ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 3 ದಿನ ಭಾರೀ ಮಳೆ ಎಚ್ಚರಿಕೆ

|
Google Oneindia Kannada News

ಬೆಂಗಳೂರು, ಆಗಸ್ಟ್ 17: ಬೆಂಗಳೂರಲ್ಲಿ ಬಿಸಿಲು ಮಳೆ ಕಣ್ಣಾ ಮುಚ್ಚಾಲೆಯಾಡುತ್ತಿದೆ. ಶುಕ್ರವಾರ ಸಂಜೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಸಾಕಷ್ಟು ಕಡೆ ಸಾಧಾರಣ ಮಳೆಯಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು, ಮೋಡ ಕವಿದ ವಾತಾವರಣ ವಿದ್ದರೆ ಸಂಜೆ 5ರ ಬಳಿಕ ಮಳೆ ಆರಂಭವಾಯಿತು.

ಬೆಂಗಳೂರಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಮುನ್ಸೂಚನೆ ಬೆಂಗಳೂರಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಮುನ್ಸೂಚನೆ

ಶನಿವಾರ ಬೆಳಗ್ಗೆ ಕೂಡ ಕೆಂಗೇರಿ, ಉತ್ತರಹಳ್ಳಿ, ಬನಶಂಕರಿ, ಜಯನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಶುಕ್ರವಾರ ಸಂಜೆ ಮಲ್ಲೇಶ್ವರ, ಗಾಂಧಿನಗರ, ಕೆಆರ್ ವೃತ್ತ, ವಿಧಾನಸೌಧ, ಕೆಆರ್ ಮಾರುಕಟ್ಟೆ, ಚಾಮರಾಜಪೇಟೆ, ಮೈಸೂರು ರಸ್ತೆ, ವಿಜಯನಗರ, ಜಯನಗರ, ಬಸವನಗುಡಿ, ಹೊಸಕೆರೆಹಳ್ಳಿ, ಲಾಲ್‌ಬಾಗ್, ಶಾಂತಿನಗರ ಇನ್ನಿತರೆ ಕಡೆ ಮಳೆಯಾಗಿದೆ.

Three Days Heavy Rain Expected In Bengaluru

ಸಂಜೆ ವೇಳೆಗೆ ನಗರದ ಕೇಂದ್ರ ಭಾಗದಲ್ಲಿ ತುಸು ಜೋರಾಗಿಯೇ ಮಳೆಯಾಯಿತು. ಇನ್ನು ಮೂರುದಿನಗಳ ಕಾಲ ಬೆಂಗಳೂರಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜರಾಜೇಶ್ವರಿನಗರದಲ್ಲಿ 3.5 ಮಿ.ಮೀ, ಬಿಟಿಎಂ ಲೇಔಟ್ 3.5 ಮಿ.ಮೀ, ಕುಮಾರಸ್ವಾಮಿ ಲೇಔಟ್ 2.5 ಮಿ.ಮೀ, ಬಸವನಗುಡಿ 4 ಮಿ.ಮೀ, ಕೆಆರ್‌ಪುರ 4 ಮಿ.ಮೀ ಮಳೆಯಾಗಿದೆ. ನಗರದಲ್ಲಿ ಇನ್ನೂ ಮೂರು ದಿನಗಳು ಮಳೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಚಿಕ್ಕಮಗಳೂರು, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಮಳೆಯ ಹೈ ಅಲರ್ಟ್ ಘೋಷಿಸಲಾಗಿದೆ. ಆದರೆ ಮಳೆ ಸ್ವಲ್ಪ ಕಡಿಮೆಯಾಗಿದೆ.

English summary
Generally cloudy sky one or two spells of rain very likely. Surface winds very likely to be strong and gusty at times. Maximum and Minimum temperatures very likely to be around 29 and 20 degree Celsius respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X