• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲು ಬಂದ್, ಕಾಲ್ನಡಿಗೆಯಲ್ಲಿ ಊರಿನತ್ತ ಹೆಜ್ಜೆಯಿಟ್ಟ ವಲಸೆ ಕಾರ್ಮಿಕರು

|

ಬೆಂಗಳೂರು, ಮೇ 6: ವಲಸೆ ಕಾರ್ಮಿಕರಿಗಾಗಿ ನಿಯೋಜಿಸಿದ್ದ ರೈಲುಗಳನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ರಾಜ್ಯದಲ್ಲಿ ಆರ್ಥಿಕ ಚುಟವಟಿಕೆಗಳಿಗೆ ಮರುಚಾಲನೆ ನೀಡಲಿದ್ದು, ಕಾರ್ಮಿಕರು ಇಲ್ಲೆ ಉಳಿದುಕೊಂಡು ರಾಜ್ಯಕ್ಕೆ ನೆರವಾಗಬೇಕು ಎಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದರು.

ಈ ಕಡೆ ಉತ್ತರಪ್ರದೇಶ, ಜಾರ್ಖಂಡ್‌ ರಾಜ್ಯಕ್ಕೆ ಹೋಗಲು ನಿರ್ಧರಿಸಿ ಗಂಟುಮೂಟೆ ಕಟ್ಟಿಕೊಂಡಿದ್ದ ವಲಸೆ ಕಾರ್ಮಿಕರಿಗೆ ಸರ್ಕಾರ ರೈಲು ಬಂದ್ ಮಾಡಿ ಶಾಕ್ ನೀಡಿತ್ತು. ಆದರೆ, ಕಾರ್ಮಿಕರು ಮಾತ್ರ ಸಿಲಿಕಾನ್ ಸಿಟಿ ಸಹವಾಸ ಬೇಡಪ್ಪ ಎಂದು ನಿರ್ಧರಿಸಿ ಕಾಲ್ನಡಿಗೆಯಲ್ಲೇ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಎಕರೆಗೆ 50 ಲಕ್ಷ ಖರ್ಚು ಮಾಡಿ ಬೆಳೆಯುವ ಹೂವು ಚಿನ್ನದ್ದಾ? ಸಿದ್ದರಾಮಯ್ಯಗೆ ತಿರುಗೇಟು

ಗುಂಪು ಗುಂಪಾಗಿ ವಲಸೆ ಕಾರ್ಮಿಕರು ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೆಗೌಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ರಾಜ್ಯ ಸರ್ಕಾರ ರೈಲು ರದ್ದುಗೊಳಿಸಿರುವುದು ಅಮಾನವೀಯ. ಅವರು ಮನೆಗೆ ಹೋಗಲು ತುಂಬಾ ಕಷ್ಟಪಡುತ್ತಿದ್ದಾರೆ. ಬಲವಂತಪಡಿಸಬೇಡಿ, ಅವರನ್ನು ಚೆನ್ನಾಗಿ ಕಳುಹಿಸಿಕೊಡಿ. ಸಂಜೆ 5.30ಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ' ಎಂದು ಮೊದಲು ವಿಡಿಯೋ ಶೇರ್ ಮಾಡಿದ್ದರು.

''ಈ ಕುರಿತು ಸರ್ಕಾರದ ಕಾರ್ಯದರ್ಶಿಗಳ ಜೊತೆ ನಾನು ಮಾತನಾಡಿದೆ. ರೈಲು ಬಂದ್ ಮಾಡಿರುವ ಕುರಿತು ಮರುಪರಿಶೀಲಿಸಿ ಎಂದು ನಾನು ಒತ್ತಾಯಿಸಿದ್ದೇನೆ. ಅವರು ಬಡವರಾಗಿರಬಹುದು ಆದರೆ ಅವರೂ ಮನುಷ್ಯರೇ. ಅವರೇನು ಬಂಧಿತ ಕಾರ್ಮಿಕರಲ್ಲ, ವಿದೇಶದಲ್ಲಿರುವ ಭಾರತೀಯರು ಮರಳಲು ಬಯಸುತ್ತಾರೆ. ಅಂತಹ ಸಂದರ್ಭದಲ್ಲಿ ಈ ಜನರು ಕೂಡ ಅವರ ಮನೆಗೆ ಹೋಗಲು ಬಯಸುತ್ತಿದ್ದಾರೆ'' ಎಂದು ಮತ್ತೊಂದು ಟ್ವೀಟ್ ಮಾಡಿದರು.

ಇದೇ ವಿಚಾರವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದರು. ''ವಲಸಿಗರಿಗೆ ರೈಲುಗಳನ್ನು ರದ್ದುಗೊಳಿಸಿರುವ ಸಿಎಂ ನಿರ್ಧಾರವು ಕೇವಲ ಅಮಾನವೀಯ ಮಾತ್ರವಲ್ಲ, ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತಿದೆ'' ಎಂದಿದ್ದರು.

''ಕಾರ್ಮಿಕರು ಊರಿಗೆ ಮರಳಿದರೆ ಉದ್ಯಮ ಮತ್ತು ಕಟ್ಟಡ ನಿರ್ಮಾಣ‌ದ ಕೆಲಸಗಳಿಗೆ ಕಾರ್ಮಿಕರಿಲ್ಲದೆ ತೊಂದರೆಯಾಗಲಿದೆ ಎಂದು ಸರ್ಕಾರ ಹೇಳುತ್ತಿರುವುದನ್ನು ನೋಡಿದರೆ, ಯಾರದೋ ಹಿತಾಸಕ್ತಿಗಾಗಿ ಬಡಪಾಯಿ ಕಾರ್ಮಿಕರನ್ನು ಬಲಿಕೊಡಲು ಮುಖ್ಯಮಂತ್ರಿಗಳು ಹೊರಟಿರುವುದು ಸ್ಪಷ್ಟವಾಗಿದೆ'' ಎಂದು ಕಿಡಿಕಾರಿದ್ದರು.

ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ತಪ್ಪು ಮಾಡುತ್ತಿದೆಯೇ? ವಿದೇಶದಿಂದ ಭಾರತೀಯರನ್ನು ಕರೆದುಕೊಂಡು ಬರಲು ಸರ್ಕಾರ ತೋರುತ್ತಿರುವ ಕಾಳಜಿ, ಭಾರತದೊಳಗೆ ಇರುವ ಕಾರ್ಮಿಕರು ಅವರ ಮನೆಗೆ ಕಳುಹಿಸಿಕೊಡಲು ಏಕೆ ನಿರಾಕರಿಸುತ್ತಿದೆ ಎಂಬುದು ಪ್ರಶ್ನೆಯಾಗಿದೆ.

English summary
State governamnet cancels trains for migrants workers. but, they are not stay here, thousands of people, in groups of 10-20, are just walking to uttara pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X