ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಉದ್ದೇಶದಿಂದ ರಾಹುಲ್ ನಮ್ಮ ಮನೆಗೆ ಬಂದಿದ್ದಲ್ಲ: ಶಿವಣ್ಣ

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಡಾ. ರಾಜ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ನಟ ಶಿವರಾಜ್ ಕುಮಾರ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಜೂನ್ 13 : ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಡಾ. ರಾಜ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ನಟ ಶಿವರಾಜ್ ಕುಮಾರ್ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಮುಂಬರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಾಹುಲ್ ಗಾಂಧಿ ಅವರು ಸದಾಶಿವ ನಗರದ ಮನೆಗೆ ಬಂದಿದ್ದಾಗ ಈ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಯಿತು ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಇಬ್ಬರೂ ಅಲ್ಲಗೆಳೆದಿದ್ದಾರೆ.

ಕಾಂಗ್ರೆಸ್ಸಿಗರಿಗೆ ಕಲಾಪಕ್ಕಿಂತ ರಾಹುಲ್ ಗಾಂಧಿ ಪೋಗ್ರಾಂ ಮುಖ್ಯವಾಯ್ತುಕಾಂಗ್ರೆಸ್ಸಿಗರಿಗೆ ಕಲಾಪಕ್ಕಿಂತ ರಾಹುಲ್ ಗಾಂಧಿ ಪೋಗ್ರಾಂ ಮುಖ್ಯವಾಯ್ತು

ಸೂತಕದ ಮನೆಯಲ್ಲಿ ರಾಜಕೀಯ ಸಲ್ಲ: ರಾಹುಲ್ ಭೇಟಿ ಸಂದರ್ಭದಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ, ರಾಜಕೀಯ ವಿಷಯಗಳನ್ನು ಚರ್ಚೆ ಮಾಡುವ ಸಮಯ, ಸಂದರ್ಭವೂ ಅಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಅವರು ಬಂದಿದ್ದು ಅಮ್ಮನ ಆತ್ಮಕ್ಕೆ ಶಾಂತಿ ಕೋರುವುದಕ್ಕೆ, ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿಲಿಕ್ಕೆ ಮಾತ್ರ ಎಂದು ಶಿವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ರಾಘವೇಂದ್ರ ರಾಜ್ ನಿವಾಸಕ್ಕೆ ಭೇಟಿ

ರಾಘವೇಂದ್ರ ರಾಜ್ ನಿವಾಸಕ್ಕೆ ಭೇಟಿ

ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಅವರು ಸದಾಶಿವನಗರದಲ್ಲಿರುವ ಡಾ. ರಾಜ್ ಪುತ್ರ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದರು.

ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ನಿಧನಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ರಾಹುಲ್ ಗಾಂಧಿ ಜತೆ ಕುಟುಂಬ ಪರಿವಾರದವರು ಫೋಟೋ ತೆಗೆಸಿಕೊಂಡರು. ರಾಹುಲ್ ಭೇಟಿ ಕಾರ್ಯಕ್ರಮ 3 ನಿಮಿಷದಲ್ಲಿ ಮುಗಿದು ಹೋಯಿತು.
ಚುನಾವಣೆಗೆ ಬಗ್ಗೆ ಮಾತುಕತೆ

ಚುನಾವಣೆಗೆ ಬಗ್ಗೆ ಮಾತುಕತೆ

ರಾಹುಲ್ ಅವರಿಗೆ ಗೀತಾ ಅವರನ್ನು ಪರಿಚಯಿಸಿದ ಡಿಕೆ ಶಿವಕುಮಾರ್ ಅವರು, ದಿ.ಬಂಗಾರಪ್ಪ ಅವರ ಪುತ್ರಿ, ರಾಜಕೀಯದಲ್ಲಿ ಬೆಳೆಯುವ ಆಸೆ ಇರಿಸಿಕೊಂಡಿದ್ದಾರೆ ಎಂದಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಖುಷಿಯಿಂದ ತಲೆಯಾಡಿಸಿದ್ದಾರೆ ಅಷ್ಟೇ, ಕಾಂಗ್ರೆಸ್ ನಿಂದ ಮುಂದಿನ ಅಸೆಂಬ್ಲಿ ಅಥವಾ ಲೋಕಸಭೆ ಟಿಕೆಟ್ ನೀಡುವ ಬಗ್ಗೆ ಯಾರೊಬ್ಬರು ಮಾತನಾಡಿಲ್ಲ.

ಪುನೀತ್ ರಾಜ್ ಕುಮಾರ್ ನಿವಾಸದಲ್ಲಿ ಕಾಂಗ್ರೆಸ್ 'ಯುವರಾಜ' ರಾಹುಲ್ ಗಾಂಧಿ

ರಾಘವೇಂದ್ರ ರಾಜಕುಮಾರ್ ಹೇಳಿಕೆ

ರಾಘವೇಂದ್ರ ರಾಜಕುಮಾರ್ ಹೇಳಿಕೆ

'ಯಾವುದೇ ರಾಜಕೀಯ ವಿಷಯಗಳು ಚರ್ಚೆಯಾಗಿಲ್ಲ. ಅವರು ನನ್ನ ಆರೋಗ್ಯದ ಬಗ್ಗೆಯೂ ವಿಚಾರಿಸಿಕೊಂಡ್ರು. ನನಗೆ ಸ್ಟ್ರೋಕ್ ಆಗಿದ್ದರ ಬಗ್ಗೆ ಅವರಿಗೆ ಮಾಹಿತಿ ಇತ್ತು. ಚಿಕಿತ್ಸೆ ಮುಂದುವರೆಸಿ ಎಂದು ಸಲಹೆ ನೀಡಿದರು. ನನ್ನ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಹೇಳಿ ರಾಹುಲ್ ಅವರು ಹೊರಟರು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು.

ಅಣ್ಣಾವ್ರ ಮನೆಯಲ್ಲಿ ರಾಹುಲ್ ಗಾಂಧಿ: ಗೀತಾ ಶಿವರಾಜ್ ಕುಮಾರ್ ಗೆ ಕಾಂಗ್ರೆಸ್ ಗಾಳ.?

ಕೈ ಪಕ್ಷದತ್ತ ಗೀತಾ ಒಲವು?

ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆದು ಬಿಎಸ್ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿರುವ ಗೀತಾ ರಾಜ್ ಕುಮಾರ್ ಅವರಿಗೆ ಸೋದರ ಮಧು ಬಂಗಾರಪ್ಪ ಅವರೇ ರಾಜಕೀಯ ಮಾರ್ಗದರ್ಶಿ. ಬಂಗಾರಪ್ಪ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಆಪ್ತವಾದರೂ, ಜನ ಬೆಂಬಲವಿದ್ರೆ ಮಾತ್ರ ಗೆಲುವು ಎಂಬುದು ಸದ್ಯದ ಪರಿಸ್ಥಿತಿ. ಹೀಗಾಗಿ, ಕಾಂಗ್ರೆಸ್ ಸೇರುವ ಸಾಧ್ಯತೆ ತೀರಾ ಕಮ್ಮಿ.

English summary
There was no discussion on any political issues during the Rahul Gandhi visit clarified Shiva Rajkumar. There was a speculation about Geetha Shivarajkumar, wife of actor Shivarajkumar, might contestant in the assembly elections from Congress Party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X