• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಚರ ! ತೀವ್ರ ಉಷ್ಣಾಂಶ, ಬೆಂಗಳೂರಲ್ಲಿ ಶೇ 15ರಷ್ಟು ವೈರಲ್ ಸೋಂಕು

|

ಬೆಂಗಳೂರು, ಮಾರ್ಚ್01: ಪ್ರತಿ ವರ್ಷದ ಬೇಸಿಗೆ ಸಾಮಾನ್ಯವಾಗಿ ಅಧಿಕ ವೈರಸ್ ಸೋಂಕು ತಗುಲುವ ಕಾಲ. ಈ ವರ್ಷ ವಾಸ್ತವವಾಗಿ ಜಾಗತಿಕ ತಾಪಮಾನದ ಪರಿಣಾಮವಾಗಿ ಉಷ್ಣಾಂಶದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಬಾರಿ ಬೇಸಿಗೆ ಬೇಗ ಆರಂಭವಾಗಿರುವುದು ಮತ್ತು ಹಗಲಿನ ವೇಳೆ ಅತ್ಯಧಿಕ ಉಷ್ಣಾಂಶ ದಾಖಲಾಗಿರುವುದು ಹಾಗೂ ರಾತ್ರಿಯ ವೇಳೆ ತಾಪಮಾನ ಕಡಿಮೆ ಇರುವುದು ಬೆಂಗಳೂರಿಗರ ಆರೋಗ್ಯಕ್ಕೆ ಮಾರಕವಾಗಿದೆ. ವಾತಾವರಣದಲ್ಲಿನ ಬದಲಾವಣೆ ಈಗಾಗಲೇ ಫ್ಲೂ, ಉಸಿರಾಟದ ತೊಂದರೆಗಳು ಮತ್ತು ಆಹಾರ ಸಂಬಂಧಿ ಸೋಂಕುಗಳಿಗೆ ಕಾರಣವಾಗಿದೆ.

ತಾಪಮಾನ ಏರಿಕೆಯ ಪರಿಣಾಮಗಳನ್ನು ವಿವರಿಸಿದ ನಾರಾಯಣ ಹೆಲ್ತ್ ಸಿಟಿ ಆಂತರಿಕ ಔಷಧಿಗಳ ಸಲಹೆಗಾರ ಡಾ.ಮಹೇಶ್ ಕುಮಾರ್, "ಹವಾಮಾನ ಬದಲಾವಣೆಯು ನಮ್ಮ ರೋಗನಿರೋಧಕ ವ್ಯವಸ್ಥೆಗೆ ಸವಾಲಾಗಿದ್ದು, ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದಾಗ್ಯೂ ಬೇಸಿಗೆ ಮೊದಲೇ ಆರಂಭವಾಗಿರುವುದರಿಂದ ಹಾಗೂ ಅಧಿಕ ತಾಪಮಾನವು ನಮ್ಮ ಅರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ನಮಗೆ ಈಗಾಗಲೇ ಈ ವರ್ಷ ವೈರಸ್ ಸೋಂಕು ರೋಗಿಗಳಲ್ಲಿ ಶೇಕಡ 15ರಷ್ಟು ಹೆಚ್ಚಳ ಕಂಡುಬಂದಿದೆ. ಉಷ್ಣಾಂಶದ ವಿಧಾನ ಕೂಡಾ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿಯ ವೇಳೆ ಹೆಚ್ಚು ತಂಪು ಇರುವುದು ಮತ್ತು ಹಗಲಿನ ವೇಳೆ ಅಧಿಕ ತಾಪಮಾನ ಇರುವುದರಿಂದ ನಮ್ಮ ದೇಹ ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಇನ್‍ಫ್ಲುಯೆಂಝಾ ಮತ್ತು ಶ್ವಾಸಕೋಶದ ಉರಿಯೂತದಂಥ ವೈರಸ್ ಸಂಬಂಧಿತ ಉಸಿರಾಟದ ಸೋಂಕು ಹೊಂದಿದ ರೋಗಿಗಳ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ. ಆಹಾರ ಮತ್ತು ನೀರು ಸಂಬಂಧಿತ ಸೋಂಕುಗಳು ಕೂಡಾ ಅಧಿಕವಾಗಿರುವುದು ಗಮನಕ್ಕೆ ಬಂದಿದೆ" ಎಂದು ಹೇಳಿದ್ದಾರೆ.

