ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸನ್ ಪೆಡಲ್ ರೈಡ್: 60 ದಿನಗಳಲ್ಲಿ 6000 ಕಿ.ಮೀ ಪ್ರಯಾಣ

|
Google Oneindia Kannada News

ಸುಸ್ಥಿರ ಇಂಧನ, ಚಲನಶೀಲತೆ ಮತ್ತು ಶುದ್ಧ ಗಾಳಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿಯಾಗಿರುವ ಗಿನ್ನಿಸ್ ದಾಖಲೆ ಮಾಡಿರುವ ಸುಶೀಲ್ ರೆಡ್ಡಿ ಅವರು ದೇಶಾದ್ಯಂತ 6000 ಕಿಲೋಮೀಟರ್ ದೂರದ 60 ದಿನಗಳ ಪ್ರವಾಸವನ್ನು ಸೋಲಾರ್ (ಭಾಗಶಃ) ಆಧಾರಿತ ಎಲೆಕ್ಟ್ರಿಕ್ ರಿಕ್ಷಾ (ಟುಕ್-ಟುಕ್)ನಲ್ಲಿ ಕೈಗೊಳ್ಳಲಿದ್ದಾರೆ.

ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಬಿ ಬಸವರಾಜ್ ಅವರು ಇತ್ತೀಚೆಗೆ ಈ ಪ್ರಯಾಣಕ್ಕೆ ಚಾಲನೆ ನೀಡಿ ಮಾತನಾಡಿ, 2017 ರಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಬೆಂಗಳೂರಲ್ಲಿ ಆರಂಭಗೊಂಡ ಇ-ಆಟೋ ಸಂಚಾರಬೆಂಗಳೂರಲ್ಲಿ ಆರಂಭಗೊಂಡ ಇ-ಆಟೋ ಸಂಚಾರ

ನಗರದಲ್ಲಿ ಹೆಚ್ಚಾಗಿರುವ ವಾಯಮಾಲಿನ್ಯ, ಸಂಚಾರ ದಟ್ಟಣೆ ಯನ್ನು ಕಡಿಮೆಗೊಳಿಸಲು ಹಾಗೂ ಸುಸ್ಥಿರ ಇಂದನದ ವಾಹನಗಳನ್ನು ಚಲಾವಣೆಗೆ ಪ್ರಾಮುಖ್ಯತೆ ನೀಡುವ ದೃಷ್ಟಿ ರಾಜ್ಯ ಸಾರಿಗೆ ಇಲಾಖೆಗೆ ಇದೆ.

ಈ ನಿಟ್ಟಿನಲ್ಲಿ ಇಂದು ಚಾಲನೆ ನೀಡಿರುವ ಸೋಲಾರ್ ಆಳವಡಿಸಿರುವ ಆಟೊ ಮೂಲಕ ಸುಸ್ಥಿರ ಹಾಗೂ ನವೀಕರಿಸಬಹುದಾದ ಇಂಧನದ ಬಗ್ಗೆ ಪ್ರಚುರತೆ ನಡೆಸುತ್ತಿರುವುದು ಸ್ವಾಗತಾರ್ಹ. 6 ಸಾವಿರ ಕಿಲೋಮೀಟರ್ ಗಳ ಈ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು.

ಬೆಂಗಳೂರಲ್ಲಿ ಆರಂಭಗೊಂಡ ಇ-ಆಟೋ ಸಂಚಾರಬೆಂಗಳೂರಲ್ಲಿ ಆರಂಭಗೊಂಡ ಇ-ಆಟೋ ಸಂಚಾರ

ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಹೊರಟಿರುವ ಈ ಪ್ರವಾಸದುದ್ದಕ್ಕೂ ತಂಡದ ಸದಸ್ಯರ ಸುರಕ್ಷತೆಗಾಗಿ ಎವಿಐಎಸ್ ನೆರವಿನ ವಾಹನವು ರಿಕ್ಷಾವನ್ನು ಹಿಂಬಾಲಿಸಲಿದೆ. ಪುಣೆ, ಸೂರತ್, ಬರೋಡ, ಅಹ್ಮದಾಬಾದ್, ಜೈಪುರ, ಗುರುಗಾಂವ್, ಲಕ್ನೋ, ವಾರಣಸಿ, ಆಗ್ರಾ, ವೈಝಾಗ್, ನೆಲ್ಲೂರು, ವೆಲ್ಲೂರು ಸೇರಿದಂತೆ ಇನ್ನೂ ಹಲವಾರು ನಗರಗಳಿಗೆ ಈ ತಂಡ ಭೇಟಿ ನೀಡಲಿದೆ.

