ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರದಲ್ಲಿ ಮೂರು ದಿನ ಕಡಲೆಕಾಯಿ ಪರಿಷೆ, ಮಿಸ್ ಮಾಡ್ಲೇಬೇಡಿ

|
Google Oneindia Kannada News

ಬೆಂಗಳೂರು, ನವೆಂಬರ್ 15: ಬಸವನಗುಡಿ ಕಡಲೆಕಾಯಿ ಪರಿಷೆ ಮುನ್ನವೇ ಮಲ್ಲೇಶ್ವರದಲ್ಲಿ ಮೂರು ದಿನಗಳ ಕಾಲ ಕಡಲೆಕಾಯ ಪರಿಷೆ ನಡೆಯಲಿದೆ.

ನವೆಂಬರ್ 16ರಿಂದ ಆರಂಭಗೊಳ್ಳಲಿದ್ದು, 18ರವರೆಗೆ ನಡೆಯಲಿದೆ. ಚಂದ್ರಾ ಸಿ ಅಶ್ವಥ್, ರುದ್ರಾಂಭಾ ಎಂಪಿ ಪ್ರಕಾಶ್, ಡಿ.ಪಿ ರಾಜಮ್ಮ ಬೆಸಗರಹಳ್ಳಿ ರಾಮಣ್ಣ, ಕಮಲ ಮ. ರಾಮಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನವೆಂಬರ್ 25ರಿಂದ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ ನವೆಂಬರ್ 25ರಿಂದ ಬಸವನಗುಡಿಯಲ್ಲಿ ಸಾಂಪ್ರದಾಯಿಕ ಕಡಲೆಕಾಯಿ ಪರಿಷೆ

ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿಕೆ ಶಿವರಾಂ ಅಧ್ಯಕ್ಷತೆವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ, ಶಂಕರಿ ಬಳಗದ ಸರೋಜಮ್ಮ ಆಗಮಿಸಲಿದ್ದಾರೆ.

Three Days Kadlekai Parishe At Malleshwar

ಗಾನಕಲರವ ಕಾರ್ಯಕ್ರಮ ನಡೆಯಲಿದ್ದು, ವೇಮಗಲ್ ನಾರಾಯಣಸ್ವಾಮಿ, ರಾಮಚಂದ್ರ ಹಡಪದ, ಶ್ವೇತ ಪ್ರಭು, ಕಡಬಗೆರೆ ಮುನಿರಾಜು, ಶ್ರೀಧರ್ ಸಾಗರ್ ಇರಲಿದ್ದಾರೆ.
ಹುಣ್ಣಿಮೆ ಹಾಡಲ್ಲಿ ಮತ್ತೆ ಮರೆಯಲಾರದ ಡಾ. ರಾಜ್ ಮಧುರ ಗೀತೆಗಳು ಕಾರ್ಯಕ್ರಮ ನಡೆಯಲಿದೆ. ಸೃಷ್ಠಿ ನಿರಂತರ ತಂಡದಿಂದ ಗಾಯನ ಕಾರ್ಯಕ್ರಮವಿರಲಿದೆ.

ಹಾಗೆಯೇ ಹಸಿರು ಚೈತನ್ಯೋತ್ಸವ, ಕಾಡು ಮಲ್ಲೇಶ್ವರ ಸ್ವಾಮಿಗೆ ಹಾಗೂ ನಂದಿಗೆ ಕಡಲೇಕಾಯಿ ಅಭಿಷೇಕ, ಮಲ್ಲೇಶ್ವರ ಆಹಾರ ಪರಿಷೆ, ದಾಸ ವಚನ ಸಂಗಮ ನಡೆಯಲಿದೆ.

English summary
Kadu Malleshwar Gelayara Balaga Organising 3 day Kadlekai Parishe From November 16-18 At Malleshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X