ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಂಗವೇದಿಕೆಯ ಸಿಂಹನಿಗೆ ಟ್ವೀಟ್ ನಮನ

By Mahesh
|
Google Oneindia Kannada News

ರಂಗಭೂಮಿ, ಟಿ.ವಿ., ಸಿನಿಮಾ, ಮೂರು ರಂಗ ಕ್ಷೇತ್ರದಲ್ಲೂ ಅಚ್ಚಳಿಯದ ಛಾಪು ಮೂಡಿಸಿದ ಚನ್ನಪಟ್ಟಣ ರಾಮಸ್ವಾಮಿ ಶಾಸ್ತ್ರಿ ಸಿಂಹ ಅವರ ಅಗಲಿಕೆಯ ನೋವನ್ನು ಭರಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಗಣ್ಯರು, ಸಿನಿಮಾ ತಾರೆಯರು ಹಾಗೂ ಸಿ.ಆರ್ ಸಿಂಹ ಅವರ ಅಭಿಮಾನಿಗಳು ದುಃಖ ತೋಡಿಕೊಂಡಿದ್ದಾರೆ.

ಸಂಸ್ಕಾರ, ಸಂಕಲ್ಪ, ಚಿತೆಗೂ ಚಿಂತೆ, ಅನುರೂಪ, ಬರ, ಕಿರುತೆರೆಯಲ್ಲಿ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್, ಗೊರೂರು ರಾಮಸ್ವಾಮಿ ಸರಣಿ, ವೇದಿಕೆ ಅಡಿಯಲ್ಲಿ ಬಂದ ಟಿಪಿಕಲ್ ಕೈಲಾಸಂ ಸೇರಿದಂತೆ ಸಾಹಿತಿ/ನಾಟಕಕಾರರ ಸಾಹಿತ್ಯ ಜೀವನವನ್ನಾಧರಿಸಿದ ಪ್ರದರ್ಶನಗಳಲ್ಲಿ ಟಿಪಿಕಲ್ ಕೈಲಾಸಂ, ರಸ ಋಷಿ, ಗೊರೂರು ಮುಖ್ಯ ಪಾತ್ರಧಾರಿಯಾಗಿ ಮಿಂಚಿದ್ದನ್ನು ಮರೆಯಲು ಸಾಧ್ಯವಿಲ್ಲ.


ಸಿ.ಆರ್ ಸಿಂಹ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡು ಖ್ಯಾತ ಪತ್ರಕರ್ತ ಜೋಗಿ ಅಲಿಯಾಸ್ ಗಿರೀಶ್ ರಾವ್ ಅವರು ಫೇಸ್ ಬುಕ್ ಪುಟದಲ್ಲಿ ಬರೆದಿದ್ದು ಹೀಗೆ : 'ತುಘಲಕ್, ಟಿಪಿ ಕೈಲಾಸಂ, ಕುವೆಂಪು, ಬಿಜ್ಜಳ- ಹೀಗೆ ಅದೆಷ್ಟು ರೂಪಗಳಲ್ಲಿ ಕಾಣಿಸಿಕೊಂಡರು ಅವರು. ಅವರ ಮಾತು, ಸ್ನೇಹ ಎಲ್ಲವೂ ಹಿತವಾಗಿತ್ತು. ವೈಯನ್ಕೆ ಸತ್ಸಂಗದಿಂದ ಇವರ ಸ್ನೇಹವೂ ದೊರಕಿತು. ಅವರ ಗುಹೆ, ಅಲ್ಲಿದ್ದ ಆಳೆತ್ತರದ ನಾಯಿ, ಅವರ ಫಿಯೆಟ್ ಕಾರಲ್ಲಿ ಓಡಾಡಿದ್ದು, ಹೊಸ ವರುಷದ ಸಂಭ್ರಮವನ್ನು ಅವರ ಗುಹೆಯಲ್ಲಿ ಆಚರಿಸಿದ್ದು- ಯಾವುದನ್ನೂ ಮರೆಯಲಿಕ್ಕಾಗದು. ಸಿಂಹ ಅವರೊಬ್ಬರೇ.'

ಸಿ.ಆರ್ ಸಿಂಹ ಅಗಲಿಕೆಗೆ ಟ್ವೀಟ್ ನಮನ

ಸಿ.ಆರ್ ಸಿಂಹ ಅಗಲಿಕೆಗೆ ಟ್ವೀಟ್ ನಮನ

ರಂಗ ವೇದಿಕೆ ಯ ಸಿಂಹನಿಗೆ ಟ್ವೀಟ್ ನಮನ, ಫೇಸ್ ಬುಕ್ ವಾಲ್ ಗಳ ಮೂಲಕ ಅನೇಕರು ಸಂದೇಶಗಳನ್ನು ಹಾಕಿ ಸ್ಮರಿಸಿಕೊಂಡಿದ್ದಾರೆ.