ನಾಲ್ಕು ಸದಸ್ಯರ ಈ ತಂಡದಿಂದ ಜಾಗೃತಿ

ನಾಲ್ಕು ಸದಸ್ಯರ ಈ ತಂಡದಿಂದ ಜಾಗೃತಿ

ಸುಶೀಲ್ ರೆಡ್ಡಿ, ಪಲ್ಲವಿ ಸಿದ್ಧಾಂತ, ಋತ್ವಿಕ್ ಆರ್ಯ ಮತ್ತು ಸುಧೀರ್ ಲೆಕ್ಕಾಲ ಅವರನ್ನೊಳಗೊಂಡ ನಾಲ್ಕು ಸದಸ್ಯರ ಈ ತಂಡವು ದೇಶದೆಲ್ಲೆಡೆ ವ್ಯಾಪಿಸಿರುವ ಗೋಲ್ಡನ್ ಕ್ವಾಡ್ರಿಲ್ಯಾಟರಲ್ ಹೆದ್ದಾರಿಯುದ್ದಕ್ಕೂ ಸಂಚರಿಸಲಿದೆ.

ವೋಲ್ಟಾ ಆಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ವಿಎಐಪಿಎಲ್) ತಯಾರಿಸಿರುವ ಲಿಥಿಯಂ ಬ್ಯಾಟರಿಗಳ ನೆರವಿನಿಂದ ಚಲಾಯಿಸಬಲ್ಲ ಮತ್ತು ಮಾರ್ಪಾಟು ಮಾಡಿರುವ ಎಲೆಕ್ಟ್ರಿಕ್ ಆಟೋ ರಿಕ್ಷಾದಲ್ಲಿ ದೇಶದೆಲ್ಲೆಡೆ ಸಂಚರಿಸಿ ಸುಸ್ಥಿರ ಇಂಧನ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುತ್ತಿದೆ ಈ ತಂಡ. ಈ ಆಟೋರಿಕ್ಷಾಗೆ ಭಾಗಶಃವಾಗಿ 365 ಡಬ್ಲ್ಯೂಪಿ ಜಾಕ್ಸನ್ ಸೋಲಾರ್ ಪೆನಲ್ ಅನ್ನು ಅಳವಡಿಸಲಾಗಿದೆ.

ಸಾರ್ವಜನಿಕರೊಂದಿಗೆ ಚರ್ಚೆಗಳನ್ನು, ಸಂವಾದಗಳನ್ನು ನಡೆಸುವ ಮೂಲಕ ಅವರು ಸುಸ್ಥಿರ ಇಂಧನ ಬಳಸುವ ಬಗ್ಗೆ ಮತ್ತು ಪರಿಸರ ಮಾಲಿನ್ಯ ಮುಕ್ತ ವಾಹನಗಳನ್ನು ಬಳಸುವುದಕ್ಕೆ ಪ್ರೇರೇಪಣೆ ನೀಡುವುದು ಈ ತಂಡದ ಪ್ರವಾಸದ ಮುಖ್ಯ ಧ್ಯೇಯವಾಗಿದೆ.

ವಿಎಐಪಿಎಲ್ ತಂಡದ ಸದಸ್ಯರು ಮಾತನಾಡಿ

ವಿಎಐಪಿಎಲ್ ತಂಡದ ಸದಸ್ಯರು ಮಾತನಾಡಿ

ವಿಎಐಪಿಎಲ್ ತಂಡದ ಸದಸ್ಯರು ಮಾತನಾಡಿ, "ಸಾರ್ವಜನಿಕ ವಲಯದಲ್ಲಿ ಸುಸ್ಥಿರ ಇಂಧನ ಮತ್ತು ಚಲನಶೀಲತೆಯನ್ನು ಪ್ರಚುರಪಡಿಸಲು ಇದೊಂದು ಅತ್ಯಂತ ಉತ್ತಮ ಅವಕಾಶವಾಗಿದೆ. ಈ ನಿಟ್ಟಿನಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ನಿಜವಾದ ಅರ್ಥ ಮತ್ತು ಸುಸ್ಥಿರತೆಯನ್ನು ತಂದುಕೊಡುತ್ತದೆ. ಇದರ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುವುದು, ಪುನರ್‍ಬಳಕೆ ಮಾಡುವುದು ಮತ್ತು ಮರು ಉತ್ಪಾದನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ.

ಈ ತಂಡದ ಪ್ರಯಾಣವು ಎಲೆಕ್ಟ್ರಿಕ್ ವಾಹನ ಅಥವಾ ಸಾರಿಗೆ ಇಂದು ಸಾಧ್ಯವಾಗುತ್ತದೆ ಎಂದು ಜನಸಾಮಾನ್ಯರು ಅಭಿಪ್ರಾಯಪಡುವಂತೆ ಮಾಡಲಿದೆ. ವಿನೂತನ ಮಾರ್ಗದಲ್ಲಿ ಜನರಲ್ಲಿ ಸುಸ್ಥಿರ ಇಂಧನದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ಸುಶೀಲ್ ಅವರೊಂದಿಗೆ ನಾವು ಸಹಭಾಗಗಳಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ" ಎಂದರು.

