ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ನಾಮಪತ್ರಗಳು ತಿರಸ್ಕೃತ!

By ದೇವನಹಳ್ಳಿ ಪ್ರತಿನಿಧಿ
|
Google Oneindia Kannada News

ದೇವನಹಳ್ಳಿ ಏಪ್ರಿಲ್ 26 : ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಂದ ಬಿ ಫಾರಂ ಪಡೆದ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರ ನಾಮಪತ್ರ ಚುನಾವಣಾ ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ ತಿರಸ್ಕೃತವಾಗಿವೆ.

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಂದ ಕಳೆದ ಗುರುವಾರ ಬಿ ಫಾರಂ ಪಡೆದು ಶುಕ್ರವಾರ ಜೆಡಿಎಸ್ ನ ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದ ನಂತರ ವಿಜಯಪುರ ಹೋಬಳಿಯ ಭಟ್ರೇನಹಳ್ಳಿ ಗ್ರಾಮದ ಶ್ರೀ ನರಸಿಂಹಸ್ವಾಮಿ ದೇವಾಲದಯಲ್ಲಿ ಪೂಜೆ ಸಲ್ಲಿಸಿ, ಮರುದಿನ ತೂಬಗೆರೆ ಹೋಬಳಿಯಲ್ಲಿ ಪ್ರಚಾರ ಕಾರ್ಯ ಸಹ ಮುಗಿಸಿದ್ದರು. ಮಗಳ ಮದುವೆ ಮುಗಿಸಿದ ನಂತರ ಚುನಾವಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ್ದರು.

ಮಾದಿಗ ಜನಾಂಗಕ್ಕೆ ಮೋಸ ಮಾಡ್ಬಿಟ್ರು ದೇವೇಗೌಡ್ರು: ಪಿಳ್ಳಮುನಿಶಾಮಪ್ಪ ಮಾದಿಗ ಜನಾಂಗಕ್ಕೆ ಮೋಸ ಮಾಡ್ಬಿಟ್ರು ದೇವೇಗೌಡ್ರು: ಪಿಳ್ಳಮುನಿಶಾಮಪ್ಪ

ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಬಿ ಫಾರಂ ದೊರೆತ ಹಿನ್ನಲೆ ಜೆಡಿಎಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ನಿಸರ್ಗ ನಾರಾಯಣಸ್ವಾಮಿ ತನ್ನ ಆಪ್ತರೊಂದಿಗೆ ಗೌಪ್ಯ ಸಭೆ ನಡೆಸಿ ಪಕ್ಷೇತರವಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದರು. ಅದರಂತೆಯೇ ಸೋಮವಾರ ತನ್ನ ಕುಟುಂಬಸ್ಥರೊಂದಿಗೆ ತಾಲೂಕು ಕಚೇರಿಗೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಮಂಗಳವಾರ ಮತ್ತೊಂದು ಬಾರಿ ಪಕ್ಷೇತರ ಅಭ್ಯರ್ಥಿ ಆಗಿಯೇ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದರು.

Three nominations were rejected in the Devanahalli constituency.

ನಂತರ ಜೆಡಿಎಸ್ ನಲ್ಲಿ ಸೋಮವಾರ ರಾತ್ರಿ ನಡೆದ ಧಿಡೀರ್ ಬೆಳವಣಿಗೆಗಳಿಂದಾಗಿ ನಿಸರ್ಗ ನಾರಾಯಣಸ್ವಾಮಿಗೆ ಸಿ ಫಾರಂ ದೊರಕುವುದಾಗಿ ಗುಸುಗುಸು ಸುದ್ದಿ ಹಬ್ಬಿತ್ತು. ಆದರೆ ಮಂಗಳವಾರ ಬೆಳಗ್ಗೆ ನಿಸರ್ಗ ನಾರಾಯಣಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳ ಕಚೇರಿಗೆ ಆಗಮಿಸಿ, ಉಮೇದಾರಿಕೆ ಸಲ್ಲಿಸಿದ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳಿಗೆ ಜೆಡಿಎಸ್ ನಿಂದ ಸಿ ಫಾರಂ ದೊರೆತ್ತಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರಿಂದ ಎಂಎಲ್ ಸಿ ರಮೇಶ್‌ಬಾಬು ನಿಸರ್ಗ ನಾರಾಯಣಸ್ವಾಮಿ ಅವರ ಸಿ ಫಾರಂ ತಂದರು.