ಸಿಟಿ ರವಿ ಅವರಿಂದ ಸಿಂಹ ಸ್ಮರಣೆ

ಬಿಜೆಪಿ ನಾಯಕ ಸಿ.ಟಿ ರವಿ ಅವರಿಂದ ಮನರಂಜನಾ ಕ್ಷೇತ್ರದ ದಿಗ್ಗಜ ಸಿ.ಆರ್ ಸಿಂಹ ಅವರ ಸ್ಮರಣೆ

ಸಿಂಹ ಸರಳ ಸುಂದರ ವ್ಯಕ್ತಿ: ಕಿಚ್ಚ ಸುದೀಪ್

ಸಿಂಹ ಸರಳ ಸುಂದರ ವ್ಯಕ್ತಿಯಾಗಿದ್ದರು, ಅವರ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದ ನಟ ಕಿಚ್ಚ ಸುದೀಪ್

ಬಿಜೆಪಿ ಕರ್ನಾಟಕದಿಂದ ಸಂತಾಪ

ಸಿ.ಆರ್ ಸಿಂಹ ಅವರ ನಿಧನಕ್ಕೆ ಬಿಜೆಪಿ ಕರ್ನಾಟಕದಿಂದ ಸಂತಾಪ ಸೂಚಕ ಸಂದೇಶ

ಕಲಾವಿದ ವೆಂಕಟೇಶ್ ಪ್ರಸಾದ್ ದುಃಖ

ಕಲಾವಿದ ವೆಂಕಟೇಶ್ ಪ್ರಸಾದ್ ದುಃಖ

ಕೇವಲ 5 ತಿಂಗಳ ಹಿಂದೆ ಸಿಂಹರವರನ್ನು ಅವರ ಮನೆಯಲ್ಲಿ ಭೇಟಿಯಾದಾಗ ತೆಗೆದ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುತ್ತಾ..ಕನ್ನಡ ರಂಗಭೂಮಿಯ ಶ್ರೇಷ್ಟ ನಟ...ಬೇಗ ಹುಷಾರಾಗಿ ನಮ್ಮ 'ತುಘಲಕ್' ನಾಟಕ ನೋಡಲು ಬರುತ್ತೇನೆ ಎಂದಿದ್ದರು...ನಾನು 'ತುಘಲಕ್' ಪಾತ್ರ ಮಾಡುತ್ತಿದ್ದೇನೆ ಎಂದಾಗ ಖುಷಿಯಿಂದ ತುಂಬು ಪ್ರೀತಿಯಿಂದ ಬೆನ್ನು ತಟ್ಟಿದ್ದರು....ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಾರೆಂದು ಗೊತ್ತಾಗಲಿಲ್ಲ...ಒಬ್ಬ ಅದ್ಭುತ ನಟನನ್ನು , ಅದ್ಭುತ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ರಂಗ ಕಲಾವಿದ ವೆಂಕಟೇಶ್ ಪ್ರಸಾದ್ ದುಃಖ ತೋಡಿಕೊಂಡಿದ್ದಾರೆ.

ನಟ, ಸಂಭಾವಿತ ವ್ಯಕ್ತಿ ಸಿಂಹ ನಿಧನಕ್ಕೆ ಕಂಬನಿ

ನಟ, ಸಂಭಾವಿತ ವ್ಯಕ್ತಿ ಸಿಂಹ ನಿಧನಕ್ಕೆ ಸಾರ್ವಜನಿಕರಿಂದ ಕಂಬನಿ

ಸಿಂಹ ಅವರ ನಟನೆ ಸ್ಮರಿಸಿದ ಅಭಿಮಾನಿ

ಎಂಎಸ್ ಸತ್ಯುನಿರ್ದೇಶನದ ಬರ ಚಿತ್ರದಲ್ಲಿ ಸಿಆರ್ ಸಿಂಹ ಅವರ ನಟನೆ ಸ್ಮರಿಸಿದ ಅಭಿಮಾನಿ

ಸಿಂಹ ನಿಧನದ ಬಗ್ಗೆ ಆಶಾ ವಿಶ್ವನಾಥ್

ನಟ, ರಂಗ ಕಲಾವಿದ ಸಿಆರ್ ಸಿಂಹ ನಿಧನದ ಬಗ್ಗೆ ಲೇಖಕಿ ಆಶಾ ವಿಶ್ವನಾಥ್

ರಂಗಭೂಮಿಯ ಸಿಂಹ ಬಗ್ಗೆ ಆರ್ ಜೆ ಪ್ರದೀಪ

ರಂಗಭೂಮಿಯ ನಿಜವಾದ ಸಿಂಹ ಎಂದ ನಿರ್ದೇಶಕ, ಎಫ್ ಎಂ ವಾಹಿನಿ ಆರ್ ಜೆ ಪ್ರದೀಪ

ಹಿರಿಯ ನಟ ಸಿ.ಆರ್ ಸಿಂಹ ನಿಧನಕ್ಕೆ ನಟಿ ಕಾರುಣ್ಯ ಸಂತಾಪ

ಹಿರಿಯ ನಟ ಸಿ.ಆರ್ ಸಿಂಹ ನಿಧನಕ್ಕೆ ನಟಿ ಕಾರುಣ್ಯ ಸಂತಾಪ

English summary
Public took to social media to express their condolences and remember Indian actor, director, dramatist and a playwright C. R. Simha who passed away today (Feb.28) in Bangalore. He is best known for his work in Kannada films and for his work in stage shows
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X