ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರು ಪಾರ್ಕ್‌ ಮಾಡುವಾಗ ಹುಷಾರ್,ಟೆಕ್ಕಿಗೆ ಆದ ಗತಿ ನಿಮಗೂ ಆಗಬಹುದು

|
Google Oneindia Kannada News

ಬೆಂಗಳೂರು, ಜೂನ್ 1: ಮನೆಯ ಮುಂಭಾಗ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದ ಒಂದೇ ಒಂದು ಕಾರಣಕ್ಕೆ ಟೆಕ್ಕಿಯೊಬ್ಬರಿಗೆ ಐದು ಮಂದಿ ಸೇರಿ ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

32 ವರ್ಷದ ಟೆಕ್ಕಿ ಸಂದೀಪ್ ವಿನಾಯಕ ಲೇಔಟ್‌ನಲ್ಲಿರುವ ತಮ್ಮ ಮನೆಯ ಮುಂಭಾಗ ರಸ್ತೆಯ ಪಕ್ಕದಲ್ಲಿ ಕಾರ್ ಪಾರ್ಕ್ ಮಾಡಿದ್ದರು. ಇಬ್ಬರು ಯುವಕರು ಆ ರಸ್ತೆಯಲ್ಲಿ ಹೋಗುವಾಗ ಇಬ್ಬರು ಹಾರನ್ ಮಾಡಲು ಶುರು ಮಾಡಿದರು, ಬೈಕ್ ಹೋಗುವಷ್ಟು ದಾರಿ ಇದ್ದರೂ ಕೂಡ ಕಾರನ್ನು ಅಲ್ಲಿಂದ ತೆಗೆಯುವಂತೆ ಹೇಳಿದರು.

 ಬಾಗಲೂರು ಬಳಿ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಟೆಕ್ಕಿ ಆತ್ಮಹತ್ಯೆ ಬಾಗಲೂರು ಬಳಿ ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಟೆಕ್ಕಿ ಆತ್ಮಹತ್ಯೆ

ಮನೆಯಿಂದ ಹೊರಗೆ ಬಂದ ಸಂದೀಪ್ ಅಲ್ಲಿ ಬೈಕ್ ಹೋಗುವಷ್ಟು ದಾರಿ ಇದೆ ಎಂದು ಹೇಳಿದರೆ ಸಂದೀಪ್ ಅವರ ತಲೆಗೆ ದುಷ್ಕರ್ಮಿಯೊಬ್ಬ ಹೊಡೆದಿದ್ದಾನೆ. ಅಷ್ಟೇ ಅಲ್ಲದೆ ಅಲ್ಲಿದ್ದ ಕೋಲನ್ನು ತೆಗೆದುಕೊಂಡು ಸಂದೀಪ್‌ಗೆ ಥಳಿಸಿದ್ದಾರೆ.

The techie beaten up by 5 men in Vinayaka layout

ತಕ್ಷಣ ಸಂದೀಪ್ ಪಕ್ಕದ ಮನೆಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ದುಷ್ಕರ್ಮಿಗಳು ಸಂದೀಪ್ ಮೊಬೈಲ್ ನ್ನು ಹಾಳು ಮಾಡಿದ್ದಾರೆ. ಈ ಏಪ್ರಿಲ್ 27ರಿಂದ ಸಂದೀಪ್ ತನ್ನ ಕುಟುಂದವರೊಂದಿಗೆ ವಿನಾಯಕ ಲೇಔಟ್‌ ನಲ್ಲಿ ವಾಸವಿದ್ದರು. ಇಬ್ಬರು ಬೈಕ್ ಸವಾರರ ಕುರಿತು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಾತ್ರಿ 10.20ರ ಸುಮಾರಿಗೆ ಸಂದೀಪ್ ಆತನ ಮಾವನ ಮನೆಯಿಂದ ಆಗಷ್ಟೇ ಹಿಂದಿರುಗಿದ್ದ, ಮನೆಯ ಹೊರಗಡೆ ಹಾರನ್ ಮಾಡುವುದು ಕೇಳಿಸಿದೆ. ಏನು ಎಂದು ಹೊರಗೆಡೆ ಬಂದು ನೋಡಿದಾಗ ಇಬ್ಬರು ಅವರ ಕಾರನ್ನು ಅಲ್ಲಿಂದ ಬೇರೆಡೆಗೆ ನಿಲ್ಲಿಸುವಂತೆ ಹೇಳಿದ್ದಾರೆ. ಒಂದೊಮ್ಮೆ ಕಾರನ್ನು ಅಲ್ಲಿಂದ ತೆಗೆಯದಿದ್ದರೆ ಕಾರಿನ ಗಾಜನ್ನು ಪುಡಿ ಪುಡಿ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಬಳಿಕ ಆ ಇಬ್ಬರು ರೌಡಿಗಳ ಜೊತೆ ಇನ್ನೂ ಮೂವರು ಸೇರಿ ಸಂದೀಪ್‌ಗೆ ಥಳಿಸಿದ್ದಾರೆ. ಆತ ರಸ್ತೆಯ ಮೇಲೆ ಬಿದ್ದಿದ್ದಾನೆ, ಸಹಾಯಕ್ಕಾಗಿ ಕಿರುಚಾಡಿದ್ದಾನೆ.

ಸಂದೀಪ್ ಯಾವಾಗಲೂ ತನ್ನ ಕಾರನ್ನು ಆತನ ಮಾವನ ಮನೆಯ ಹತ್ತಿರ ನಿಲ್ಲಿಸುತ್ತಿದ್ದ, ಆದರೆ ನಮ್ಮನ್ನು ಬಸ್‌ ನಿಲ್ದಾಣದಿಂದ ಕರೆ ತರುವ ಸಲುವಾಗಿ ಕಾರನ್ನು ಮನೆಗೆ ತಂದಿದ್ದ ಎಂದು ಸಂದೀಪ್ ತಾಯಿ ತಿಳಿಸಿದ್ದಾರೆ.

ಆದರೆ ಇದು ಬೇಕು ಅಂತಲೇ ಜಗಳ ಆರಂಭಿಸಿರುವುದು ನನ್ನದೇನೂ ತಪ್ಪಿಲ್ಲ, ವಾಸು, ದೀಕ್ಷಿತ್ ಮತ್ತೊಬ್ಬ ಅಪ್ರಾಪ್ತನಿದ್ದ ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

English summary
The tachie beaten up by 5 men in Vinayaka layout, A 32 year old techie Sandeep working in reputed firm sought refuge in his neighbour's house to save himself after he chased and beaten up by a gang.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X