ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಲೇಖನ: ಪರೀಕ್ಷೆಯಲ್ಲಿ ಫೇಲಾದರೂ ಜೀವನದಲ್ಲಿ ಗೆಲ್ಲಬಹುದು!

ಮಕ್ಕಳಿಗೆ ಎಸ್ ಎಸ್ ಎಲ್ ಸಿ- ಪಿಯುಸಿ ಪರೀಕ್ಷೆಯಲ್ಲಿ ಟಾಪರ್ ಆದವರ ಕತೆಯನ್ನಷ್ಟೇ ಹೇಳುವ ತಂದೆ-ತಾಯಿ-ಶಿಕ್ಷಕರು, ಈ ಪರೀಕ್ಷೆಗಳಲ್ಲಿ ಫೇಲಾಗಿಯೂ ಇಂದು ದೇಶದದ ಕೋಟಿಗಟ್ಟಲೆ ಜನರ ಅಭಿಮಾನ ಪಡೆದು, ಸಾಧನೆ ಮಾಡಿದವರ ಕತೆಯನ್ನೂ ಹೇಳಲಿ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಮೇ 10: ನಾಳೆ (ಮೇ 11) ಕರ್ನಾಟಕ ಪಿಯುಸಿ ಫಲಿತಾಂಶ ಮತ್ತು ಮೇ 12 ರಂದು ಎಸ್ ಎಸ್ ಎಲ್ ಸಿ ಫಲಿತಾಂಶ ಹೊರಬೀಳಲಿದೆ ಎಂಬ ಸುದ್ದಿಯನ್ನು ಕೇಳುತ್ತಿದ್ದಂತೆಯೇ ಹಲವು ವಿದ್ಯಾರ್ಥಿಗಳು ನಿದ್ದೆಯನ್ನೇ ಮರೆತಿದ್ದಾರೆ. ವಿದ್ಯಾರ್ಥಿಗಳು ಹೋಗಲಿ, ಅವರಿಗಿಂತ ಹೆಚ್ಚಾಗಿ ಅವರ ಪಾಲಕರೇ ತಲೆಬಿಸಿಯಲ್ಲಿರುತ್ತಾರೆ!

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಪ್ರತಿಯೊಬ್ಬ ವ್ಯಕ್ತಿಯ ಶೈಕ್ಷಣಿಕ ಬದುಕಿನ ಮುಖ್ಯಘಟ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗಂತ ಅನಿರೀಕ್ಷಿತ ಫಲಿತಾಂಶದಿಂದಾಗಿ ಸಾವನ್ನೇ ಅಪ್ಪಿಕೊಳ್ಳುವ ಮಟ್ಟಿನ ಅಚಾತುರ್ಯಗಳ ಅಗತ್ಯವಿದೆಯಾ? ಪ್ರತಿ ವರ್ಷ ಈ ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಫೇಲಾದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುವ ಸುದ್ದಿಗಳು ಬರುತ್ತವೆ.[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್ ]

ಫೇಲಾದವರಷ್ಟೇ ಅಲ್ಲದೆ, ಅಂಕ ಕಡಿಮೆ ಬಂತೆಂದೂ ಆತ್ಮಹತ್ಯೆ ಮಾಡಿಕೊಳ್ಳುವವರಿದ್ದಾರೆ. ಇಂಥ ಮಕ್ಕಳಲ್ಲಿ "ಈ ಪರೀಕ್ಷೆಗಳೇ ಬದುಕಿನ ನಿರ್ಣಾಯಕ ಪರೀಕ್ಷೆಗಳಲ್ಲ" ಎಂಬ ಅರಿವು ಮೂಡಿಸುವ ಅಗತ್ಯ ಇಂದು ಹೆಚ್ಚಿದೆ.

