ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕೊರೊನಾ ಸೋಂಕಿತ ವ್ಯಕ್ತಿಯ ಬೆಚ್ಚಿಬೀಳಿಸುವ ಹಿಸ್ಟರಿ

|
Google Oneindia Kannada News

ಬೆಂಗಳೂರು, ಮೇ 13: ಬೆಂಗಳೂರಿನಲ್ಲಿ ಕೇಸ್ P911ನಿಂದ ಆತಂಕ ಶುರುವಾಗಿದೆ. ಈ ಕೊರೊನಾ ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುವಂತಿದೆ.

ಮಂಗಮ್ಮನಪಾಳ್ಯದ ಮದೀನನಗರದಲ್ಲಿ ಆತಂಕ ಹೆಚ್ಚಿದೆ. ಮದೀನಪಾಳ್ಯದ 2ನೇ ಮುಖ್ಯರಸ್ತೆಯ ಎಂಟನೇ ಕ್ರಾಸ್ ಅಲ್ತಬ್ ಕ್ಲಿನಿಕ್ ಪಕ್ಕದಲ್ಲಿ ಈ ವ್ಯಕ್ತಿ ವಾಸವಿದ್ದಾರೆ.

ತಬ್ಲಿಘಿ ಸಮಾವೇಶದಿಂದ ಸೋಂಕು ಹರಡಿದ್ದು?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯತಬ್ಲಿಘಿ ಸಮಾವೇಶದಿಂದ ಸೋಂಕು ಹರಡಿದ್ದು?: ಸತ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಬೆಂಗಳೂರಿಗರೇ ನಿಮ್ಮ ಆರೋಗ್ಯದ ಮೇಲೆ ಗಮನ ಹರಿಸಿ, ಯಾಕೆಂದರೆ ಇನ್ನು ಹಲವು ಕೇಸ್‌ಗಳು ಆಕ್ಟೀವ್ ಆಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌ ಅಲ್ಲಿದ್ದಾರೆ.

1019 ಮಂದಿಯನ್ನು ಆರೋಗ್ಯ ಇಲಾಖೆ ಕ್ವಾರಂಟೈನ್‌ನಲ್ಲಿರಿಸಿದೆ. ಸೋಂಕಿತರ ಜೊತೆ ಪ್ರೈಮರಿ ಕಾಂಟಾಕ್ಟ್ ಇರುವ 393 ಮಂದಿ, ಸೆಕೆಂಡರಿ ಕಾಂಟಾಕ್ಟ್‌ನಲ್ಲಿ 626 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

ಹೀಗಾಗಿ 1019 ಜನರ ತಪಾಸಣೆ ಮಾಡಬೇಕಾಗಿರೋ ಇಲಾಖೆ, 12ನೇ ದಿನಕ್ಕೆ ಇವರನ್ನು ಸ್ವಾಬ್ ಟೆಸ್ಟ್‌ಗೆ ಒಳಪಡಿಸಲಾಗುತ್ತದೆ, ಈ ಹಿನ್ನೆಲೆ‌ ವರದಿ ಬಂದ ಬಳಿಕವಷ್ಟೇ ಕೊರೊನಾ ಮಾಹಿತಿ ತಿಳಿಯಲಿದೆ ಹೀಗಾಗಿ ಕ್ವಾರಂಟೈನ್‌ನಲ್ಲಿರುವ ಮೇಲೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಿಗಾವಹಿಸಿದೆ.

ಶ್ರಮಿಕ್ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆದ 1251 ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆದ 1251 ಕಾರ್ಮಿಕರು

ಸೌಮ್ಯ ಕ್ಲಿನಿಕ್‌ನಲ್ಲಿ ಮೂರು ದಿನ ಚಿಕಿತ್ಸೆ

ಸೌಮ್ಯ ಕ್ಲಿನಿಕ್‌ನಲ್ಲಿ ಮೂರು ದಿನ ಚಿಕಿತ್ಸೆ

ಅವರ ಮನೆಯ ಹತ್ತಿರದಲ್ಲಿರುವ ಸೌಮ್ಯ ಕ್ಲಿನಿಕ್‌ನಲ್ಲಿ ವ್ಯಕ್ತಿ ಮೂರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ. ಆದರೆ ರೋಗಿಯ ಕುರಿತು ಸೌಮ್ಯ ಕ್ಲಿನಿಕ್ ಆರೋಗ್ಯ ಇಲಾಖೆಯ ಬಳಿ ಮಾಹಿತಿಯನ್ನು ಮುಚ್ಚಿಟ್ಟಿತ್ತು.

ಜಯನಗರ ಸಾರ್ವಜನಿಕ ಆಸ್ಪತ್ರೆಗೆ

ಜಯನಗರ ಸಾರ್ವಜನಿಕ ಆಸ್ಪತ್ರೆಗೆ

ಭಾನುವಾರ ಜಯನಗರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂದು ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿ ಕುರಿತು ಮಾಹಿತಿ

ಸೋಂಕಿತ ವ್ಯಕ್ತಿ ಕುರಿತು ಮಾಹಿತಿ

ಆತನಿಗೆ ಹೆಂಡ್ತಿ ಮೂರು ವರ್ಷದ ಮಗಳು ಇದ್ದಾರೆ, ತಮಿಳುನಾಡು ಮೂಲದವರಾಗಿದ್ದು ಚಿಕ್ಕಂದಿನಿಂದಲೂ ಇಲ್ಲೇ ಇದ್ದಾರೆ, ಸಧ್ಯ ಟಾಟ್ ಏಸಿ ವಾಹನವಿಟ್ಟುಕೊಂಡು ಬಿಲ್ಡಿಂಗ್ ಕನ್ಸಟ್ರಕ್ಷನ್ ಮನೆಗಳಿಗೆ ಪಿಲ್ಲರ್ ಗಳ ಕಬ್ಬಿಣ ಸಪ್ಲೆ ಮಾಡ್ತಿದ್ದ ಕಳೆದೆರೆಡು ತಿಂಗಳಿನಿಂದ ಮನೆಯಲ್ಲೇ ಇದ್ದ ಎಂದು ತಿಳಿದುಬಂದಿದೆ.

ಸೋಂಕಿತನ ಸಂಪರ್ಕದಲ್ಲಿದ್ದ 27 ಮಂದಿಗೆ ಕ್ವಾರಂಟೈನ್

ಸೋಂಕಿತನ ಸಂಪರ್ಕದಲ್ಲಿದ್ದ 27 ಮಂದಿಗೆ ಕ್ವಾರಂಟೈನ್

ಸದ್ಯ ಆತನ ಸಂಪರ್ಕದಲ್ಲಿದ್ದ 7 ಜನರನ್ನ ಕ್ವಾರೆಂಟೈನ್ ಮಾಡಲಾಗಿದೆ, ದ್ವಿತೀಯ ಸಂಪರ್ಕದಲ್ಲಿದ್ದ 27 ಮಂದಿ ಕ್ವಾರೆಂಟೇನ್, ಪ್ರಾಥಮಿಕ ಸಂಪರ್ಕದಲ್ಲಿದ್ದವನು ನಗರದ ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ಕ್ವಾರೆಂಟೇನ್, ದ್ವಿತೀಯ ಸಂಪರ್ಕದಲ್ಲಿದ್ದವರನ್ನ ಮನೆಯಲ್ಲೇ ಕ್ವಾರೇಂಟೇನ್, ಮದೀನ ನಗರದ ಎಲ್ಲಾ ಕ್ರಾಸ್ ಗಳಿಗೆ ಅಧಿಕಾರಿಗಳು ಡಿಸ್ ಇನ್ಸ್‌ಪೆಕ್ಷನ್ ಮಾಡಿದ್ದಾರೆ.

English summary
Case P911 Travel history of this corona-infected person is startling In Around Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X