ಇನ್ನೂ ಎರಡು ವಾರ ಬಿಸಿಲಲ್ಲಿ ಬೇಯಲಿದೆ ಬೆಂಗಳೂರು

"ಇದಕ್ಕಿಂತ ಹೆಚ್ಚಾಗಿ ಈ ವರ್ಷ ಆತಂಕಕಾರಿ ಅಂಶವೆಂದರೆ ಸೋಂಕಿನ ತೀವ್ರತೆ. ಈ ಬಾರಿ ಹೆಚ್ಚು ತೀವ್ರ ಸ್ವರೂಪದ ಸೋಂಕುಗಳು ಕಂಡುಬರುತ್ತಿವೆ" ಎಂದು ಡಾ.ಮಹೇಶ್ ಕುಮಾರ್ ವಿವರಿಸಿದ್ದಾರೆ. ಈ ಪೈಕಿ ಕೆಲ ಸ್ಥಿತಿಗಳು ತಪ್ಪಿಸಲು ಅಸಾಧ್ಯವಾದದ್ದಾಗಿದ್ದರೂ, ಈ ಪೈಕಿ ಬಹುತೇಕ ಪ್ರಕರಣಗಳನ್ನು ನಮ್ಮ ದೇಹದ ರೋಗನಿರೋಧಕ ಶಕ್ತಿ ಸುಧಾರಿಸಿಕೊಳ್ಳುವುದು, ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಸೋಂಕು ತಡೆಯುವಂಥ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಇದನ್ನು ನಿಭಾಯಿಸಬಹುದಾಗಿದೆ".

ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೆಳಗೆ ಸೂಚಿಸಲಾಗಿದೆ:

ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಕೆಳಗೆ ಸೂಚಿಸಲಾಗಿದೆ:

1. ಸದಾ ದ್ರವಾಂಶ ಇರುವಂತೆ ನೋಡಿಕೊಳ್ಳಿ: ಪ್ರತಿದಿನ 2.5 ರಿಂದ 3 ಲೀಟರ್ ವರೆಗೆ ನೀರು ಕುಡಿಯುವುದರಿಂದ ಮಾಂಸಖಂಡದ ಆರ್ದ್ರತೆ ಪ್ರಮಾಣ ಸುಧಾರಿಸುವುದು ಮಾತ್ರವಲ್ಲದೇ ಇದು ಮಾಂಸಖಂಡಗಳ ನೋವನ್ನು ತಡೆಯುತ್ತದೆ ಹಾಗೂ ಬೇಸಿಗೆಯಲ್ಲಿ ಸಾಮಾನ್ಯವಾಗಿರುವ ಆಯಾಸ ಅಥವಾ ಬಳಲಿಕೆಯನ್ನು ಕಡಿಮೆ ಮಾಡುತ್ತದೆ.

ಬೆಂಗಳೂರಲ್ಲಿ ಹೆಚ್ಚಿದ ಗರಿಷ್ಠ ತಾಪಮಾನ, ಎಷ್ಟಿದೆ, ಎಷ್ಟು ಹೆಚ್ಚಳವಾಗಬಹುದು?

ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಸೇವಿಸಿ

ಮನೆಯಲ್ಲೇ ಸಿದ್ಧಪಡಿಸಿದ ಆಹಾರ ಸೇವಿಸಿ

2. ಪ್ಯಾಕ್ ಮಾಡಿದ ಮತ್ತು ಫ್ರಿಡ್ಜ್ ಆಹಾರಗಳು ಬೇಡ: ತಾಜಾ ಹಾಗೂ ಮನೆಯಲ್ಲೇ ಸಿದ್ಧಪಡಿಸಿದ ಆಹಾರವನ್ನು ಸಾಧ್ಯವಾದಷ್ಟೂ ಹೆಚ್ಚು ಸೇವಿಸಿ. ಫ್ರಿಡ್ಜ್‍ನಲ್ಲಿಟ್ಟ ಆಹಾರ, ದಾಸ್ತನು ಮಾಡಿದ ಮತ್ತು ಪ್ಯಾಕ್ ಮಾಡಲಾದ ಆಹಾರವಸ್ತುಗಳನ್ನು ಸೇವಿಸುವುದು ಪದೇ ಪದೇ ಸೋಂಕು ಆಹ್ವಾನಿಸಲು ಕಾರಣವಾಗುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾದ ಅಜೀರ್ಣತೆ ಹಾಗೂ ಗ್ಯಾಸ್ಟ್ರಾಯಿಟೀಸ್‍ಗೆ ಇದು ಕಾರಣವಾಗುತ್ತದೆ.

