ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮುಖ್ಯ ಆಯುಕ್ತ ಫೋಟೋ ಬಳಸಿ ಸೈಬರ್ ವಂಚನೆ..!

|
Google Oneindia Kannada News

ಬೆಂಗಳೂರು, ಜುಲೈ07: ಹಣವನ್ನು ವಂಚನೆ ಮಾಡಲು ಹೊಸ ಹೊಸ ಸ್ಕೆಚ್‌ಗಳನ್ನು ಹಾಲಲಾಗುತ್ತದೆ. ಐಎಎಸ್ ಐಪಿಎಸ್ ಹೆಸರಿನಲ್ಲಿರುವ ಫೇಸ್‌ಬುಕ್ ಪ್ರೊಫೈಲ್ ಕ್ರಿಯೆಟ್ ಮಾಡಿ ಅವರ ಹೆಸರಿನಲ್ಲಿ ಹಣವನ್ನು ಕೇಳಿದ್ದರು. ಕೆಲವರು ಹಣವನ್ನು ಹಾಕಿ ಯಾಮಾರಿದ್ದರು. ಇದೀಗ ನೇರವಾಗಿಯೇ ಕರೆಯನ್ನು ಹಣಕ್ಕಾಗಿ ಡಿಮ್ಯಾಂಡ್ ಮಾಡುವ ಚಾಳಿ ಶುರುವಾಗಿದೆ. ಅದು ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ಫೋನ್ ಮಾಡಿ ಹಣಕ್ಕಾಗಿ ಡಿಮ್ಯಾಡ್ ಮಾಡುತ್ತಿದ್ದಾರೆ. ಆ ವಂಚಕರ ವಿರುದ್ದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಬಿಎಂಪಿ ಆಯುಕ್ತರ ಫೋಟೋವನ್ನು ತಮ್ಮ ವಾಟ್ಸ್ ಆಪ್ ಡಿಪಿಗೆ ಹಾಕಿಕೊಂಡು ಆಯುಕ್ತರ ಸೋಗಿನಲ್ಲಿ ಕರೆಯನ್ನು ಮಾಡುತ್ತಿದ್ದಾರೆ. ಆ ಮೂಲಕ ಅಮೆಜಾನ್‌ನಿಂದ ಆಫರ್‌ಗಳ ಬಗ್ಗೆ ಹೇಳಿ ಹಣವನ್ನು ಕೇಳುತ್ತಿದ್ದರು ಎಂದು ಆಯುಕ್ತರ ಪರವಾಗಿ ಅಧಿಕಾರಿಯೊಬ್ಬರು ಕೇಂದ್ರ ವಿಭಾಗ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

 ಬಿಬಿಎಂಪಿ ಹೊಸ ಯೋಜನೆ; ಬೀದಿಬದಿ ಆಹಾರವೂ ಆನ್‌ಲೈನ್ ಮೂಲಕ ಮನೆಗೆ! ಬಿಬಿಎಂಪಿ ಹೊಸ ಯೋಜನೆ; ಬೀದಿಬದಿ ಆಹಾರವೂ ಆನ್‌ಲೈನ್ ಮೂಲಕ ಮನೆಗೆ!

ಬಿಬಿಎಂಪಿ ಆಯುಕ್ತರ ಕಚೇರಿಂದ ಪ್ರಕಟಣೆಯನ್ನು ಹೊರಡಿಸಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರು ಭಾವಚಿತ್ರವನ್ನು ಬಳಸಿಕೊಂಡು ಅನಧಿಕೃತವಾಗಿ ಅಪರಿಚಿತರ ಸಂಖ್ಯೆ 7076522681ಯಿಂದ ಎಸ್‌ಎಂಎಸ್ ಹಾಗೂ ವಾಟ್ಸ್‌ ಆಪ್ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿದ್ದು. ಮುಖ್ಯ ಆಯುಕ್ತರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದು ನನ್ನ ಗಮನಕ್ಕೆ ಬಂದ ತಕ್ಷಣ ಬಿಬಿಎಂಪಿಯು ಸೈಬರ್ ಕ್ರೈಂನಲ್ಲಿ ದೂರನ್ನು ದಾಖಲಿಸಲಾಗಿದೆ.

ಸೈಬರ್ ಕ್ರೈಂಗೆ ದೂರು ನೀಡುವಂತೆ ಸಲಹೆ

ಸೈಬರ್ ಕ್ರೈಂಗೆ ದೂರು ನೀಡುವಂತೆ ಸಲಹೆ

ಎಲ್ಲಾ ನಾಗರೀಕರು ಮತ್ತು ಅಧಿಕಾರಿಗಳು ಮೇಲ್ಕಂಡ ಸಂಖ್ಯೆಯಿಂದ ಎಸ್‌ಎಂಎಸ್ ಅಥವಾ ವಾಟ್ಸ್‌ ಆಪ್ ಸಂದೇಶಗಳಿಗೆ ಸ್ಪಂದಿಸದಂತೆ ಮುಖ್ಯ ಆಯುಕ್ತರು ಕೋರಿರುತ್ತಾರೆ. ಈ ರೀತಿಯ ಸಂದೇಶಗಳು ಬಂದಲ್ಲಿ ಅಥವಾ ಯಾವುದೇ ಅನುಮಾನಗಳು ಇದ್ದಲ್ಲಿ ಕೂಡಲೇ ಮುಖ್ಯ ಆಯುಕ್ತರ ಕಚೇರಿಗೆ ವರದಿ ಮಾಡುವಂತೆ ಅಥವಾ ಸೈಬರ್ ಕ್ರೈಂಗೆ ದೂರನ್ನು ನೀಡುವಂತೆ ವಿನಂತಿಸಿದೆ ಎಂದು ಮಾಹಿತಿ ತಂತ್ರಜ್ಞಾನದ ನಿರ್ದೇಶಕರು ತಿಳಿಸಿದ್ದಾರೆ.