ಹಾಗೆ ನೋಡುವುದಕ್ಕೆ ಹೋದರೆ ಔಪಚಾರಿಕ ಶಿಕ್ಷಣದಲ್ಲಿ ಮಾಡಿದ ಸಾಧನೆಯೇ ಬದುಕಿನ ಯಶಸ್ಸಿನ ಮಾನದಂಡವಲ್ಲ. ಫಸ್ಟ್ ರ್ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬ ಬದುಕಲ್ಲಿ ಸೋಲಬಹುದು, ಶಾಲೆಯ ಮೆಟ್ಟಿಲನ್ನೇ ಹತ್ತಿರದ ಹುಡುಗ ಮುಂದೊಮ್ಮೆ ದೇಶವನ್ನೇ ಆಳಬಹುದು! [ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]

ಮಕ್ಕಳಲ್ಲಿ ಪರೀಕ್ಷೆ, ಫಲಿತಾಂಶಗಳ ಕುರಿತು ಭಯ ಹುಟ್ಟಿಸುವ ಕೆಲಸವನ್ನು ಇಂದು ಹಲವು ಪಾಲಕರು, ಶಿಕ್ಷಕರೇ ಮಾಡುತ್ತಿದ್ದಾರೆ. ಫೇಲಾದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ತಂದೆ-ತಾಯಿ, ಶಿಕ್ಷಕರ ಮೇಲಿನ ಭಯವೂ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. [ಫೆ.11ರ ಮಧ್ಯಾಹ್ನ 3 ಗಂಟೆಗೆ ಪಿಯುಸಿ 2017 ಪರೀಕ್ಷೆ ಫಲಿತಾಂಶ]

ಫೇಲಾದ ಮಕ್ಕಳಿಗೆ ಅಗತ್ಯವಿರುವುದು ಬೈಗುಳವಲ್ಲ, ನೈತಿಕ ಬೆಂಬಲ ಎಂಬುದು ಇಂದಿನ ಹಲವು ತಂದೆ-ತಾಯಿಯರಿಗೆ ಅರ್ಥವಾಗಬೇಕಿದೆ. ಮಕ್ಕಳಿಗೆ ಎಸ್ ಎಸ್ ಎಲ್ ಸಿ- ಪಿಯುಸಿ ಪರೀಕ್ಷೆಯಲ್ಲಿ ಟಾಪರ್ ಆದವರ ಕತೆಯನ್ನಷ್ಟೇ ಹೇಳುವ ತಂದೆ-ತಾಯಿ-ಶಿಕ್ಷಕರು, ಈ ಪರೀಕ್ಷೆಗಳಲ್ಲಿ ಫೇಲಾಗಿಯೂ ಇಂದು ದೇಶದದ ಕೋಟಿಗಟ್ಟಲೆ ಜನರ ಅಭಿಮಾನ ಪಡೆದು, ಸಾಧನೆ ಮಾಡಿದವರ ಕತೆಯನ್ನೂ ಹೇಳಲಿ. ಅಂಥ ಕೆಲವರ ಕತೆಯನ್ನು ನಾವೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ["ಉಳಿಯ ದ್ವೀಪ" ಉಳಿಸಲು ಹೊರಟ ಮಾದರಿ ವಿದ್ಯಾರ್ಥಿಗಳು]

ಓದದಿದ್ದರೂ ವರನಟರಾಗಲಿಲ್ಲವೇ?

ಓದದಿದ್ದರೂ ವರನಟರಾಗಲಿಲ್ಲವೇ?

ಕರ್ನಾಟಕದ ಹೆಮ್ಮೆ, ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ಡಾ.ರಾಜ್ ಕುಮಾರ್ ಓದಿದ್ದು ನಾಲ್ಕನೆಯ ತರಗತಿ ಮಾತ್ರ! ಭಾರತೀಯ ಸಿನಿಮಾ ಕ್ಷೇತ್ರದ 'ಧ್ರುವತಾರೆ'ಯಾಗಿ, 'ದೇವತಾ ಮನುಷ್ಯ'ನಾಗಿ ಕನ್ನಡಿಗರ ಆರಾಧ್ಯ ದೈವವಾಗಿ ಅವರು ಅಮರರಾಗಿದ್ದಾರೆ. [ಚಿಂತೆ ಬೇಡ, SSLC ಜೀವನ ಬದಲಿಸುವ ನಿರ್ಣಾಯಕ ಮಜಲಲ್ಲ ]

ಕಮಲ್ ಹಾಸನ್ ಓದಿದ್ದೆಷ್ಟು?

