ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರ್‌ಪೋರ್ಟ್‌ ಮೆಟ್ರೋ ಕಾಮಗಾರಿಗೆ ಚುರುಕು

|
Google Oneindia Kannada News

ಬೆಂಗಳೂರು, ಜನವರಿ 15: ಏರ್‌ಪೋರ್ಟ್‌ ಮೆಟ್ರೋ ಕಾಮಗಾರಿಗೆ ಚುರುಕು ದೊರೆತಿದೆ.

ಕೆ.ಆರ್‌.ಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾದಿಯಲ್ಲಿ ಕಟ್ಟಡಗಳನ್ನು ತೆರವು ಕಾರ್ಯಕ್ಕೆ ಟೆಂಡರ್‌ ಆಹ್ವಾನಿಸುವ ಮೂಲಕ ಏರ್‌ಪೋರ್ಟ್‌ ಮೆಟ್ರೊ ಯೋಜನೆ ಅನುಷ್ಠಾನಕ್ಕೆ ಚುರುಕು ನೀಡಿದಂತಾಗಿದೆ.

ಜನವರಿ 16ರಿಂದ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಆರಂಭಜನವರಿ 16ರಿಂದ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಆರಂಭ

1.44 ಕೋಟಿ ರೂ. ವೆಚ್ಚದಲ್ಲಿಕಟ್ಟಡ ತೆರವು ಕಾರ್ಯ ನಡೆಯಲಿದೆ. ಜನವರಿ ಅಂತ್ಯದಲ್ಲಿಟೆಂಡರ್‌ ಪ್ರಕ್ರಿಯೆ ಮುಗಿಯಲಿದ್ದು, ಮಾರ್ಚ್ ಅಥವಾ ಏಪ್ರಿಲ್‌ನಲ್ಲಿತೆರವು ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆ ಇದೆ.

ಉದ್ದ-36.55 ಕಿ.ಮೀ., ನಿಲ್ದಾಣಗಳು-17, ಖಾಸಗಿ ಆಸ್ತಿಗಳು-245, ಸರಕಾರಿ ಆಸ್ತಿಗಳು-44.

 ಒಟ್ಟು 36.55 ಕಿ.ಮೀ ಉದ್ದದ ಮಾರ್ಗ

ಒಟ್ಟು 36.55 ಕಿ.ಮೀ ಉದ್ದದ ಮಾರ್ಗ

289 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆ. ಈ ಪೈಕಿ 245 ಖಾಸಗಿ ಹಾಗೂ 44 ಸರಕಾರಿ ಆಸ್ತಿಗಳಾಗಿವೆ. ಈ ಆಸ್ತಿಗಳಲ್ಲಿ ಕೆಲವೆಡೆ ಕಟ್ಟಡಗಳಿವೆ.

36.55 ಕಿ.ಮೀ. ಉದ್ದದ ಕೆ.ಆರ್‌.ಪುರ-ವಿಮಾನ ನಿಲ್ದಾಣ ಮಾರ್ಗದಲ್ಲಿ(ಫೇಸ್‌ 2 ಬಿ) ಕಟ್ಟಡಗಳನ್ನು ತೆರವು ಮಾಡಲು ಟೆಂಡರ್‌ ಆಹ್ವಾನಿಸಲಾಗಿದೆ. ಬಹುತೇಕ ಮೆಟ್ರೊ ಮಾರ್ಗ ರಸ್ತೆಯ ನಡುವೆ ಹಾದು ಹೋಗಲಿರುವುದರಿಂದ ಹೆಚ್ಚು ಕಟ್ಟಡಗಳನ್ನು ತೆರವು ಮಾಡುವ ಅಗತ್ಯವಿಲ್ಲ.

 ಕೆಲ ಕಟ್ಟಡಗಳ ನೆಲಸಮ

ಕೆಲ ಕಟ್ಟಡಗಳ ನೆಲಸಮ

ಆದರೆ ನಿಲ್ದಾಣಗಳು ನಿರ್ಮಾಣವಾಗಲಿರುವ ಜಾಗಗಳಲ್ಲಿ ಕೆಲ ಕಟ್ಟಡಗಳನ್ನು ಪೂರ್ತಿಯಾಗಿ, ಮತ್ತೆ ಕೆಲ ಕಟ್ಟಡಗಳನ್ನು ಭಾಗಶಃ ಕೆಡವಿ ಹಾಕಬೇಕಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

 1 ಲಕ್ಷ ಚದರ ಮೀಟರ್‌ಗೂ ಅಧಿಕ ಭೂಮಿ ಸ್ವಾಧೀನ

1 ಲಕ್ಷ ಚದರ ಮೀಟರ್‌ಗೂ ಅಧಿಕ ಭೂಮಿ ಸ್ವಾಧೀನ

''ವಿಮಾನ ನಿಲ್ದಾಣ ಮಾರ್ಗದಲ್ಲಿ 1 ಲಕ್ಷ ಚದರ ಮೀಟರ್‌ಗೂ ಅಧಿಕ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ನಿಲ್ದಾಣದ ಜಾಗದಲ್ಲಿಕಟ್ಟಡಗಳನ್ನು ತೆರವುಗೊಳಿಸಬೇಕಿದ್ದು, ಇವುಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ

 ಸಿಲ್ಕ್‌ಬೋರ್ಡ್-ಕೆಆರ್‌ಪುರ ಮಾರ್ಗಕ್ಕೆ ಟೆಂಡರ್

ಸಿಲ್ಕ್‌ಬೋರ್ಡ್-ಕೆಆರ್‌ಪುರ ಮಾರ್ಗಕ್ಕೆ ಟೆಂಡರ್

ಸಿಲ್ಕ್‌ ಬೋರ್ಡ್‌-ಕೆ.ಆರ್‌.ಪುರ ಮಾರ್ಗ (ಫೇಸ್‌ 2 ಎ)ದ ಕಾಮಗಾರಿಗೆ ಇತ್ತೀಚೆಗೆ ಟೆಂಡರ್‌ ಕರೆಯಲಾಗಿತ್ತು. 18 ಕಿ.ಮೀ. ಉದ್ದದ, 13 ನಿಲ್ದಾಣಗಳನ್ನೊಳಗೊಂಡ ಈ ಮಾರ್ಗದ ಕಾಮಗಾರಿಗೆ 1,325.43 ಕೋಟಿ ರೂ. ಖರ್ಚಾಗಲಿದೆ. ಇದರೊಂದಿಗೆ ಕೆ.ಆರ್‌.ಪುರ-ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಯನ್ನೂ ಚುರುಕಾಗಿ ಮಾಡುವ ಸವಾಲು ಬಿಎಂಆರ್‌ಸಿಎಲ್‌ ಮುಂದಿದೆ.

 ಭೂಸ್ವಾಧೀನ ಸುಲಭ

ಭೂಸ್ವಾಧೀನ ಸುಲಭ

ಮೆಟ್ರೊ 2ನೇ ಹಂತದಲ್ಲಿ ಬಹುತೇಕ ಮಾರ್ಗಗಳಲ್ಲಿ ಭೂಸ್ವಾಧೀನ ತೊಡಕು ಉಂಟಾಗಿದೆ. ಆದರೆ ಹೊಸ ಪರಿಹಾರ ಪ್ಯಾಕೇಜ್‌ನಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿಈ ಸಮಸ್ಯೆ ಆಗುವುದಿಲ್ಲಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
The Airport Metro is getting quicker.The tender implementation has been expedited for the evacuation of buildings on the route from KR Puram to the International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X