ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರ ಸುರಕ್ಷತೆ ಮುಖ್ಯ ಎಂದು ರಸ್ತೆ ಗುಂಡಿಗಳನ್ನು ಮುಚ್ಚಿದ ಟ್ರಾಫಿಕ್ ಪೊಲೀಸರು

|
Google Oneindia Kannada News

ಬೆಂಗಳೂರು, ಮೇ 3: ಟ್ರಾಫಿಕ್ ಪೊಲೀಸರೆಂದರೆ ಕೇವಲ ಟ್ರಾಫಿಕ್ ನಿಯಂತ್ರಣ, ಹೆಲ್ಮೆಟ್ ಹಾಕುವವರನ್ನು ಹಿಡಿದು ಫೈನ್ ಹಾಕುವುದಷ್ಟೇ ಅಲ್ಲ ಸುಗಮ ಸಂಚಾರಕ್ಕೆ ಬೇಕಾಗುವ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ.

ಇನ್ನೇನು ಮಳೆಗಾಲ ಆರಂಭವಾಗುತ್ತಿದೆ, ಹೈಕೋರ್ಟ್ ಹಲವು ಬಾರಿ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ಕೆಲದಿನಗಳು ರಸ್ತೆಗುಂಡಿಯನ್ನು ಹಗಲುರಾತ್ರಿ ಎನ್ನದೆ ಮುಚ್ಚಿದ್ರು. ಆದರೆ ಈಗ ನಗರದ ತುಂಬೆಲ್ಲಾ ಮತ್ತೆ ಗುಂಡಿಗಳು ತುಂಬಿ ಹೋಗಿವೆ. ಬಿಬಿಎಂಪಿ ಅದನ್ನು ಸರಿಪಡಿಸುವ ಹಾಗೆ ಕಾಣುತ್ತಿಲ್ಲ ಹಾಗಾಗಿ ಟ್ರಾಫಿಕ್ ಪೊಲೀಸರೇ ಮುಂದಾಗಿದ್ದಾರೆ.

ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್ ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್

ಸಂಚಾರ ಪೊಲೀಸರು, ಬಾಂಡ್ಲಿ-ಕರಣೆ ಹಿಡಿದು 221 ಗುಂಡಿಗಳನ್ನು ಮುಚ್ಚಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಯಾವ್ಯಾವ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ ಎಂಬುದನ್ನು ಸಂಚಾರ ಪೊಲೀಸರು ಪತ್ತೆ ಮಾಡಿ, ಫೋಟೋ ಹಿಡಿದು ತಮ್ಮ ಮೇಲಧಿಕಾರಿಗಳಿಗೆ ಕಳುಹಿಸಬೇಕು. ಅಲ್ಲದೆ, ಅದನ್ನು ತ್ವರಿತ ಗತಿಯಲ್ಲಿ ದುರಸ್ತಿಗೊಳಿಸಬೇಕು ಎಂಬ ಆದೇಶ ಹೊರಬಿದ್ದಿದೆ.

The traffic police have filled over 250 potholes in Bengaluru

ಹೀಗಾಗಿ ಈ ಮೊದಲು ಹೆಲ್ಮೆಟ್‌ ಧರಿಸದಿರುವುದು, ಸಿಗ್ನಲ್‌ ಜಂಪಿಂಗ್‌ನಂತಹ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡುತ್ತಿದ್ದ ಸಂಚಾರ ಪೊಲೀಸರು, ಇನ್ಮುಂದೆ ರಸ್ತೆಗುಂಡಿಗಳ ಮೇಲೂ ಕಣ್ಣಿಡಲಿದ್ದಾರೆ.

ಅಂತಿಮವಾಗಿ ಈ ಪಟ್ಟಿಯನ್ನು ಸಿದ್ಧಪಡಿಸಿ ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು, ಕೂಡಲೇ ಗುಂಡಿ ಮುಚ್ಚುಲು ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸರು ತಿಳಿಸಿದ್ದಾರೆ.

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

44 ಸಂಚಾರ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆಯೂ ಹರಿಶೇಖರನ್‌ ಸೂಚಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ರಸ್ತೆ ಗುಂಡಿಗಳಿಂದ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.

The traffic police have filled over 250 potholes in Bengaluru

ಗುಂಡಿಗಳ ಪತ್ತೆ ಕಾರ್ಯದಲ್ಲಿ ತೊಡಗಿರುವ ಸಂಚಾರ ಪೊಲೀಸರು ಇದುವರೆಗೂ ಸುಮಾರು 350ಕ್ಕೂ ಹೆಚ್ಚು ಗುಂಡಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಅಂಕಿ ಅಂಶಗಳಲ್ಲಿ ಪ್ರತಿನಿತ್ಯ ಏರಿಕೆ ಕೂಡ ಆಗುತ್ತಿದ್ದು, ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಸಂಚಾರ ವಿಭಾಗದ ಮೂಲಗಳು ತಿಳಿಸಿವೆ.

ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ

ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಪತ್ತೆ ಹಚ್ಚಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಕಳುಹಿಸುತ್ತಿದ್ದೇವೆ. ಎರಡು ತಿಂಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಸಣ್ಣ ಪ್ರಮಾಣದ ಗುಂಡಿಗಳನ್ನು ಸಂಚಾರ ಪೊಲೀಸರೇ ಮುಚ್ಚುತ್ತಿದ್ದು, ದೊಡ್ಡ ಗುಂಡಿಗಳನ್ನು ಸ್ಥಳೀಯ ಬಿಬಿಎಂಪಿ ಎಂಜಿನಿಯರ್‌ಗಳ ಜತೆ ಸಹಕಾರದೊಂದಿಗೆ ಮುಚ್ಚಲಾಗುತ್ತಿದೆ.

English summary
Traffic police personnel have decided to don the hat of the civic workforce and have taken to filling potholes and clearing clogged drains ahead of the monsoon. By Thursday, the men in white and khaki had filled over 250 potholes and cleared 40 clogged drains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X