ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯದಲ್ಲಿ ಶಾಶ್ವತ ಶತ್ರು ಅಂತ ಯಾರೂ ಇರೋದಿಲ್ಲ: ದೇವೇಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 6: ರಾಜಕೀಯದಲ್ಲಿ ಎಂದೂ ಶಾಶ್ವತ ಶತ್ರು ಇರೋದಿಲ್ಲ. ಯಡಿಯೂರಪ್ಪ ನನಗೆ ಶತ್ರು ಅಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ.

ನಗರದ ಜೆಡಿಎಸ್​ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಯಡಿಯೂರಪ್ಪ ನಮಗೆ ಶತ್ರುಗಳಲ್ಲ, ರಾಜಕೀಯದಲ್ಲಿ ಶಾಶ್ವತ ಶತ್ರುಗಳಾಗಲೀ, ಮಿತ್ರರಾಗಲೀ ಇರುವುದಿಲ್ಲ ಎಂದರು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತು ಬಿಎಸ್​ವೈ ಆಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂಬುದಾಗಿ ಹೇಳಿದೆ.

 ಸಿಎಂ ಆಡಿಯೋ ಪ್ರಕರಣ; ಸಭಾ ಕೊಠಡಿಯಲ್ಲಿ ಸಿಸಿ ಟಿವಿಯೂ ಇರಲಿಲ್ಲ ಸಿಎಂ ಆಡಿಯೋ ಪ್ರಕರಣ; ಸಭಾ ಕೊಠಡಿಯಲ್ಲಿ ಸಿಸಿ ಟಿವಿಯೂ ಇರಲಿಲ್ಲ

ಇನ್ನು ಎರಡು-ಮೂರು ದಿನಗಳಲ್ಲಿ ತೀರ್ಪು ಬರಲಿದೆ. ಈ ಆಡಿಯೋಗೆ ಕೋರ್ಟ್ ಹೆಚ್ಚು ಮಹತ್ವ ಕೊಟ್ಟಿದೆ ಅನ್ನೋ ಭಾವನೆ ನನಗಿಲ್ಲ. ಈ ಪ್ರಕರಣದಲ್ಲಿ ಈಗಾಗಲೇ ಕೋರ್ಟ್ ತೀರ್ಪಿನ ಬಗ್ಗೆ ತೀರ್ಮಾನ ಮಾಡಿದೆ ಅನ್ನುವ ಅಭಿಪ್ರಾಯ ನನ್ನದು ಎಂದರು.

 ಮುಖ್ಯಮಂತ್ರಿ ರಾಜ್ಯದ ಜನರಿಗೆ ತೊಂದರೆಯಾಗದಂತೆ ಕಾಪಾಡಬೇಕು

ಮುಖ್ಯಮಂತ್ರಿ ರಾಜ್ಯದ ಜನರಿಗೆ ತೊಂದರೆಯಾಗದಂತೆ ಕಾಪಾಡಬೇಕು

ನಾಡಿನ ಮುಖ್ಯಮಂತ್ರಿ ರಾಜ್ಯದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು,ಮಹಿಳೆಯರು, ಮಕ್ಕಳು ಸೇರಿದಂತೆ
ಪೊಲೀಸರಿಂದ ಯಾರ ಮೇಲೆ ದೌರ್ಜನ್ಯ ಆಗದಂತೆ ಮುಖ್ಯಮಂತ್ರಿಗಳು ನೋಡಿಕೊಳ್ಳಬೇಕು ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದು ನಿಜ. ಅತಿವೃಷ್ಟಿಯಿಂದಾಗಿ ಹತ್ತು ಹಲವು ಸಮಸ್ಯೆಗಳಿಂದಾಗಿ, ರಾಜಕೀಯ ಹೋರಾಟ ಇತ್ತು. ಇದರ ನಡುವೆ ನಾನು ಬರೆದಿದ್ದ ಪತ್ರ ಅವರು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.

ದೇವೇಗೌಡರ ಫೋನ್‌ ಕರೆ ಸ್ವೀಕರಿಸಲಿಲ್ಲವೇ ಯಡಿಯೂರಪ್ಪ?ದೇವೇಗೌಡರ ಫೋನ್‌ ಕರೆ ಸ್ವೀಕರಿಸಲಿಲ್ಲವೇ ಯಡಿಯೂರಪ್ಪ?

 ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು

ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು

ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು, ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಿಲ್ಲ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನನಗೆ ಆ ಜನ್ಮ ಶತ್ರುಗಳಲ್ಲ. ಆಯಾ ಸಂದರ್ಭಕ್ಕೆ ಅನುಗುಣವಾಗಿ ರಾಜಕೀಯವಾಗಿ ಮಾತನಾಡಿರುತ್ತೇವೆ ಅಷ್ಟೇ , ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೇ ಆಗುತ್ತೆ ಎಂದು ಹೇಳಿದ್ದಾರೆ.

 ಸಾರ್ವತ್ರಿಕ ಚುನಾವಣೆ ಯಾವಾಗ ಆಗುತ್ತೋ ಗೊತ್ತಿಲ್ಲ

ಸಾರ್ವತ್ರಿಕ ಚುನಾವಣೆ ಯಾವಾಗ ಆಗುತ್ತೋ ಗೊತ್ತಿಲ್ಲ

ಸಾರ್ವತ್ರಿಕ ಚುನಾವಣೆ ಯಾವಾಗ ನಡೆಯುತ್ತೋ ಗೊತ್ತಿಲ್ಲ, ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳಲ್ಲ ಅಂತ ಈಗಾಗಲೇ ತಿಳಿಸಿದ್ದೇನೆ. ಹೀಗಿರುವಾಗ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಮಾಡತನಾಡುವುದು ಸರಿ ಅಲ್ಲ. ಮಹಾರಾಷ್ಟ್ರದಲ್ಲಿ ಈಗಾಗಲೇ ಏನಾಗಿದೆ ಎಂದು ನನಗೆ ಗೊತ್ತು. ಎರಡು ಪಕ್ಷಗಳ ಜೊತೆ ಮಾತನಾಡುವ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.

 ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದು ಹೌದು

ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದು ಹೌದು

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದು ಸತ್ಯ, ಬೆಂಗಳೂರಿನ ಬುಕ್‌ ಹೌಸ್ ಯಾವುದೋ ಫೈಲ್ ಸಿಎಂ ತಡೆ ಹಿಡಿದಿದ್ದರು. ಆಗ ಲಕ್ಷ್ಮೀನಾರಾಯಣ ಅವರಿಗೆ ಮಾತನಾಡಿ ಸಿಎಂ ಜೊತೆ ಮಾತನಾಡಿದ್ದೆ. ಅದು ಬಿಟ್ಟು ಬೇರೇನೂ ಮಾತನಾಡಿಲ್ಲ. ಯಡಿಯೂರಪ್ಪ ಅವರ ಬಳಿ ಮಾತನಾಡಬಾರದು ಅಂತೇನೂ ಇಲ್ಲ ಎಂದು ಹೇಳಿದ್ದಾರೆ.

English summary
There is no permanent enemy in politics. Former Prime Minister HD Deve Gowda said Yeddyurappa was not an enemy to me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X