ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

20 ಸಾವಿರ ಕಾರ್ಮಿಕರಿಗೆ ಬೆಳಗ್ಗೆಯಿಂದ ಊಟ ಇಲ್ಲ: ಡಿಕೆ ಶಿವಕುಮಾರ್

|
Google Oneindia Kannada News

ಬೆಂಗಳೂರು, ಮೇ 23: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇರುವ ವಲಸೆ ಕಾರ್ಮಿಕರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಭೇಟಿ ಮಾಡಿದ್ದಾರೆ. ವಲಸೆ ಕಾರ್ಮಿಕರ ಸ್ಥಿತಿಯನ್ನು ನೋಡಿ ಸಂಕಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Recommended Video

ರಾಜೀವ್ ಗಾಂಧಿಯವರಿಗೆ ನಮನ ಸಲ್ಲಿಸಿದ ಡಿಕೆ ಶಿವಕುಮಾರ್

''ಅರಮನೆ ಮೈದಾನದಲ್ಲಿರುವ 20,000ಕ್ಕೂ ಹೆಚ್ಚು ಜನರು ಬೆಳಿಗ್ಗೆ 6 ಗಂಟೆಯಿಂದ ಅಲ್ಲಿದ್ದಾರೆ. ಅವರಿಗೆ ಊಟ, ನೀರಿನ ವ್ಯವಸ್ಥೆ ಕೂಡಾ ಇಲ್ಲ. ಸರ್ಕಾರದಿಂದ 1000 ರೈಲ್ವೆ ವೆಚ್ಚ ಭರಿಸುವುದಾಗಿ ಹೇಳಿ, ಇದೀಗ ಪ್ರಯಾಣದ ವೆಚ್ಚ ಅವರೇ ಭರಿಸಬೇಕು ಎಂದಿದ್ದಾರೆ.'' ಎಂದು ಡಿಕೆ ಶಿವಕುಮಾರ್ ಬೇಸರ ಹೊರ ಹಾಕಿದ್ದಾರೆ.

ಜೂನ್ 7 ರಂದು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ?ಜೂನ್ 7 ರಂದು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ?

''ಮತ್ತೊಮ್ಮೆ ಹೇಳುತ್ತಿದ್ದೇನೆ, ಕೆಪಿಸಿಸಿಯಿಂದ ತಕ್ಷಣದಲ್ಲಿಯೇ ಎಲ್ಲರ ರೈಲ್ವೆ ಪ್ರಯಾಣ ವೆಚ್ಚ ಭರಿಸಲು ಸಿದ್ಧರಿದ್ದೇವೆ. ದಯವಿಟ್ಟು ಅವರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡಿ, ಇಲ್ಲವೇ ನಮಗೆ ಅವಕಾಶ ಮಾಡಿಕೊಡಿ. ಅವರಿಗೆ ಊಟದ ವ್ಯವಸ್ಥೆ ಮಾಡಿ, ಪ್ರಯಾಣದ ವೆಚ್ಚವನ್ನೂ ಭರಿಸಿ ಕಳುಹಿಸಿಕೊಡುತ್ತೇನೆ.'' ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

Thousands Of Migrant Workers Struggling To Get Train Tickets says DK Shivakumar

''ರೈಲ್ವೆ ಟಿಕೆಟ್ ಹಣವನ್ನು ನೀವೇ ಕೊಡಬೇಕು ಎಂದು ವಲಸೆ ಕಾರ್ಮಿಕರಿಗೆ ಸಂದೇಶ ಹೋಗಿದೆಯಂತೆ. ಅವರ ಪ್ರಯಾಣಕ್ಕೆ ಹಣ ನಾವು ಕೊಡಲು ಸಿದ್ಧ ಎಂದರೂ, ಯಾಕೆ ಈ ರೀತಿ ಮಾಡುತ್ತಿದ್ದೀರಿ. ನಮ್ಮ ರಾಜ್ಯದ ಮರಿಯಾದೆ ಹೋಗುತ್ತಿದೆ.'' ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಲಸೆ ಕಾರ್ಮಿಕರಿರುವ ಅರಮನೆ ಮೈದಾನಕ್ಕೆ ಅಧಿಕಾರಿಗಳನ್ನು ಕಳುಹಿಸಿ, ವ್ಯವಸ್ಥೆ ಮಾಡಿ. ವಲಸೆ ಕಾರ್ಮಿಕರು ಮತ್ತೆ ನಮ್ಮ ರಾಜ್ಯಕ್ಕೆ ಬರುವ ಹಾಗೆ ಮಾಡಿ ಎಂದು ಡಿಕೆ ಶಿವಕುಮಾರ್ ವಿನಂತಿ ಮಾಡಿದ್ದಾರೆ.

English summary
KPCC president DK Shivakumar met migrant workers in in palace grounds bengaluru. He says thousands of migrant workers struggling to get train tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X