ಕಮಲ್ ಹಾಸನ್ ಓದಿದ್ದೆಷ್ಟು?

ದಕ್ಷಿಣ ಭಾರತೀಯ ಸಿನೆಮಾ ಎಂದೊಡನೆ ಮೊದಲು ನೆನಪಾಗುವ ಹೆಸರು ಕಮಲ್ ಹಾಸನ್. ತಮಿಳು, ತೆಲುಗು, ಹಿಂದಿ, ಕನ್ನಡ, ಮಲ್ಯಾಳಿ ಭಾಷೆಗಳಲ್ಲಿ ನಟಿಸಿರುವ ಕಮಲ್ ಬಾಲ್ಯ ಕಲಾವಿದರಾಗಿದ್ದಾಗಲೇ ರಾಷ್ಟ್ರಪತಿ ಪದಕವನ್ನೂ ಪಡೆದಿದ್ದರು. ಆದರೆ ಅವರು ಓದಿದ್ದೆಷ್ಟು ಗೊತ್ತಾ? ಎಂಟನೇ ತರಗತಿಯ ನಂತರ ಅವರು ಶಾಲೆಗೇ ಹೋಗಿರಲಿಲ್ಲ! [ರಿಯೋ ಪರೀಕ್ಷೆ ನಂತರ ಮತ್ತೊಂದು ಪರೀಕ್ಷೆಗೆ ದೀಪಾ ಸಜ್ಜು]

ರಾಷ್ಟ್ರಪ್ರಶಸ್ತಿ ವಿಜೇತೆ ಪಿಯುಸಿ ಪಾಸಾಗಿರಲಿಲ್ಲ!

ರಾಷ್ಟ್ರಪ್ರಶಸ್ತಿ ವಿಜೇತೆ ಪಿಯುಸಿ ಪಾಸಾಗಿರಲಿಲ್ಲ!

ಬಾಲಿವುಡ್ ನ ಕ್ವೀನ್ ಎಂದೇ ಪ್ರಖ್ಯಾತಿ ಪಡೆದ ಕಂಗನಾ ರನೌತ್ ದ್ವಿತೀಯ ಪಿಯುಸಿಯ ರಸಾಯನ ಶಾಸ್ತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಂತೆ. ತನ್ನ ಬದುಕು ಬೇರೆಲ್ಲೋ ಇದೆ ಎಂಬುದು ಆಕೆಗೆ ಅರ್ಥವಾಗುತ್ತಿದ್ದಂತೆಯೇ ಕಂಗನಾ ಮುಖಮಾಡಿದ್ದು ಚಿತ್ರರಂಗದತ್ತ. ಕ್ವೀನ್, ತನು ವೆಡ್ಸ್ ಮನು- 2 ಚಿತ್ರಗಳಿಗೆ ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಕಂಗನಾ ಹೆಸರಲ್ಲೀಗ ಮೂರು ರಾಷ್ಟ್ರ ಪ್ರಶಸ್ತಿಗಳಿವೆ. [ಯುಪಿಎಸ್‌ಸಿ : ನಾಲ್ಕೂವರೆ ಅಡಿಯ ಇರಾಳ ಎತ್ತರದ ಸಾಧನೆ]

