ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫುಟ್ಬಾಲ್ ಮೈದಾನದ ಕಾಲು ಭಾಗ ಮುಚ್ಚುತ್ತೆ 'ಟಿ ಶರ್ಟ್'

By Kiran B Hegde
|
Google Oneindia Kannada News

ಬೆಂಗಳೂರು, ನ. 22: ಗಿನ್ನಿಸ್ ರೆಕಾರ್ಡ್‌ಗಾಗಿ ಏನೇನೋ ಮಾಡುತ್ತಿರುತ್ತಾರೆ. ಅಸಾಧ್ಯವಾದುದನ್ನು ಸಾಧಿಸಲು ವರ್ಷಾನುಗಟ್ಟಲೆ ಶ್ರಮ ವ್ಯಯಿಸುತ್ತಾರೆ. ಕೊನೆಗೊಂದು ದಿನ ಸಾಧಿಸಿ ತೃಪ್ತಿಯ ನಗೆ ಬೀರುತ್ತಾರೆ.

ಫೇರ್‌ಟ್ರೇಡ್ ಸಂಸ್ಥೆಯು ಬೆಂಗಳೂರಿನ ಸಹಕಾರ ನಗರದ ಶಾಂತಿವನದಲ್ಲಿರುವ ಟ್ರಿಯೋ ವರ್ಡ್ ಸ್ಕೂಲ್‌ನಲ್ಲಿ ಲಿಮ್ಕಾ ದಾಖಲೆಗೋಸ್ಕರ ದೇಶದ ಅತಿ ದೊಡ್ಡ ಟಿ ಶರ್ಟ್ ಬಿಡುಗಡೆ ಮಾಡಿದೆ. ತನ್ನನ್ನು ಸಣ್ಣ ರೈತರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಕಂಪನಿ ಎಂದು ಫೇರ್‌ಡ್ರೇಡ್ ಹೇಳಿಕೊಂಡಿದೆ. ಹತ್ತಿ ಬೆಳೆಯುವ ರೈತರತ್ತ ನಗರದ ಜನರನ್ನು ಸೆಳೆಯುವುದೇ ನಮ್ಮ ಉದ್ದೇಶ ಎಂದು ಸಂಸ್ಥೆ ತಿಳಿಸಿದೆ.

tshirt

ಖ್ಯಾತ ಡಿಸೈನರ್ ದೀಪಿಕಾ ಗೋವಿಂದ ಈ ಟಿ ಶರ್ಟ್ ಉದ್ಘಾಟಿಸಿದರು. ಈ ಶರ್ಟ್‌ನ್ನು ನವೆಂಬರ್ 23ರಿಂದ ಫೋನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಪ್ರದರ್ಶಿಸಲಾಗುವುದು. ಆಸಕ್ತರು ಬಂದು ನೋಡಬಹುದು ಎಂದು ಫೇರ್‌ಟ್ರೇಡ್ ಸಂಸ್ಥೆಯು ತಿಳಿಸಿದೆ. ಈ ಟಿ ಶರ್ಟ್ ಒಂದು ಫುಟ್‌ಬಾಲ್ ಮೈದಾನದ ಸುಮಾರು ಶೇ. 25 ಜಾಗದಷ್ಟು ದೊಡ್ಡದಾಗಿದೆ.

tshirt1

ಟ್ರಿಯೋ ವರ್ಡ್ ಸ್ಕೂಲ್‌ನಲ್ಲಿ ನ. 21ರಿಂದ 23ರ ವರೆಗೆ ಏರ್ಪಡಿಸಿರುವ ದೇಶದ ಪ್ರಥಮ ಫಸ್ಟ್‌ಟ್ರೇಡ್ ವೀಕೆಂಡ್ ಕಾರ್ಯಕ್ರಮದ ಅಂಗವಾಗಿ ಈ ಟಿ ಶರ್ಟ್ ತಯಾರಿಸಲಾಗಿದೆ.

English summary
Fairtrade India, an organization unveiled India’s largest T-shirt at Trio World School. well-known designer Deepika Govind unveiled the T-shirt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X