ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮ ಬೆಂಬಲಕ್ಕೆ ಸರ್ಕಾರವಿದೆ : ವೈದ್ಯರಿಗೆ ಅಭಯ

|
Google Oneindia Kannada News

ಬೆಂಗಳೂರು, ನವೆಂಬರ್ 5: ನಿಮ್ಮ ಬೆಂಬಲಕ್ಕೆ ಸರ್ಕಾರವಿದೆ ಭಯ ಪಡುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಪ್ರತಿಭಟನಾ ನಿರತ ವೈದ್ಯರಿಗೆ ಅಭಯ ನೀಡಿದ್ದಾರೆ.

ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ನಡೆಸಿರುವ ವಿಚಾರ ಕುರಿತು ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಓಪಿಡಿಗಳು ಕೂಡ ಬಂದ್ ಇದೆ.

ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?ಆರೋಪ, ಮುಷ್ಕರ: ಕರವೇ, ವೈದ್ಯರ ನಡುವೆ ಏನಿದು ಕಿತ್ತಾಟ?

ರೋಗಿಗಳ ಚಿಕಿತ್ಸೆಗೆ ಹಗಲು ರಾತ್ರಿ ಕೆಲಸ ಮಾಡಿದ್ದೀರ, ಈ ನಿಮ್ಮ ರಕ್ಷಣೆಗೆ ಸರ್ಕಾರ ನಿಲ್ಲಲಿದೆ . ಹೆಚ್ಚಿನ ಭದ್ರತೆ ಮತ್ತು ಸಿಸಿಟಿವಿಯನ್ನು ಆಸ್ಪತ್ರೆ ಮುಂಭಾಗ ಅಳವಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

There Is A Government For Your Support

ಕಾನೂನಿಗಿಂತ ಯಾರೂ ದೊಡ್ಡವರಪ್ಪ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಣ್ಣು ಕಳೆದುಕೊಂಡವರಿಗೆ ಪರಿಹಾರ ಧನವನ್ನು ನೀಡುತ್ತೇವೆ, ಡ್ರಗ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಸರ್ಕಾರದ ಮೇಲೆ ನಂಬಿಕೆ ಇಡಿ. ಮುಷ್ಕರ ಹಿಂಪಡೆಯಿರಿ, ಜನರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ. ತಿಳಿವಳಿಕೆ ಇಲ್ಲದೆ ಪ್ರಚೋದನೆ ನೀಡುವ ಸಾಕಷ್ಟು ಜನರಿದ್ದಾರೆ. ಇವರ ಮಾತಿಗೆ ಕಿವಿಗೊಡಬೇಡಿ. ಎಸ್ಮಾ ಜಾರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ಹೇಳಿದರು.

English summary
There is no need for the fear government is with you said Deputy chief minister Ashwath Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X