ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚರ್ಚ್ ಸ್ಟ್ರೀಟ್ ನಂತೆ ಅಭಿವೃದ್ಧಿ ಹೊಂದಲಿವೆ ಮೂರು ರಸ್ತೆಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 31: ನಗರದ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಇನ್ನಷ್ಟು ಆಕರ್ಷಕವಾಗಲಿದೆ.
ಏಕೆಂದರೆ ಚರ್ಚ್ ಸ್ಟ್ರೀಟ್ ರಸ್ತೆ ಮಾದರಿಯಲ್ಲೇ ಈ ಮೂರು ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಬಿಬಿಎಂಪಿ ಯೋಜನೆ ರೂಪಿಸಿದೆ.

ವಾರಾಂತ್ಯದಲ್ಲಿ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗೆ ಜನರು ಬಾರದೇ ಹೋಗುವದಿಲ್ಲ, ಆದರೆ ಇನ್ನುಮುಂದೆ ಈ ರಸ್ತೆಗಳಿಗೆ ಜನರು ಬಂದೇ ಬರಬೇಕು ಎನ್ನುವಂತೆ ಅಭಿವೃದ್ಧಿಪಡಿಸಲು ಬಿಬಿಎಂಪಿ ನಿರ್ಧರಿಸಿದೆ.

ಬಿಬಿಎಂಪಿ ರೂಪಿಸಿರುವ ಯೋಜನೆಯಂತೆ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಕಾಬೂನ್ ಗ್ರಾನೈಟ್ ಬಳಕೆ ಮಾಡಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

church street

ಅದರ ಜತೆಗೆ ಕಸೂತಿ ಕಲೆಗಳನ್ನಾಧರಿಸಿ ಗ್ರಾನೈಟ್ ನ್ನು ಜೋಡಿಸುವ ಮೂಲಕ ಪಾದಚಾರಿ ಸ್ನೇಹ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ. ಉಳಿದಂತೆ ನೀರಿನ, ಒಳಚರಂಡಿ ಪೈಪ್ ಗಳು ಓಎಫ್ ಸಿ ಕೇಬಲ್, ವಿದ್ಯುತ್ ತಂತಿ ಸೇರಿ ಇನ್ನಿತರೆ ವಸ್ತುಗಳನ್ನು ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಅಳವಡಿಸಿ ಅವುಗಳ ದುರಸ್ತಿಗೆ ಡಕ್ಟ್ ಗಳನ್ನು ಅಳವಡಿಸಲಾಗುತ್ತದೆ.

1,580 ಮೀ. ಉದ್ದದ ರಸ್ತೆಗಳು: ಯೋಜನೆಯಂತೆ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಮ್ಯೂಸಿಯಂ ರಸ್ತೆಗಳು ಹೈಟೆಕ್ ರಸ್ತೆಗಳಾಗಿ ಅಭಿವೃದ್ಧಿ ಹೊಂದಲಿವೆ. ಒಟ್ಟು 1,580ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಮೂರು ರಸ್ತೆಗಳಲ್ಲೂ ಪಾದಚಾರಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಯೋಜನೆಯಿಂದ ಸಾರ್ವಜನಿಕರಿಗೆ ಅನುಕೂಲವಾಗಿಲಿದೆ.

English summary
BBMP is planning to develop three more roads like church street with hitech touch, Commercial street, Brigade road and museum roads will be developed under tender sure model which church street was constructed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X