ಮೋಸದ ಬಗ್ಗೆ ಎಚ್ಚರಿಕೆ

ಮೋಸದ ಬಗ್ಗೆ ಎಚ್ಚರಿಕೆ

ಟ್ವೀಟ್ ಮಾಡುವ ಮೂಲಕ ತಮ್ಮ ಫೋಟೋವನ್ನು ಬಳಸಿ ಕೆಲವು ವಂಚಕರು ಮೋಸವನ್ನು ಮಾಡುತ್ತಿದ್ದಾರೆ ಎಚ್ಚರದಿಂದ ಇರುವಂತೆ ಸೂಚನೆಯನ್ನು ನೀಡಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಫೋನ್ ಪೇ ಗೂಗಲ್ ಪೇ ಮೂಲಕ ಹಣ

ಫೋನ್ ಪೇ ಗೂಗಲ್ ಪೇ ಮೂಲಕ ಹಣ

ಬಿಬಿಎಂಪಿ ಆಯುಕ್ತರ ಹೆಸರನ್ನು ಹೇಳಿದರೇ ಹೆಚ್ಚು ಹಣವನ್ನು ವಂಚಿಸಬಹುದು ಎಂದು ಸೈಬರ್ ವಂಚಕರು ಪ್ಲಾನ್ ಮಾಡಿರುವ ಸಾಧ್ಯತೆಗಳಿವೆ. ಈ ಹಿಂದೆ ಫೇಸ್ ಬುಕ್ ನಲ್ಲಿ ನಕಲಿ ಖಾತೆಯನ್ನು ತೆರೆದು ಅಸಲಿ ವ್ಯಕ್ತಿಗಳು ಹಾಕಿದ್ದ ಪ್ರೊಫೈಲ್ ಫೋಟೋವನ್ನೇ ನಕಲಿ ಅಕೌಂಟ್‌ಗೂ ಹಾಕಿರುತ್ತಿದ್ದರು. ನಕಲಿ ಖಾತೆಯ ಮೂಲಕ ಅಸಲಿ ಖಾತೆಯ ಸ್ನೇಹಿತರಿಗೆ ಹಾಯ್, ಹೌ ಆರ್ ಯು ಎಂದೆಲ್ಲಾ ಸಂದೇಶ ಕಳುಹಿಸುತ್ತಿದ್ದರು. ತಕ್ಷಣವೇ ಹಣ ಬೇಕಾಗಿದೆ ಕಳುಹಿಸಿ ಅರ್ಜೆಂಟ್ ಎಂದೆಲ್ಲಾ ಹೇಳಿ ಹಣಕ್ಕಾಗಿ ಪೀಡಿಸಿ ಫೋನ್ ಪೇ ಅಥವಾ ಗೂಗಲ್ ಪೇ ನಂಬರ್ ಕಳುಹಿಸುತ್ತಿದ್ದರು. ಅಸಲಿ ಖಾತೆಯವರೇ ಮೆಸೇಜ್ ಮಾಡಿದ್ದಾರೆ ಎಂದು ಹಣವನ್ನು ಕಳುಹಿಸಿದರೇ ಆ ನಂತರ ಫೋನ್ ಸ್ವಿಚ್ ಆಫ್ ಆಗಿರುತ್ತಿತ್ತು.

ಮುಖ್ಯ ಆಯುಕ್ತರ ಫೋಟೋ ಬಳಕೆ ಹೊಸ ವಿಧದ ವಂಚನೆ

ಮುಖ್ಯ ಆಯುಕ್ತರ ಫೋಟೋ ಬಳಕೆ ಹೊಸ ವಿಧದ ವಂಚನೆ

ಸೈಬರ್ ಖದೀಮರ ಹೊಸ ಹೊಸ ತಂತ್ರವನ್ನು ಹೂಡುತ್ತಾರೆ. ಮಿಲಿಟರಿ ವ್ಯಕ್ತಿಯ ಸೋಗಿನಲ್ಲಿ ಖಾಲಿ ನಿವೇಶನದ ಜಾಹೀರಾತು ನೋಡಿ ಕರೆಯನ್ನು ಮಾಡಿ ಯಾಮಾರಿಸುವ ದೊಡ್ಡ ಜಾಲವೂ ಇದೆ. ಬಾರ್ ಕೋಡ್ ಸ್ಕ್ಯಾನ್ ಮಾಡಿದರೇ ಇರುವ ದುಡ್ಡನ್ನೆಲ್ಲಾ ದೋಚಿ ಬಿಡುತ್ತಾರೆ. ಸೈಬರ್ ವಿಧಗಳಲ್ಲಿ ಓಟಿಪಿಯನ್ನು ಪಡೆಸು ಮೋಸ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ ಬಿಬಿಎಂಪಿ ಆಯುಕ್ತ ಫೋಟೋ ಬಳಸಿ ಹಣವನ್ನು ಕೇಳು್ತಿರುವುದು ವಂಚಕರ ಮತ್ತೊಂದು ವಂಚನೆಯ ವಿಧವಾಗಿದೆ.

English summary
An FIR has been registered in the cyber station against those who were cheating by sending fake WhatsApp and mobile messages in the name of BBMP Chief Commissioner Tushar Girinath. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X