ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯ, ಕಾರಣಗಳೇನು?

|
Google Oneindia Kannada News

ಬೆಂಗಳೂರು, ಜೂನ್ 18: ನಗರದ ಈ ವೃತ್ತಗಳಲ್ಲಿ ಅತಿ ಹೆಚ್ಚು ಮಾಲಿನ್ಯವಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ವರದಿ ಹೇಳಿದೆ.

ಇದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಕೂಡ ಹೆಚ್ಚಾಗಲಿವೆ ಎಂದು ತಿಳಿಸಿದೆ.ನಗರದಲ್ಲಿ ದಿನನಿತ್ಯ ರಸ್ತೆ ಅಗಲೀಕರಣ, ನೀರಿನ ಪೈಪ್ ಅಳವಡಿಕೆ, ಒಳಚರಂಡಿ ಕಾಮಗಾರಿಗಳು ಹೀಗೆ ಅನೇಕ ಕಾರ್ಯಗಳಿಗಾಗಿ ರಸ್ತೆಯನ್ನು ಅಗೆಯುತ್ತಲೇ ಇರುತ್ತಾರೆ ಇದರಿಂದಲೂ ಮಾಲಿನ್ಯ ಉಂಟಾಗುತ್ತಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ ವಾಯುಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದ ನಿರ್ಲಕ್ಷ್ಯ: ಕಾದಿದೆ ಅಪಾಯ

ಇನ್ನೊಂದೆಡೆ ಮರಗಳನ್ನು ಕಡಿಯುವುದು, ವಾಹನಗಳ ಸಂಖ್ಯೆ ಹೆಚ್ಚಳವೂ ಇನ್ನೊಂದು ರೀತಿಯ ಕಾರಣವಾಗಿದೆ. ನಗರ ಸಂಚಾರ ಪೊಲೀಸರು ಒಟ್ಟು 10 ವೃತ್ತಗಳನ್ನು ಗುರುತಿಸಿದ್ದಾರೆ. ಈ ವೃತ್ತಗಳಲ್ಲಿ ಹೆಚ್ಚು ಸಮಯ ನಿಂತರೆ ಶ್ವಾಸಕೋಶ ಕಾಯಿಲೆಗಳು ಬರುವುದು ಗ್ಯಾರಂಟಿ ಎಂದು ಸಮೀಕ್ಷೆ ತಿಳಿಸಿದೆ.

ಸಂಶೋಧನೆ ಹೇಳಿದ ವೃತ್ತಗಳು ಯಾವುವು?

ಸಂಶೋಧನೆ ಹೇಳಿದ ವೃತ್ತಗಳು ಯಾವುವು?

ಮೇಖ್ರಿ ವೃತ್ತ, ಮೈಸೂರು ವೃತ್ತ , ಟಿನ್ ಫ್ಯಾಕ್ಟರಿ, ಸಿಲ್ಕ್‌ಬೋರ್ಡ್, ಜಾಲಹಳ್ಳಿ ಕ್ರಾಸಿನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ್ದ ರಾಷ್ಟ್ರೀಯ ಮಿತಿಗಿಂತ ಹೆಚ್ಚು ವಾಯುಮಾಲಿನ್ಯ ಕಂಡು ಬಂದಿದೆ.

ಅಧ್ಯಯನ ಆರಂಭವಾಗಿದ್ದು ಯಾವಾಗ?

ಅಧ್ಯಯನ ಆರಂಭವಾಗಿದ್ದು ಯಾವಾಗ?

ಈ ವೃತ್ತಗಳಲ್ಲಿ 2018ರ ಫೆಬ್ರವರಿಯಿಂದ ಇಲ್ಲಿಯವರೆಗೆ ಅಧ್ಯಯನ ನಡೆಸಲಾಗಿದೆ. ಪಿಎಂ-10 ಧೂಳಿನ ಕಣ ಒಂದು ಸಾವಿರ ಲೀಟರ್ ಗಾಳಿಯಲ್ಲಿ 100 ಮೈಕ್ರೋ ಗ್ರಾಂ ಮೀರಬಾರದು. ಈ ರಸ್ತೆಗಳಲ್ಲಿ ಮಿತಿ ಮೀರಿದ ವಾಯು ಮಾಲಿನ್ಯವಿದೆ. ಈ ರಸ್ತೆಗಳಲ್ಲಿ ಹೆಚ್ಚು ಸಮಯ ನಿಂತರೆ ಶ್ವಾಸಕೋಶಕ್ಕೆ ಧೂಳಿನ ಕಣ ಪ್ರವೇಶಿಸಿ ತೊಂದರೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಪರಿಸರ ಸಮ್ಮತಿ ಪಡೆಯಲು ಮಂತ್ರಿಟೆಕ್‌ಝೋನ್‌ಗೆ ಎನ್‌ಜಿಟಿ ಸೂಚನೆ ಪರಿಸರ ಸಮ್ಮತಿ ಪಡೆಯಲು ಮಂತ್ರಿಟೆಕ್‌ಝೋನ್‌ಗೆ ಎನ್‌ಜಿಟಿ ಸೂಚನೆ

ಎಲ್ಲೆಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದೆ?

ಎಲ್ಲೆಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಿದೆ?

ಟಿನ್ ಫ್ಯಾಕ್ಟರಿ-145 ಮೈಕ್ರೋಗ್ರಾಂ
ಸಿಲ್ಕ್‌ಬೋರ್ಡ್-146.7 ಮೈಕ್ರೋ ಗ್ರಾಂ
ಮೇಖ್ರಿ ವೃತ್ತ-138.7 ಮೈಕ್ರೋ ಗ್ರಾಂ
ಮೈಸೂರು ರಸ್ತೆ-103.1 ಮೈಕ್ರೋ ಗ್ರಾಂ
ಜಾಲಹಳ್ಳಿ ಕ್ರಾಸ್-100.1 ಮೈಕ್ರೋಗ್ರಾಂ ಇದೆ.

ಮೈಸೂರು ರಸ್ತೆಯಲ್ಲಿ ಮೆಟ್ರೋದಿಂದಾಗಿ ಮಾಲಿನ್ಯ ಕಡಿಮೆ

ಮೈಸೂರು ರಸ್ತೆಯಲ್ಲಿ ಮೆಟ್ರೋದಿಂದಾಗಿ ಮಾಲಿನ್ಯ ಕಡಿಮೆ

ಮೈಸೂರು ರಸ್ತೆಯಲ್ಲಿ ನಮ್ಮ ಮೆಟ್ರೋದಿಂದಾಗಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ.ವಾಯುಮಾಲಿನ್ಯ ಉಂಟು ಮಾಡುವಂತಹ ಸನ್ನಿವೇಶಗಳಲ್ಲಿ ಜನರು ಪರ್ಯಾಯ ಸಾರಿಗೆ ಬಳಕೆ ಮಾಡುವುದು ಸೂಕ್ತವಾಗಿದೆ. ಈ ರಸ್ತೆಗಳಲ್ಲಿ ಹೆಚ್ಚು ಪ್ರಯಾಣ ಮಾಡುವವರಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬೇಗ ಬರುತ್ತವೆ ಎಂದು ಸಂಶೋಧಕ ಡಾ. ರಾಘವೇಂದ್ರ ತಿಳಿಸಿದ್ದಾರೆ.

English summary
Bengaluru University research revealed the heavy polluted circles in the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X