ಮೊದಲು ಪಕ್ಷೇತರ ಅಭ್ಯರ್ಥಿ ಆಗಿ ಎರಡು ನಾಮಪತ್ರದೊಂದಿಗೆ, ಮೂರನೇ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಇದೀಗ ಬಿ ಫಾರಂನೊಂದಿಗೆ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಸಲ್ಲಿಸಿದ್ದ ನಾಮಪತ್ರ ವಜಾ ಆಗಿ ಸಿ ಫಾರಂನೊಂದಿಗೆ ನಿಸರ್ಗ ನಾರಾಯಣಸ್ವಾಮಿ ಸಲ್ಲಿಸಿದ್ದ ನಾಮಪತ್ರ ಸಿಂಧುಗೊಂಡಿದೆ.

ಒಟ್ಟು ಮೂರು ನಾಮಪತ್ರ ವಜಾ
ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸನ್ನದ್ಧಿ ಶ್ರೀನಿವಾಸ್(ಪಕ್ಷೇತರ), ಮ್ಯಾಥ್ಯೂ ಮುನಿಯಪ್ಪ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಎಂ.ನಾರಾಯಣಸ್ವಾಮಿ(ಪಕ್ಷೇತರ), ದೊಡ್ಡಚಿಕ್ಕಣ್ಣ ಡಿ.ಸಿ(ಪಕ್ಷೇತರ), ನಿಸರ್ಗ ನಾರಾಯಣಸ್ವಾಮಿ ಎಲ್.ಎನ್(ಪಕ್ಷೇತರ ೨ ಮತ್ತು ಜೆಡಿಎಸ್ ೧), ನಾಗರಾಜು.ಎಂ(ಕರ್ನಾಟಕ ರಿಪಬ್ಲಿಕನ್ ಸೇನೆ), ಕೆ.ನಾಗೇಶ್(ಬಿಜೆಪಿ), ಬಿ.ಕೆ ಶಿವಪ್ಪ(ಪಕ್ಷೇತರ), ಡಿ.ಆರ್ ನಾರಾಯಣಸ್ವಾಮಿ(ಪಕ್ಷೇತರ ೨ ), ಎ.ಚಿನ್ನಪ್ಪ(ಪಕ್ಷೇತರ), ಎಂ.ಮುನಿಯಪ್ಪ (ಪಕ್ಷೇತರ ೨), ಇಂದಿರಮ್ಮ(ಆರ್‌ಪಿಐ), ಪಿಳ್ಳಮುನಿಶಾಮಪ್ಪ(ಜೆಡಿಎಸ್), ಬಿಜ್ಜವಾರ ನಾಗರಾಜ್(ಅಂಬೇಡ್ಕರ್ ಪಾರ್ಟಿ ಇಂಡಿಯಾ ಮತ್ತು ಪಕ್ಷೇತರ), ಕೆ.ರಾಮಚಂದ್ರಪ್ಪ(ಎಂಇಪಿ), ವೆಂಕಟಸ್ವಾಮಿ(ಪಕ್ಷೇತರ ೨ ಮತ್ತು ಕಾಂಗ್ರೆಸ್ ೧), ಬಿ.ರಾಮಚಂದ್ರ (ಪಕ್ಷೇತರ) ಒಟ್ಟು 16 ಅಭ್ಯರ್ಥಿಗಳಿಂದ 23 ನಾಮಪತ್ರಗಳು ಸಲ್ಲಿಕೆಯಾಗಿದ್ದವು.

ಅದರಲ್ಲಿ ನಾಮಪತ್ರ ಪರಿಶೀಲನೆ ವೇಳೆ ಒಟ್ಟು 3 ನಾಮಪತ್ರಗಳು ತಿರಸ್ಕೃತವಾಗಿವೆ. ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ನಿಂದ ಸಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಬಿ ಫಾರಂ ನೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದೆ.

ಮಾಜಿ ಶಾಸಕ ವೆಂಕಟಸ್ವಾಮಿ ಪಕ್ಷೇತರರಾಗಿ 2 ನಾಮಪತ್ರ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದರಲ್ಲಿ ಪಕ್ಷೇತರರಾಗಿ ಸಲ್ಲಿಸಿದ್ದ ಉಮೇದಾರಿಕೆ ಅಪೂರ್ಣವಾದ ವಿವರದ ಕಾರಣ 2 ನಾಮಪತ್ರಗಳು ತಿರಸ್ಕೃತಗೊಂಡಿವೆ.

English summary
Three nominations were rejected in the Devanahalli assembly constituency. MLA Pillamunishamppa nominations has been rejected during the examination of the election officials. Likewise Former MLA Venkataswamy's nomination has been rejected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X