ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮತ್ತೆ ಸ್ಟೀಲ್ ಬ್ರಿಡ್ಜ್ ಸದ್ದು!

|
Google Oneindia Kannada News

ಬೆಂಗಳೂರು, ಜೂನ್ 8: ಒಂದು ಕಾಲದಲ್ಲಿ ಉದ್ಯಾನ ನಗರಿ ಹಸಿರು ಪ್ರೇಮಿಗಳ ನಿದ್ದೆಗೆಡಿಸಿದ್ದ ಉಕ್ಕಿನ ಸೇತುವೆ, ಸಾರ್ವಜನಿಕರ ಒಗ್ಗಟ್ಟಿನ ಹೋರಾಟದಿಂದ ತಣ್ಣಗಾಗಿದೆ. ಆದರೆ ಮತ್ತೀಗ ಉಕ್ಕಿನ ಸೇತುವೆಯ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಈ ಉಕ್ಕಿನ ಸೇತುವೆಯನ್ನು ಶಿವಾನಂದ ಸರ್ಕಲ್ ಬಳಿ ನಿರ್ಮಾಣಮಾಡುವ ಯೋಜನೆಯಿದೆ.

ಶಿವಾನಂದ ವೃತ್ತದ ಬಳಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಹರೇಕೃಷ್ಣ ರಸ್ತೆ ರೈಲ್ವೆ ಕೆಳಸೇತುವೆ ಬಳಿಯಿಂದ ರೇಸ್ ಕೋರ್ಸ್ ರಸ್ತೆವರೆಗೆ ಉಕ್ಕಿನ ಸೇತುವೆ ನಿರ್ಮಿಸುವ ಯೋಜನೆಗೆ ಜೂನ್ 7 ರಂದು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಯೋಜನೆಯ ವೆಚ್ಚ ರೂ.19.86 ಕೋಟಿ ಎಂದು ಅಂದಾಜಿಸಲಾಗಿದೆ.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

The sound of Steel bridge in Bengaluru is raising again!

1 ಕಿ.ಮೀ.ಉದ್ದದ ಈ ಸೇತುವೆ ರೇಸ್ ಕೋರ್ಸ್ ರಸ್ತೆ ಮತ್ತು ಶೇಷಾಂದ್ರಿಪುರಂ ಅನ್ನು ಬೆಸೆಯಲಿದೆ. ಈ ಯೋಜನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅನುಷ್ಠಾನಗೊಳಿಸಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಮತ್ತು ರೈಲ್ವೆ ಕೆಳಸೇತುವೆಯ ಬಳಿ ಉಕ್ಕಿನ ಸೇತುವೆಯ ಡೌನ್ ರ್ಯಾಂಪ್ ಇರಲಿದೆ.[ಸ್ಟೀಲ್ ಫ್ಲೈಓವರ್ ನಿರ್ಮಾಣಕ್ಕೆ ಮುನ್ನವೇ ಕುಸಿತ, 65 ಕೋಟಿ ಕಥೆ ಏನಾಯ್ತು?]

ಬಸವೇಶ್ವರ ವೃತ್ತ ಹಾಗೂ ಹೆಬ್ಬಾಳದ ನಡುವೆ 6.5 ಕಿ.ಮೀ. ಉದ್ದದ ಉಕ್ಕಿನ ಸೇತುವೆ ನಿರ್ಮಿಸುವ 1,791 ಕೋಟಿ ರೂ. ಯೋಜನೆ ಪರಿಸರ ಪ್ರೇಮಿಗಳ ಹೋರಾಟದಿಂದಾಗಿ ನಿಂತಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The sound of Steel bridge in Bengaluru is raising again! But this time the steel bridge will be decided to construct in Shivanand circle, to avoid hectic traffic in this road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X