ಬಾರ್ಬಿ ಡಾಲ್ ಕತ್ರಿನಾ

ಬಾರ್ಬಿ ಡಾಲ್ ಕತ್ರಿನಾ

ಬಾಲಿವುಡ್ ನ ಬಾರ್ಬಿ ಡಾಲ್ ಎಂದೇ ಖ್ಯಾತರಾದ ಕತ್ರಿನಾ ಕೈಫ್ ಗೆ ಇಂದು ದೇಶ-ವಿದೇಶಗಳಲ್ಲಿ ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಆದರೆ ವೈಯಕ್ತಿಕ ಕಾರಣದಿಂದಾಗಿ ಅವರಿಗೆ ಶಾಲೆಗೆ ಹೋಗುವುದಕ್ಕೇ ಸಾಧ್ಯವಾಗದೆ, ತಮ್ಮ 14 ನೇ ವಯಸ್ಸಿನಲ್ಲೇ ಅವರು ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಡಬೇಕಾಯಿತು ಎಂಬುದು ನಿಮಗೇನಾದರೂ ಗೊತ್ತಾ? [ಮೈಸೂರಿನ ಆಟೋ ಚಾಲಕನ ಮಗಳಿಗೆ 12 ಚಿನ್ನದ ಪದಕ]

ಕೃಷ್ಣ ಸುಂದರಿ ಕಾಜಲ್

ಕೃಷ್ಣ ಸುಂದರಿ ಕಾಜಲ್

ಬಾಲಿವುಡ್ ನ ಕೃಷ್ಣ ಸುಂದರಿ ಕಾಜೋಲ್ ಸಿನಿಮಾ ಕ್ಷೇತ್ರಕ್ಕೆ ಬರುವಾಗ ಆಕೆಯ ವಯಸ್ಸು 16. ಉತ್ತಮ ಅವಕಾಶವನ್ನು ಕೈಚೆಲ್ಲಲು ಇಷ್ಟವಿಲ್ಲದೆ ಆಕೆ ತಮ್ಮ ಓದನ್ನು ಅಲ್ಲಿಗೇ ನಿಲ್ಲಿಸಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಇಂದು ಕಾಜೋಲ್ ಅಭಿಮಾನಿಗಳನ್ನು ಲೆಕ್ಕ ಇಟ್ಟವರ್ಯಾರು? [ಎಸ್ಎಸ್ಎಲ್‌ಸಿಯಲ್ಲಿ ಅವಳಿ ಸಹೋದರಿಯರ ಸಾಧನೆ]

ಸಂಗೀತ ಸಂಯೋಜಕ ಗೋಪಿ ಸುಂದರ್

ಸಂಗೀತ ಸಂಯೋಜಕ ಗೋಪಿ ಸುಂದರ್

ಪ್ರಸಿದ್ಧ ಸಂಗೀತ ಸಂಯೋಜಕ ಗೋಪಿ ಸುಂದರ್ ಗೆ ಎಸ್ ಎಸ್ ಎಲ್ ಸಿ ಯಲ್ಲಿ ಬಂದ ಒಟ್ಟು ಅಂಕ 200! ಎಸ್ ಎಸ್ ಎಲ್ ಸಿಯಲ್ಲಿ ತಾವು ಫೇಲ್ ಆಗಿದ್ದನ್ನು ಎಲ್ಲರೆದುರಲ್ಲೂ ಅಳುಕಿಲ್ಲದೆ ಹೇಳಿಕೊಳ್ಳುವ ಗೋಪಿ, 5000 ಕ್ಕೂ ಹೆಚ್ಚು ಜಾಹೀರಾತು ಕಂಪೆನಿಗಳಿಗೆ ಸಂಗೀತ ಸಂಯೋಜನೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಇವರಿಗೆ ರಾಷ್ಟ್ರ ಪ್ರಶಸ್ತಿಯೂ ಲಭಿಸಿದೆ.

English summary
Karnataka PUC and SSLC results will be declared on May 11th and 12th respectively. Here are the few examples who failed in SSLC and PUC examination but achieved a lot in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X