ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 3ನೇ ಅಲೆ; ಬೆಂಗಳೂರಿಗೆ ಬೇಕು 4,500 ಐಸಿಯು ಬೆಡ್

|
Google Oneindia Kannada News

ಬೆಂಗಳೂರು, ಜೂನ್ 16; ಬೆಂಗಳೂರಿನಲ್ಲಿ ಕೋವಿಡ್ 2ನೇ ಅಲೆ ಅಬ್ಬರ ಕಡಿಮೆಯಾಗಿದೆ. ನಗರದಲ್ಲಿನ ಹೊಸ ಪ್ರಕರಣಗಳ ಸಂಖ್ಯೆ 1000ಕ್ಕೆ ಇಳಿಕೆಯಾಗಿದೆ.

ಅಕ್ಟೋಬರ್ ಅಥವ ನವೆಂಬರ್‌ನಲ್ಲಿ ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹರಡಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. 3ನೇ ಅಲೆ ತಡೆಗೆ ಸರ್ಕಾರ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ದೆಹಲಿಯಲ್ಲಿ ಕೊರೊನಾ 3ನೇ ಅಲೆ ಸಾಧ್ಯತೆ: ಸರ್ಕಾರದಿಂದ ಸಿದ್ಧತೆದೆಹಲಿಯಲ್ಲಿ ಕೊರೊನಾ 3ನೇ ಅಲೆ ಸಾಧ್ಯತೆ: ಸರ್ಕಾರದಿಂದ ಸಿದ್ಧತೆ

ಕೋವಿಡ್ 3ನೇ ಅಲೆ ಎದುರಿಸಲು ನಗರದಲ್ಲಿ 4,500 ಐಸಿಯು ಬೆಡ್‌ಗಳ ಅಗತ್ಯವಿದೆ ಎಂದು ಬಿಬಿಎಂಪಿ ಹೇಳಿದೆ. ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, ನಗರದಲ್ಲಿ ಈಗ ಬೆಡ್‌ಗಳಿಗಾಗಿ ಬೇಡಿಕೆ ಕುಸಿದಿದೆ.

ಲಾಕ್‌ಡೌನ್; 4.54 ಕೋಟಿ ದಂಡ ಕಟ್ಟಿದ ಬೆಂಗಳೂರು ಜನರು! ಲಾಕ್‌ಡೌನ್; 4.54 ಕೋಟಿ ದಂಡ ಕಟ್ಟಿದ ಬೆಂಗಳೂರು ಜನರು!

Third Covid Wave BBMP Need 4,500 ICU Bed

ಮಂಗಳವಾರ ರಾತ್ರಿ 9 ಗಂಟೆಯ ಮಾಹಿತಿಯಂತೆ ಬೆಂಗಳೂರು ನಗರದಲ್ಲಿ ಸರ್ಕಾರಿ ಕೋಟಾದ 309 ಐಸಿಯು, 229 ವೆಂಟಿಲೇಟರ್‌ ಬೆಡ್‌ಗಳು ಲಭ್ಯವಿದ್ದವು.

ಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮಕೋವಿಡ್ 3ನೇ ಅಲೆ: 25 ಲಕ್ಷ ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ತಜ್ಞರ ಕೊರತೆ, ಪೂರಕ ಕ್ರಮ

"ನಮ್ಮ ಬಳಿ ಪ್ರಸ್ತುತ 1,300 ಐಸಿಯು ಬೆಡ್ ಲಭ್ಯವಿದೆ. ಕೋವಿಡ್ 3ನೇ ಅಲೆ ಎದುರಿಸಲು ಸುಮಾರು 4,500 ಬೆಡ್‌ಗಳ ಅಗತ್ಯವಿದೆ" ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಹೇಳಿದ್ದಾರೆ.

ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ಪೆಡ್ರಿಯಾಟ್ರಿಕ್ ಬೆಡ್‌ಗಳ ವ್ಯವಸ್ಥೆ ಇಲ್ಲ.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಕೋಟಾದ ಪೆಡ್ರಿಯಾಟ್ರಿಕ್ ಬೆಡ್‌ಗಳಿಲ್ಲ. ಜಿಲ್ಲೆಗಳು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗುವುದು ಅನಿವಾರ್ಯ.

ರಾಮನಗರ, ಬೀದರ್, ವಿಜಯಪುರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಗದಗ, ಕೊಡಗು, ಕೋಲಾರ, ಮಂಡ್ಯ, ತುಮಕೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದಂಕಿಯ ಬೆಡ್‌ಗಳಿ ಲಭ್ಯವಿದೆ.

Recommended Video

ಮುಂಜಾಗ್ರತೆ ಕ್ರಮವಾಗಿ ಮಕ್ಕಳಿಗೆ ಬೆಡ್ ಹಾಗೂ ವೆಂಟಿ ಲೆಟರ್ ವ್ಯವಸ್ಥೆ ಮಾಡಲಾಗಿದೆ!

ಕೋವಿಡ್ 3ನೇ ಅಲೆ ಎಚ್ಚರಿಕೆ ಹಿನ್ನಲೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂ. ಪ್ರಕಾಶ್ ಪಾಟೀಲ್ ಹೇಳಿದ್ದಾರೆ.

English summary
Covid 3rd wave expected to hit the Karnataka by October or November. BBMP said that city need 4,500 ICU bed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X