ಶುದ್ಧ ಇಂಧನ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ, ಪ್ರಯೋಜನ

ಶುದ್ಧ ಇಂಧನ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ, ಪ್ರಯೋಜನ

ಈ 6000 ಕಿಲೋಮೀಟರ್ ದೂರದ ಪ್ರವಾಸದಲ್ಲಿ ತಂಡವು ಸ್ಥಳೀಯ ಮಟ್ಟದ ಜನರೊಂದಿಗೆ ಮತ್ತು ಪಾಲುದಾರರೊಂದಿಗೆ ಶುದ್ಧ ಇಂಧನ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ ಮತ್ತು ಅದರ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಸಲಿದೆ. ಇದೇ ವೇಳೆ ವಿಎಐಪಿಎಲ್‍ನ ಮಾಲಿನ್ಯ ಮುಕ್ತ ವಾಹನಗಳ ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನೂ ಸಾರ್ವಜನಿಕರಿಗೆ ಒದಗಿಸಲಿದೆ.

ಈ 6000 ಕಿಲೋಮೀಟರ್ ದೂರದಲ್ಲಿ ಹೆಚ್ಚಾಗಿ ಹೆದ್ದಾರಿಯಲ್ಲಿ ಸಂಚರಿಸಲಿದ್ದು, 5 ದೊಡ್ಡ ನಗರಗಳು ಮತ್ತು ಹಲವಾರು ಪಟ್ಟಣ, ಗ್ರಾಮಗಳಲ್ಲಿ ಸಂಚರಿಸಲಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ 17 ಗುರಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಅವರನ್ನು ಸುಸ್ಥಿರ ಸಾರಿಗೆ-ಇಂಧನ ಬಳಕೆಯತ್ತ ಒಲವು ತೋರುವಂತೆ ಮಾಡುವ ಉದ್ದೇಶ ಈ ಪ್ರವಾಸದ್ದಾಗಿದೆ.

ಗ್ರೀನ್‍ಲೈಟ್ ಪ್ಲಾನೆಟ್‍ನ ದಿವ್ಯಾ ಆರ್ಯ

ಗ್ರೀನ್‍ಲೈಟ್ ಪ್ಲಾನೆಟ್‍ನ ದಿವ್ಯಾ ಆರ್ಯ

ಗ್ರೀನ್‍ಲೈಟ್ ಪ್ಲಾನೆಟ್‍ನ ಏಷ್ಯಾದ ಮಾರುಕಟ್ಟೆ ಮುಖ್ಯಸ್ಥರಾದ ದಿವ್ಯಾ ಆರ್ಯ ಅವರು ಮಾತನಾಡಿ, "ದೇಶಾದ್ಯಂತ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸುಶೀಲ್ ರೆಡ್ಡಿಯವರ ಮಿಶನ್‍ಗೆ ಗತ್ರೀನ್‍ಲೈಟ್ ಪ್ಲಾನೆಟ್ ಕೈಜೋಡಿಸಿದೆ. 10 ವರ್ಷಗಳಿಗೂ ಅಧಿಕ ಸಮಯದಿಂದ ಮನೆಗಳು & ವ್ಯವಹಾರಗಳಿಗೆ ಜೀವನ ಬದಲಾವಣೆಯ ಸೋಲಾರ್ ಉತ್ಪನ್ನಗಳನ್ನು ನೀಡುತ್ತಾ ಬಂದಿದ್ದೇವೆ. ಈ ಸನ್‍ಪೆಡಲ್ ರೈಡ್ ಮೂಲಕ ಸೋಲಾರ್ ಶಕ್ತಿಯ ಪರಿಸರಸ್ನೇಹಿ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದೇವೆ" ಎಂದರು.

ಈ 'ದಿ ಸನ್‍ಪೆಡಲ್ ರೈಡ್-ಗೋಲ್ಡನ್ ಕ್ವಾಡ್ರಿಲ್ಯಾಟರಲ್' ಪ್ರವಾಸಕ್ಕೆ ಬೆಂಬಲ ನೀಡುತ್ತಿರುವ ಸಂಸ್ಥೆಗಳೆಂದರೆ ಡೆಲಿವೆರಿ, ಐಐಟಿ ಬಾಂಬೆ, ಡಿಐಯುಗುರು, ಯೋಗಾಬಾರ್, ಆಟೋಬಾಟ್, ಒಟಿಒ ಕ್ಯಾಪಿಟಲ್ & ಐಬಿಐಎಸ್ ಇಂಡಿಯಾ.

English summary
The project is called - 'The SunPedal Ride - Golden Quadrilateral' which is a journey on a solar retrofitted auto rickshaw for 6000 kms in 60 days done by a team of four people - Sushil Reddy (IIT Bombay alumnus, previous Guinness and Limca World Record Holder for longest electric bicycle journey), Pallavi Siddhanta, Ruthvik Arya and Sudheer Lekkala. The aim of this journey is to spread awareness of sustainability - Solar Energy, Electric Mobility and Clean Air.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X