ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್‌ನಲ್ಲಿ ಹಗರಣವೇ ಆಗಿಲ್ಲ: ಡಸಾಲ್ಟ್ ಸಿಇಒ ಸ್ಪಷ್ಟನೆ

|
Google Oneindia Kannada News

ಬೆಂಗಳೂರ, ಫೆಬ್ರವರಿ 20: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಡಸಾಲ್ಟ್ ಏವಿಯೇಷನ್‌ನ ಸಿಇಓ ಎರಿಕ್ ಟ್ರಾಪಿಯರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆರಂಭವಾದ ಏರ್‌ ಶೋದಲ್ಲಿ ಭಾಗವಹಿಸಿದ್ದ ಬಂದಿದ್ದ ಅವರು, ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ರಫೇಲ್ ಡೀಲ್ ಬಗ್ಗೆ ಅಸಮ್ಮತಿ ಇರಲಿಲ್ಲ : ಏರ್ ಮಾರ್ಷಲ್ ಭಡೌರಿಯಾ ರಫೇಲ್ ಡೀಲ್ ಬಗ್ಗೆ ಅಸಮ್ಮತಿ ಇರಲಿಲ್ಲ : ಏರ್ ಮಾರ್ಷಲ್ ಭಡೌರಿಯಾ

ನಮಗೆ 36 ಯುದ್ಧ ವಿಮಾನಗಳ ತಯಾರಿಕೆಗೆ ಬೇಡಿಕೆ ಬಂದಿತ್ತು. ಅವುಗಳನ್ನು ನಾವು ಪೂರೈಸಲಿದ್ದೇವೆ. ಒಂದು ವೇಳೆ ಭಾರತ ಸರ್ಕಾರ ಹೆಚ್ಚು ಯುದ್ಧ ವಿಮಾನಗಳಿಗೆ ಬೇಡಿಕೆ ಇರಿಸಿದರೆ ಅವುಗಳನ್ನು ಪೂರೈಸಲು ನಾವು ಸಂತಸ ಪಡುತ್ತೇವೆ ಎಂದು ಎರಿಕ್ ತಿಳಿಸಿದ್ದಾರೆ.

There is no scandal with rafale: Dassault Aviation CEO Eric Trappier said in Bengaluru air show

ನಾಗಪುರದಲ್ಲಿ 'ಮೇಕ್ ಇನ್ ಇಂಡಿಯಾ' ನೀತಿಯಡಿ ಒಂದು ವರ್ಷದಲ್ಲಿ ನಾವು ತಯಾರಿಸಿದ ಮೊದಲ ಫಾಲ್ಕನ್ 2000 ಕಾಕ್‌ಪಿಟ್ ಅನ್ನು ಇಂದು ಪ್ರದರ್ಶಿಸಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ರದ್ದುಗೊಳಿಸಿ ಅದಕ್ಕಿಂತಲೂ ಹೆಚ್ಚಿನ ಬೆಲೆಗೆ ಕೇವಲ 36 ಯುದ್ಧ ವಿಮಾನಗಳನ್ನು ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಅಲ್ಲದೆ, ವಿಮಾನದ ವಿವಿಧ ಬಿಡಿ ಭಾಗಗಳ ತಯಾರಿಕೆಯ ಪಾಲುದಾರಿಕೆಯನ್ನು ಎಚ್‌ಎಎಲ್‌ಗೆ ಬದಲು ರಿಲಯನ್ಸ್ ಸಂಸ್ಥೆಗೆ ನೀಡಿದೆ. ಈ ಒಪ್ಪಂದದಲ್ಲಿ ಭಾರಿ ಹಗರಣ ನಡೆದಿದೆ ಎಂದು ಕಾಂಗ್ರೆಸ್ ಮತ್ತು ಇತರೆ ವಿರೋಧಪಕ್ಷಗಳು ಆರೋಪಿಸಿವೆ.

ಸತ್ಯಮೇವ ಜಯತೆ, ಸತ್ಯ ಯಾವತ್ತೂ ಗೆಲ್ಲತ್ತೆ : ಅರುಣ್ ಜೇಟ್ಲಿ ಸತ್ಯಮೇವ ಜಯತೆ, ಸತ್ಯ ಯಾವತ್ತೂ ಗೆಲ್ಲತ್ತೆ : ಅರುಣ್ ಜೇಟ್ಲಿ

ಎರಿಕ್ ಅವರ ಹೇಳಿಕೆ ವಿರೋಧಪಕ್ಷಗಳ ಆರೋಪಕ್ಕೆ ಹಿನ್ನಡೆಯುಂಟು ಮಾಡಿದೆ.

English summary
Dassault Aviation CEO Eric Trappier who was participated in the Bengaluru Air Show said that, There is no scandal with Rafale deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X