ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜಪೇಟೆ ಸುತ್ತಮುತ್ತ ಹೆಚ್ಚಿದ ಕಳ್ಳರ ದಾಂಧಲೆ, ಪೊಲೀಸರ ಗಸ್ತು ಹೆಚ್ಚಳ

|
Google Oneindia Kannada News

ಬೆಂಗಳೂರು, ಜೂನ್ 28: ನಗರದಲ್ಲಿ ಕಳ್ಳರ ದಾಂದಲೆ ಹೆಚ್ಚುತ್ತಿದ್ದು, ಪೊಲೀಸರು ಗಸ್ತು ಹೆಚ್ಚಳ ಮಾಡಿದ್ದಾರೆ.

ಚಾಮರಾಜಪೇಟೆಯಲ್ಲಿ ಬೈಕ್‌ನಲ್ಲಿ ಬಂದು ಸರ, ಪರ್ಸ್ ದೋಚುವ ಕಳ್ಳರ ಹಾವಳಿ ಹೆಚ್ಚಾಗಿದೆ. ಅಲ್ಲೇ ಹತ್ತಿರದಲ್ಲೇ ಪೊಲೀಸ್‌ ಠಾಣೆ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪರ್ಸ್, ಮೊಬೈಲ್ , ಚಿನ್ನದ ಸರವನ್ನು ದೋಚಿಕೊಂಡು ಕೈಗೆ ಸಿಗದೆ ಪರಾರಿಯಾಗುತ್ತಿದ್ದಾರೆ. ಚಾಮರಾಜಪೇಟಯ ಐದನೇ ಮುಖ್ಯರಸ್ತೆ, ಮಕ್ಕಳಕೂಟ ರಸ್ತೆ, ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡ ಬಸವನಗುಡಿ ರಸ್ತೆ ಆಸು ಪಾಸಿನ ಪ್ರದೇಶಗಳಲ್ಲಿ ಕಳ್ಳತನ ಹೆಚ್ಚಾಗಿದೆ.

Theft cases are increasing in the Bengaluru city

ಇದುವರೆಗೂ ಗಸ್ತು ಹೆಚ್ಚಿಸುವ ಪ್ರಯತ್ನ ಮಾಡಿರಲಿಲ್ಲ, ಇದನ್ನೇ ಕಳ್ಳರು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಕಚೇರಿಯಿಂದ ಹಿಂದಿರುಗುವಾಗ ಬೈಕ್‌ನಲ್ಲಿ ಬಂದ ಕಳ್ಳರು ಅವರ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮಹಿಳೆ ತಲೆಗೆ ಹಲ್ಲೆ ನಡೆಸಿ ಮೊಬೈಲ್ ಕಳವು ಮಾಡಿರುವ ಪ್ರಕರಣಗಳೂ ಕೂಡ ಇದೆ. ಇನ್ನೊಂದೆಡೆ ಈ ಪ್ರದೇಶದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಬ್ಯಾಂಕ್, ಎಟಿಎಂ, ಕ್ಲಬ್, ದೇವಸ್ಥಾನ, ಖಾಸಗಿ ಕಚೇರಿಗಳಿಗೆ ನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಈ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುವ ಎಲ್ಲಾ ಅಗತ್ಯವಿದೆ.

English summary
Theft cases are increasing in the Bengaluru city, still polices are not increasing patrolling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X