ಈ ಬೇಸಿಗೆ ಉತ್ತರ ಕನ್ನಡದ 423 ಹಳ್ಳಿ ಜನರ ಗಂಟಲಾರಿಸಲಿದೆ

ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ

ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ

3. ವ್ಯಾಯಾಮ ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗಲಿ: ವ್ಯಾಯಾಮದ ಮೂಲಕ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವುದು ಹೆಚ್ಚು ಚೇತೋಹಾರಿ. ಇದು ಎಲುಬು ಮತ್ತು ಮಾಂಸಖಂಡಗಳಲ್ಲಿನ ಪೋಷಕಾಂಶ ಹೀರಿಕೊಳ್ಳುವ ಹಾಗೂ ಹಿಡಿದಿಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಡಿ ದೇಹದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಒಂದೇ ದಿನಕ್ಕೆ ಎರಡು ಡಿಗ್ರಿ ಏರಿದ ಬೆಂಗಳೂರು ತಾಪಮಾನ

ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ

ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ

4. ನಿಯತವಾಗಿ ಲಸಿಕೆ ಹಾಕಿಸಿಕೊಳ್ಳಿ: ಇನ್‍ಫ್ಲುಯೆಂಝಾ ಮತ್ತು ಟೈಫಾಯ್ಡ್ ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಖಂಡಿತವಾಗಿಯೂ ಜನರಿಗೆ ನೆರವಾಗುವುದು ಮಾತ್ರವಲ್ಲದೇ, ಸಮುದಾಯದಲ್ಲಿ ಇಂಥ ಸೋಂಕುಗಳು ಮತ್ತೆ ಹರಡುವುದನ್ನು ತಡೆಯುವಲ್ಲಿ, ರೋಗ ಪ್ರಮಾಣ ಹಾಗೂ ಪದೇ ಪದೇ ಆಂಟಿಬಯಾಟಿಕ್ಸ್ ಬಳಕೆಯನ್ನು ಕಡಿಮೆ ಮಾಡುವಲ್ಲೂ ಇದು ನೆರವಾಗುತ್ತದೆ.

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಬಗ್ಗೆ

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಬಗ್ಗೆ

ನಾರಾಯಣ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದ್ದು, ಇದರಲ್ಲಿ ಹೃದ್ರೋಗ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ನಾರಾಯಣ ಹೃದ್ರೋಗ ಸಂಸ್ಥೆ, ಕ್ಯಾನ್ಸರ್ ಚಿಕಿತ್ಸೆ, ನರರೋಗ ಮತ್ತು ನರಶಸ್ತ್ರಚಿಕಿತ್ಸೆ, ಮೂತ್ರರೋಗ, ಮೂತ್ರಶಾಸ್ತ್ರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ಮಜೂಂದರ್ ಶಾ ವೈದ್ಯಕೀಯ ಕೇಂದ್ರ (ಎಂಎಸ್‍ಎಂಸಿ)ಯನ್ನು ಹೊಂದಿದೆ. ಬಹುಶಃ ದೇಶದಲ್ಲೇ ಅತಿ ದೊಡ್ಡದು ಎನ್ನಲಾದ ಅಸ್ಥಿಮಚ್ಛೆ ಕಸಿ ಕೇಂದ್ರವನ್ನೂ ಹೊಂದಿದೆ. ನಾರಾಯಣ ಹೆಲ್ತ್ ಸಿಟಿ ಅಂಗಂಶ ಕಸಿ ಬ್ಯಾಂಕ್ ಮತ್ತು ಹೊಮೊಗ್ರಾಫ್ಟ್ ವಾಲ್ವ್ ಬ್ಯಾಂಕನ್ನು ಕೂಡಾ ನಿರ್ವಹಿಸುತ್ತಿದೆ.

English summary
Summer is that time of the year wherein many viral infections occur. In fact, this year, the mercury levels have soared further up due to global warming. This early onset of summer coupled with high temperatures during days and relative cooler nights is taking a toll on the health of Bengalureans. The change in the climate is already causing flu like respiratory infections and food related infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X