ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 77 ಶಾಸಕರಿಗೆ ಗೌರವ ಇರಲಿಲ್ಲ: ಸೋಮಶೇಖರ್

|
Google Oneindia Kannada News

ಬೆಂಗಳೂರು, ನವೆಂಬರ್ 30: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಮ್ಮ 77 ಶಾಸಕರಿಗೆ ಗೌರವ ಇರಲಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಆಯ್ತು. ಹಾಗಾಗಿ ನಾವು ಬೆಂಗಳೂರಿನ ಐವರು ಶಾಸಕರು ರಾಜೀನಾಮೆ ಕೊಟ್ಟು ಹೊರಬೇಕಾಯ್ತು ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಟಿ. ಸೋಮಶೇಖರ್ ತಿಳಿಸಿದ್ದಾರೆ.

ಪ್ರಚಾರದಲ್ಲಿ ಪಾಲ್ಗೊಂಡು ಮಾತಣಾಡಿದ ಅವರು, ನಾನು ವಸೂಲಿಗಾಗಿ ಎಲ್ಲ‌ಫೈಲ್ ಗಳನ್ನು ಇಟ್ಟುಕೊಳ್ಳುತ್ತಿದ್ದೆ ಎಂದು ಮಾಜಿ ಸಿಎಂ ಆರೋಪಿಸುತ್ತಾರೆ.

'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!'ಕೈ' ಹಿಡಿಯದ ಯಶವಂತಪುರ ತಂತ್ರ; ಸಿದ್ದರಾಮಯ್ಯಗೆ ಹಿನ್ನಡೆ!

ನಾನು ವಸೂಲಿಗಾರನಲ್ಲ.ಬಿಡಿಎ ಅಧ್ಯಕ್ಷನಾಗಿದ್ದಾಗ ಇದೇ ಬನಶಂಕರಿ ಬಡಾವಣೆಗಳು,ಕೆಂಪೇಗೌಡ ಬಡಾವಣೆ,ವಿಶ್ವೇಶ್ವರಯ್ಯ ಬಡಾವಣೆಗೆ ಒಂದೇ ಒಂದು‌ಪೈಸೆ ಅನುದಾನ ಬಿಡುಗಡೆ ಮಾಡದೆ ಕಿರುಕುಳ‌ಕೊಟ್ಟರು.ಈಗ ಮತ್ತೆ ಈ‌ಕ್ಷೇತ್ರಕ್ಕೆ ಹೆಚ್ವಿನ‌ಅನುದಾನ ತರುವ ಪ್ರಯತ್ನ ಮಾಡುತ್ತೇನೆ. ನನ್ನನ್ನು ಗೆಲ್ಲಿಸಿ ಎಂದರು.

There Was No Respect For 77 MLAs During The Coalition Government

ಒಂದೇ ಒಂದು ದಿನದಲ್ಲಿ ಯಡಿಯೂರಪ್ಪ ಯಶವಂತರ ಪುರ ಕ್ಷೇತ್ರಕ್ಜೆ 750 ಕೋಟಿ ರೂ.ಕೊಟ್ಟಿದ್ದಾರೆ. ಅದರಲ್ಲಿ ಹೆಮ್ಮಿಗೆಪುರ ವಾರ್ಡ್ ಗೆ 250 ಕೋಟಿ ರೂ.ಮೀಸಲಿಟ್ಟಿದ್ದೇವೆ. ಇಲ್ಲಿ‌‌ ಇನ್ಮೂ ಹಲವಾರು ಸಮಸ್ಯೆಗಳಿವೆ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ಅಡ್ಡಿ ಮಾಡುತ್ತಿದೆ. ಬನಶಂಕರಿ ಒಂದರಿಂದ 9 ನೇ ಹಂತದ ವರಗಿನ ಬಡಾವಣೆಗಳು ಅಭಿವೃದ್ದಿ ಆಗಬೇಕಾಗಿದೆ.

English summary
BJP Candidate ST Somashekhar Says, There was no respect for our 77 MLAs during the coalition government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X