ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿ-ಖಾತಾ ನೋಂದಣಿ ಹೊಂದಿರುವ ಮನೆಗಳಿಗೆ ಹಾನಿಯಾದರೆ ಪರಿಹಾರವಿಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 10: ಬಿ-ಖಾತಾ ನೋಂದಣಿ ಹೊಂದಿರುವ ಮನಗಳಿಗೆ ಹಾನಿಯಾದರೆ ಯಾವುದೇ ಪರಿಹಾರ ದೊರೆಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೆಬ್ಬಾಳದ ಕೆಂಪಾಪುರದಲ್ಲಿ ಇತ್ತೀಚೆಗೆ ನಾಲ್ಕು ಅಂತಸ್ತಿನ ಕಟ್ಟಡವೊಂದು ವಾಲಿತ್ತು, ಆದರೆ ಅದು ಬಿ-ಖಾತಾ ನೋಂದಣಿ ಹೊಂದಿರುವುದರಿಂದ ಆ ಮನೆಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಬಿ ನೋಂದಣಿಹೊಂದಿದ 3.5 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ರಾಜ್ಯ ಸರ್ಕಾರ ಅಕ್ರಮ-ಸಕ್ರಮ ಕಾಯ್ದೆಯೊಂದನ್ನು ರೂಪಿಸಿ ಎ-ಖಾತಾ ನೀಡಲು ಸಿದ್ಧವಾಗಿತ್ತು.

ಆದರೆ ಈ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವ ಕಾರಣ ಪ್ರಕ್ರಿಯೆ ವಿಳಂಬವಾಗಿದೆ. ಜೊತೆಗೆ ಐದಾರು ವರ್ಷಗಳ ಹಿಂದೆ , ಎರಡು ಮಹಡಿ ಮನೆ ನಿರ್ಮಿಸಿ ಬಿ-ನೋಂದಣಿ ಪಡೆದ ಮಾಲೀಕರು ಸಕ್ರಮ ಭಾಗ್ಯದ ಆಸೆಯಲ್ಲಿ ಹೆಚ್ಚುವರಿ ನಾಲ್ಕೈದು ಮಹಡಿಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿದ್ದಾರೆ.

 ಬಿ-ಖಾತೆ ನೋಂದಣಿ ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರ

ಬಿ-ಖಾತೆ ನೋಂದಣಿ ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರ

ಕೇವಲ ತೆರಿಗೆ ಸಂಗ್ರಹಕ್ಕಾಗಿ ಬಿ-ಖಾತಾ ನೋಂದಣಿ ಮಾಡಲಾಗುತ್ತದೆ. ಅದನ್ನು ಹೊರತುಪಡಿಸಿ ಇನ್ಯಾವುದೇ ವಾಣಿಜ್ಯ ಉದ್ದೇಶಗಳಿಗೆ ಬಿ-ಖಾತಾ ನೋಂದಣಿ ಬರುವುದಿಲ್ಲ. ಕೃಷಿ ಜಮೀನು ಅಥವಾ ಕಂದಾಯ ಜಮೀನುಗಳನ್ನು ಬಿಬಿಎಂಪಿ, ಬಿಡಿಎ, ಬಿಎಂಆರ್‌ಡಿಎಯಿಂದ ವಾಸಯೋಗ್ಯ ಪ್ರಮಾಣಪತ್ರ, ನಕಾಶೆ ಅನುಮತಿಪತ್ರ ಪಡೆಯದೆ, ಸರ್ಕಾರದ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಮನೆಗಳಿಗೆ ಬಿ-ನಮೂನೆ ಅರ್ಜಿ ತುಂಬಿ ತೆರಿಗೆ ವಿಧಿಸಲಾಗುತ್ತದೆ.

ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...ಬೆಂಗಳೂರಿಗೂ ಬಂತು ಯಾಂತ್ರಿಕ ಕಸ ಗುಡಿಸುವ ವಾಹನ...

 ಬೆಂಗಳೂರಲ್ಲಿ ಬಿ-ಖಾತಾ ಹೊಂದಿರುವವರೆಷ್ಟು?

