ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೌಶಿಕ್ ಮುಖರ್ಜಿ ಮನೆಯಲ್ಲಿ 25 ಲಕ್ಷ ಮೌಲ್ಯದ ವಸ್ತುಗಳು ಕಳುವು

By Gururaj
|
Google Oneindia Kannada News

ಬೆಂಗಳೂರು, ಜೂನ್ 18 : ಕರ್ನಾಟಕ ನಿವೃತ್ತ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ನಿವಾಸದಲ್ಲಿ ಕಳ್ಳತನ ನಡೆದಿದೆ. ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿ ಕೌಶಿಕ್ ಮುಖರ್ಜಿ ಅವರ ಮನೆ ಇದೆ. ಜೂನ್ 16ರಂದು ಮನೆಯಲ್ಲಿ ಕಳ್ಳತನ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Theft at Former CS Kaushik Mukherjee house

100 ಗ್ರಾಂನ ಚಿನ್ನದ ಬಳೆ, 2 ವಜ್ರದ ಕಿವಿಯ ಓಲೆ, 2 ವಜ್ರದ ಉಂಗುರ, 2 ದುಬಾರಿ ಪೆನ್, 6 ದುಬಾರಿ ವಾಚ್ ಸೇರಿದಂತೆ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳು ಕಳುವಾಗಿವೆ ಎಂದು ತಿಳಿದುಬಂದಿದೆ.

ಜೂನ್ 16ರ ಶನಿವಾರ ಬೆಳಗ್ಗೆ ಕೌಶಿಕ್ ಮುಖರ್ಜಿ ದಂಪತಿ ಮನೆಗೆ ಬೀಗ ಹಾಕಿಕೊಂಡು ಸ್ನೇಹಿತರ ಮನೆಗೆ ತೆರಳಿದ್ದರು. ನಂತರ ಸಿನಿಮಾ ಮತ್ತು ಶಾಪಿಂಗ್ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ವಾಪಸ್ ಆಗಿದ್ದರು. ಆಗ ಕಳುವು ಪ್ರಕರಣ ಬೆಳಕಿಗೆ ಬಂದಿದೆ.

ಎಚ್‌ಎಸ್ಆರ್‌ ಲೇಔಟ್ ಠಾಣೆಗೆ ಕರೆ ಮಾಡಿ ಕೌಶಿಕ್ ಮುಖರ್ಜಿ ಅವರು ಮಾಹಿತಿ ನೀಡಿದ್ದಾರೆ. ಮನೆ ಮತ್ತು ಮನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಕೌಶಿಕ್ ಮುಖರ್ಜಿ ಅವರ ಮನೆ ಹಿಂಭಾಗದಲ್ಲಿ ಸಣ್ಣ ಕೈತೋಟವಿದೆ. ಅದರ ಮೂಲಕ ಒಳಗೆ ಬಂದಿರುವ ಕಳ್ಳರು, ಮೊದಲು ಕಿಟಕಿ ಗಾಜನ್ನು ಒಡೆದಿದ್ದಾರೆ. ಬಳಿಕ ಕಿಟಕಿ ತೆರೆದು ಹಿಂಭಾಗಿಲ ಮೂಲಕ ಮನೆ ಪ್ರವೇಶಿಸಿದ್ದಾರೆ.

English summary
Unidentified persons allegedly stole gold ornaments and other items from the residence of Karnataka Former chief secretary Kaushik Mukherjee. HSR layout police investigating the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X