತಾನ ಪ್ರಜೆಗಳನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. ಕುಮಾರಸ್ವಾಮಿ ಲೇ ಔಟ್ ಪೊಲೀಸರ ಬಲೆಗೆ ಬಿದ್ದ ಮೂವರು ಭಾರತದ ನಕಲಿ ಪಾಸ್ ಪೋರ್ಟ್, ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಹೊಂದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೇಳಿದರು.

ಕಳೆದ 9 ತಿಂಗಳಿನಿಂದ ಕುಮಾರಸ್ವಾಮಿ ಲೌಟಿನ ಅಪಾರ್ಟ್ಮೆಂಟ್ ನಲ್ಲಿ ನಾಲ್ವರು ವಾಸಿಸುತ್ತಿದ್ದರು. ಇವರ ಬಗ್ಗೆ ಕೆಲ ಕಾಲದಿಂದ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು ಗುರುವಾರ (ಮೇ 25) ದಂದು ಎಲ್ಲರನ್ನು ಬಂಧಿಸಲಾಗಿದೆ. ಭಾರತದ ನಾಗರಿಕರು ಎಂದು ಸಾಬೀತುಪಡಿಸಲು ಬೇಕಾದ ಸಕಲ ಗುರುತಿನ ಚೀಟಿಗಳನ್ನು ತಯಾರಿಸಿ ಇಟ್ಟುಕೊಂಡಿದ್ದರು.

ಬಂಧಿತರನ್ನು ಕರಾಚಿ ಮೂಲದ ಕಿರಣ್ ಗುಲಾಮ್, ಸಮೀರಾ ಹಾಗೂ ಕಾಸಿಫ್ ಷಂಶುದ್ದೀನ್ ಎಂದು ಗುರುತಿಸಲಾಗಿದೆ. ಇವರ ಜತೆಗೆ ಕೇರಳ ಮೂಲದ ಮೊಹಮ್ಮದ್ ಬಷೀರ್ ಎಂಬಾತನನ್ನು ವಿಚಾರಣೆಗಾಗಿ ಕರೆದೊಯ್ಯಲಾಗಿದೆ.

Three Pakistani nationals with fake passports arrested in Bengaluru

ಕತಾರ್ ನಲ್ಲಿ ಉದ್ಯೋಗ ನಿರತರಾಗಿದ್ದಾಗ ಪಾಕಿಸ್ತಾನಿ ಯುವತಿ ಕಿರಣ್ ಗುಲಾಮ್ ಎಂಬುವರನ್ನು ಮೊಹಮ್ಮದ್ ಪರಿಚಯ ಮಾಡಿಕೊಂಡಿದ್ದಾನೆ. ಇಬ್ಬರಿಗೂ ಪ್ರೇಮಾಂಕುರವಾಗಿ ಮದುವೆಯಾಗಲು ಬಯಸಿದ್ದಾರೆ. ಯುವತಿಯ ಮನೆಯಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ನಕಲಿ ಪಾಸ್ ಪೋರ್ಟ್ ಬಳಸಿ ಪಾಕಿಸ್ತಾನಿಗಳನ್ನು ಕತಾರ್ ನಿಂದ ಮಸ್ಕತ್ ಮೂಲಕ ನೇಪಾಳಕ್ಕೆ ಬಂದು ಅಲ್ಲಿಂದ ಭಾರತದೊಳಗೆ ಕರೆಸಿಕೊಳ್ಳಲಾಗಿದೆ.

ಬೆಂಗಳೂರಿನ ಕುಮಾರಸ್ವಾಮಿ ಲೇ ಔಟಿನಲ್ಲಿ ನೆಲೆಸಲು ಮತ್ತೊಬ್ಬ ಭಾರತೀಯ ನೆರವಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.

English summary
Three Pakistan nationals with fake documents were arrested by the Bengaluru police on Thursday. The Kumaraswamy layout police arrested Kiran Gulaam, Sameera and Kashif Shamsudeen suspected to be from Karachi of Pakistan along with one Indian national, Mohammed, said to be a native of Kerala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X