ಬೆಂಗಳೂರಲ್ಲಿ ಬಿ-ಖಾತಾ ಹೊಂದಿರುವವರೆಷ್ಟು?

ಬೆಂಗಳೂರಲ್ಲಿ ಬಿ-ಖಾತಾ ಹೊಂದಿರುವವರ ಸಂಖ್ಯೆ 3.5 ಲಕ್ಷಕ್ಕೂ ಹೆಚ್ಚಿದೆ. ಈ ಮನೆಗಳು ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗಿಲ್ಲ. ಜೊತೆಗೆ ಪಾಲಿಕೆ , ಬಿಡಿಎ, ಬಿಎಂಆರ್‌ಡಿಎ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರದೇಶ ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳಾಗಿವೆ.

 2 ಮಹಡಿ ಮನೆಗಳಿಗೆ ಮಾತ್ರ ಬಿ-ಖಾತಾ

2 ಮಹಡಿ ಮನೆಗಳಿಗೆ ಮಾತ್ರ ಬಿ-ಖಾತಾ

2 ಮಹಡಿ ಮನೆಗಳಿಗೆ ಮಾತ್ರ ಬಿ-ಖಾತಾ ನೀಡಲು ಅವಕಾಶವಿದೆ. ಆದರೆ ಈ ಮಿತಿಯನ್ನು ಮೀರಿ 4-5 ಮಹಡಿ ಮನೆ ನಿರ್ಮಿಸಲಾಗುತ್ತಿದೆ. ಇದರಿಂದ ಹೆಚ್ಚು ಅನಾಹುತಗಳಾಗುತ್ತವೆ. ಬ್ಯಾಟರಾಯನಪುರ ವಾರ್ಡ್‌ನ ಹೆಬ್ಬಾಳ ಕೆಂಪಾಪುರದ ರಾಮಯ್ಯ ಲೇಔಟ್‌ ವಾಲಿಕೊಂಡು ಬೀಳು ಹಂತಕ್ಕೆ ತಲುಪಿದ್ದ ಕಟ್ಟಡ ಬಿ-ನೋಂದಣಿಯ ಕಟ್ಟಡವಾಗಿದೆ. ಮನೆಯು 15 ಅಡಿ ರಸ್ತೆಯಲ್ಲಿದ್ದು, 5 ಮಹಡಿ ನಿರ್ಮಿಸಲಾಗಿದೆ.

 ಸರ್ಕಾರದ ಬಳಿ ಬಿ-ಖಾತಾ ವ್ಯಾಖ್ಯಾನವಿಲ್ಲ

ಸರ್ಕಾರದ ಬಳಿ ಬಿ-ಖಾತಾ ವ್ಯಾಖ್ಯಾನವಿಲ್ಲ

ಸರ್ಕಾರದ ಬಳಿ ಬಿ-ಖಾತಾ ಎಂಬ ಖಾತೆ ಅಥವಾ ವ್ಯಾಖ್ಯಾನವೇ ಇಲ್ಲ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಸೇರಿ ಆಸ್ತಿ ಮತ್ತು ಮನೆಗಳಿಗೆ ಸಂಬಂಧಿಸಿದ ಯಾವುದೇ ಕಡತದಲ್ಲಿ ಬಿ-ಖಾತೆ ಎಂಬ ಪದವಿಲ್ಲ. ತಾತ್ಕಾಲಿಕ ಆಸ್ತಿ ತೆರಿಗೆ ಸಂಗ್ರಹಣೆಗಾಗಿ ಸ್ಥಳೀಯ ಪಾಲಿಕೆ ಅಥವಾ ಸರ್ಕಾರಗಳು ನೀಡುವ ಬಿ-ನಮೂನೆ ಅರ್ಜಿಯಲ್ಲಿ ದಾಖಲಾತಿ ಮಾಡಿಕೊಂಡು ನೋಂದಣಿ ನೀಡುತ್ತವೆ.

English summary
There is information available that no compensation will be provided if the B Khata Holders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X