ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈವ್ ಬ್ಯಾಂಡ್ ಹುಡುಗಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ

|
Google Oneindia Kannada News

ಬೆಂಗಳೂರು, ಆಗಸ್ಟ್ 28: ಲೈವ್ ಬ್ಯಾಂಡ್ ನಲ್ಲಿ ದುಡಿಯುವ ಹುಡುಗಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಲೈವ್ ಬ್ಯಾಂಡ್ ಮಾಲೀಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆತನಿಂದ 28,000 ನಗದು ಮತ್ತು ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಉಪ್ಪಾರ ಪೇಟೆ ಠಾಣೆ ವ್ಯಾಪ್ತಿಯಲ್ಲಿನ ಅಮ್ಶಿ ಇಂಟರ್‌ನ್ಯಾಷನಲ್ ಇನ್ ಹೊಟೆಲ್‌ನಲ್ಲಿ ರೂಮ್‌ಗಳನ್ನು ಬುಕ್ ಮಾಡಿಕೊಂಡು, ಅಲ್ಲಿಗೆ ಲೈವ್ ಬ್ಯಾಂಡ್ ಹುಡುಗಿಯರನ್ನು ಕರೆತಂದು, ಗಿರಾಕಿಗಳನ್ನು ಕರೆತಂದು ವೇಶ್ಯಾವಾಟಿಕೆ ದಂದೆ ನಡೆಸಲಾಗುತ್ತಿತ್ತು.

ಸೋಮೇಶ್ವರ; ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ, ಇಬ್ಬರು ಮಹಿಳೆಯರ ಬಂಧನಸೋಮೇಶ್ವರ; ಬಾಡಿಗೆ ಮನೆಯಲ್ಲಿ ಹೈಟೆಕ್ ವೇಶ್ಯಾವಾಟಿಕೆ, ಇಬ್ಬರು ಮಹಿಳೆಯರ ಬಂಧನ

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹೊಟೆಲ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಲೈವ್ ಬ್ಯಾಂಡ್ ಮಾಲೀಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಡಿ.ಎನ್.ಲಕ್ಷ್ಮಣ, ಶಿವರಾಜು, ಬಿ.ಎಲ್.ರವಿಕುಮಾರ್ ಎಂದು ಗುರತಿಸಲಾಗಿದೆ.

Three arrested by Bengaluru police for doing prostitution

ಹೊಟೆಲ್‌ ಮೇಲೆ ದಾಳಿ ನಡೆಸಿದಾಗ ವೇಶ್ಯಾವಾಟಿಕೆಗೆ ಬಳಸಲಾಗುತ್ತಿದ್ದ ನಾಲ್ಕು ಹೊರರಾಜ್ಯದ ಯುವತಿಯರನ್ನು ರಕ್ಷಿಸಲಾಗಿದೆ. ಈ ಸಮಯ ಎರಡು ಕಾರು, 28,000 ಸಾವಿರ ನಗದು ಸಹ ವಶಪಡಿಸಿಕೊಳ್ಳಲಾಗಿದೆ.

ಬಾಡಿಗೆಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನಬಾಡಿಗೆಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದವರ ಬಂಧನ

ಆರೋಪಿ ಲಕ್ಷ್ಮಣ 'ಮಿಂಚು' ಹೆಸರಿನ ಲೈವ್‌ ಬ್ಯಾಂಡ್ ಅನ್ನು ಗಾಂಧಿ ನಗರದಲ್ಲಿ ನಡೆಸುತ್ತಿದ್ದ. ಹೊರರಾಜ್ಯಗಳಿಂದ ಯುವತಿಯರನ್ನು ಮಾನವ ಕಳ್ಳಸಾಗಣೆ ಮಾಡಿ ಕರೆತಂದು ಲೈವ್‌ ಬ್ಯಾಂಡ್‌ನಲ್ಲಿ ದುಡಿಸಿಕೊಳ್ಳುತ್ತಿದ್ದ. ನಂತರ ಹುಡುಗಿಯರಿಗೆ ಹೆಚ್ಚಿನ ಹಣದ ಆಮಿಷ ಒಡ್ಡಿ, ಆಮ್ಶಿ ಹೊಟೆಲ್‌ನ ಮ್ಯಾನೆಜರ್ ರವಿಕುಮಾರ್ ನ ಜೊತೆ ಸೇರಿ ಯುವತಿಯರನ್ನು ಹೊಟೆಲ್‌ಗೆ ಕರೆದುಕೊಂಡು ಹೋಗುತ್ತಿದ್ದ. ಮತ್ತೊಬ್ಬ ಶಿವರಾಜು ಗಿರಾಕಿಗಳನ್ನು ಹುಡುಕಿ ತರುತ್ತಿದ್ದ.

ಮೈಸೂರಿನಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನಮೈಸೂರಿನಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ

ಈ ಮೂವರು ಸೇರಿ ಆಮ್ಶಿ ಹೊಟೆಲ್‌ ಅನ್ನು ವೇಶ್ಯಾವಾಟಿಕೆ ಅಡ್ಡೆಯನ್ನಾಗಿ ಬದಲಾಯಿಸಿದ್ದರು. ಈ ಬಗ್ಗೆ ಸಿಸಿಬಿಗೆ ಖಚಿತ ಮಾಹಿತಿ ದೊರೆತ ಕಾರಣ ನಿನ್ನೆ (27 ಆಗಸ್ಟ್‌) ರಾತ್ರಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

English summary
Three arrested near Upparpete for doing prostitution business by using live band girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X