ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಸೋಲಿಗೆ ಕಾರಣರಾದವರಿಗೆ ಪಾಠ ಕಲಿಸಬೇಕು: ಎಂಟಿಬಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದ ಪಕ್ಷ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ನಿವಾಸದ ಬಳಿ ಮಾತನಾಡಿದ ಎಂಟಿಬಿ ನಾಗರಾಜು ಅವರು, ನನ್ನ ಕ್ಷೇತ್ರದಲ್ಲಿ ಕೆಲವು ಕಲೆಸಗಳು ಆಗಬೇಕು ಅದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ಬಂದಿದ್ದೆ ಎಂದರು.

ಎಲ್ಲಿದ್ದೀರಾ ಮುಖ್ಯಮಂತ್ರಿ ಯಡಿಯೂರಪ್ಪ ಎಂದಿದ್ದೇಕೆ ಈ ಕಾಂಗ್ರೆಸ್ ನಾಯಕ?ಎಲ್ಲಿದ್ದೀರಾ ಮುಖ್ಯಮಂತ್ರಿ ಯಡಿಯೂರಪ್ಪ ಎಂದಿದ್ದೇಕೆ ಈ ಕಾಂಗ್ರೆಸ್ ನಾಯಕ?

ನನ್ನ ಸೋಲಿಗೆ ಶರತ್ ಬಚ್ಚೇಗೌಡ ಹಾಗೂ ಅವರ ತಂದೆ, ಸಂಸದ ಬಿ.ಎನ್.ಬಚ್ಚೇಗೌಡ ನೇರ ಕಾರಣ, ಅವರ ವಿರುದ್ದ ಪಕ್ಷ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದರು.

Those Who Caused My Defeat Should Be Teach A lesson: MTB

ಉಪ ಚುನಾವಣೆಗೂ ಮೊದಲು ಒಪ್ಪಿ ನಂತರ, ಶರತ್ ಬಚ್ಚೇಗೌಡ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಹೊಣೆ ಎಂದರು. ಪಕ್ಷ ವಿರೋಧಿ ಕೆಲಸ ಮಾಡುವವರಿಗೆ ತಕ್ಕ ಶಾಸ್ತಿ ಮಾಡಬೇಕು. ನನಗೂ ಮಂತ್ರಿ ಆಗಬೇಕು ಆಸೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂತ್ರಿಯಾಗಲು ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ ಎಂದು ಪ್ರಶ್ನಿಸಿದರು. ನಮ್ಮ ಪರಿಸ್ಥಿತಿ ಸಿಎಂ ಅವರಿಗೆ ಗೊತ್ತಿದೆ. ಸಚಿವ ಸ್ಥಾನ ಕೊಡುವುದರ ಬಗ್ಗೆ ಯಡಿಯೂರಪ್ಪ ಅವರು ನನಗೆ ಯಾವುದೇ ಭರವಸೆ ನೀಡಿಲ್ಲ, ಅವರು ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧ ಎಂದು ಹೇಳಿದರು.

ಡಿಸಿಎಂ ಸ್ಥಾನ, ಆ ಗೊಂದಲ ಬೇಡವೇ ಬೇಡ ಎಂದ ರೇಣುಕಾಚಾರ್ಯಡಿಸಿಎಂ ಸ್ಥಾನ, ಆ ಗೊಂದಲ ಬೇಡವೇ ಬೇಡ ಎಂದ ರೇಣುಕಾಚಾರ್ಯ

ಸದ್ಯ ಹೈಕಮಾಂಡ್ ನ ಯಾವ ನಾಯಕರನ್ನು ಭೇಟಿ ಮಾಡುವುದಿಲ್ಲ, ರಾಜ್ಯ ನಾಯಕರೇ ಎಲ್ಲ ತೀರ್ಮಾನ ಮಾಡಲಿ, ನಾವಂತೂ ಕೇಳುವುದನ್ನು ಕೇಳಿದ್ದೇವೆ ಮುಂದಿನ ನಿರ್ಧಾರ ಅವರದ್ದು ಎಂದರು. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ನಾನೇನು ಶಾಸಕನಲ್ಲ ಎಂದರು.

English summary
Disqualified MLA MTB Nagaraju outraged party opponents The right lesson should be taught who were responsible for my defeat in the by-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X