ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲ್ಯಾಟ್‌ ಹೆಸರಿನಲ್ಲಿ ಇನ್ಮುಂದೆ ಸೈಟ್ ನೋಂದಣಿ ಮಾಡುವಂತಿಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಫ್ಲ್ಯಾಟ್‌ ಹೆಸರಿನಲ್ಲಿ ಸೈಟ್ ನೋಂದಣಿ ಮಾಡುವುದಕ್ಕೆ ಇನ್ನುಮುಂದೆ ತಡೆ ಬೀಳಲಿದೆ.

ರೆವಿನ್ಯೂ ಸೈಟ್ ನೋಂದಣಿ ನಿಲ್ಲಿಸಿದರೂ ಬೆಂಗಳೂರು ಮಹಾನಗರ ಪಾಲಿಕೆ, ಬಿಡಿಎ ವ್ಯಾಪ್ತಿಯಲ್ಲಿ ಸಬ್ ರಿಜಿಸ್ಟ್ರಾರ್ ಗಳಿಂದ ನೋಂದಣಿ ನಡೆಯುತ್ತಿದೆ. ಈ ಅಕ್ರಮ ನೋಂದಣಿಗೆ ಶಾಶ್ವತ ಕಡಿವಾಣ ಹಾಕಲು ಸಿಎಸ್‌ ಆದೇಶ ಜಾರಿ ಮಾಡಿದ್ದಾರೆ. ಕಾವೇರಿ ಸಾಫ್ಟ್‌ವೇರ್ ಜೊತೆಗೆ ಇ-ಸ್ವತ್ತು ಜೋಡಣೆ ಮಾಡಲಾಗುತ್ತದೆ.

 ಅಕ್ರಮ ನೋಂದಣಿ ಹೇಗೆ ನಡೆಯುತ್ತೆ, ಇಲ್ಲಿದೆ ಮಾಹಿತಿ

ಅಕ್ರಮ ನೋಂದಣಿ ಹೇಗೆ ನಡೆಯುತ್ತೆ, ಇಲ್ಲಿದೆ ಮಾಹಿತಿ

ಕಂದಾಯ ನಿವೇಶನಗಳನ್ನು ನೋಂದಣಿ ಮಾಡಲು ನೋಂದಣಿ ಇಲಾಖ ನಿರ್ಬಂಧ ಹೇರಿದೆ. ಆದರೆ, ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿ ಉಪ ನೋಂದಣಾಧಿಕಾರಿಗಳು ಕಾವೇರಿ ತಂತ್ರಾಂಶದಲ್ಲಿ ಕಂದಾಯ ನಿವೇಶನ ನೋಂದಣಿ ವೇಳೆ ನಿವೇಶನದ ಬದಲು ಫ್ಲ್ಯಾಟ್ ಎಂದು ಆಯ್ಕೆ ನೀಡುತ್ತಿದ್ದಾರೆ. ಫ್ಲ್ಯಾಟ್ ಆಯ್ಕೆ ವೇಳೆ ಇ-ಖಾತಾ ದಾಖಲೆ ಕೇಳುವುದಿಲ್ಲ. ಹೀಗಾಗಿ ನಿರಾಯಾಸವಾಗಿ ಕಂದಾಯ ನಿವೇಶನವನ್ನು ನೋಂದಣಿ ಮಾಡುತ್ತಿದ್ದಾರೆ. ನಿವೇಶನದ ಬದಲು ಫ್ಲ್ಯಾಟ್ ಎಂದು ಮೂಲ ದಾಖಲೆಗಳಲ್ಲೂ ಬರುವುದಿಲ್ಲ. ಕೇವಲ ಇಸಿ ದಾಖಲೆಯಲ್ಲಿ ಮಾತ್ರ ಫ್ಲ್ಯಾಟ್ ಎಂದು ನಮೂದಾಗಿರುತ್ತದೆ.

ಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರಬಿಬಿಎಂಪಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಹೊಸ ತಂತ್ರ

 ಶಾಶ್ವತವಾಗಿ ಅಕ್ರಮ ತಡೆಗೆ ಕ್ರಮ

ಶಾಶ್ವತವಾಗಿ ಅಕ್ರಮ ತಡೆಗೆ ಕ್ರಮ

ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇನ್ನೂ ಸಂಪೂರ್ಣವಾಗಿ ಪಿಐಡಿ ನೀಡಿಲ್ಲ. ಹೀಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ ಮ್ಯಾನ್ಯುಯಲ್ ಖಾತಾದಿಂದಲೇ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ಹೀಗಾಗಿ ಇ-ಸ್ವತ್ತು ಕಾವೇರಿ ತಂತ್ರಾಂಶ ಜೋಡಣೆಯಾಗದೆ ಕಂದಾಯ ನಿವೇಶನಗಳ ನೋಂದಣಿ ತಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ತಡೆಯಲು ಬಿಡಿಎ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯ ಇ-ಸ್ವತ್ತು ತಂತ್ರಾಂಶ ಅಭಿವೃದ್ಧಿಪಡಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಬಿಡಿಎ ಹಾಗೂ ಬಿಬಿಎಂಪಿಯಿಂದ ಪ್ರತ್ಯೇಕ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ.

 ಡಿಸೆಂಬರ್‌ನಿಂದ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಲಾಗಿತ್ತು

ಡಿಸೆಂಬರ್‌ನಿಂದ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಲಾಗಿತ್ತು

ರಾಜ್ಯಾದ್ಯಂತ ಡಿಸೆಂಬರ್‌ನಿಂದ ಕಂದಾಯ ನಿವೇಶನಗಳ ನೋಂದಣಿ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ಇದರಂತೆ ಕಾವೇರಿ ತಂತ್ರಾಂಶ ಹಾಗೂ ಇ-ಸ್ವತ್ತು ತಂತ್ರಾಂಶ ಜೋಡಣೆ ಮಾಡಿರುವುದರಿಂದ ಭೂ ಪರಿವರ್ತನೆ , ಸಕ್ರಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಇ-ಖಾತೆ ಪಡೆದಿರುವ ನಿವೇಶನಗಳನ್ನು ಮಾತ್ರ ನೋಂದಣಿ ಮಾಡಬೇಕು.

 ನಿವೇಶನದ ಬದಲಿಗೆ ಫ್ಲ್ಯಾಟ್ ಎಂದು ನಮೂದು

ನಿವೇಶನದ ಬದಲಿಗೆ ಫ್ಲ್ಯಾಟ್ ಎಂದು ನಮೂದು

ಬಿಬಿಎಂಪಿ ಹಾಗೂ ಬಿಡಿಎ ಸೇರಿದಂತೆ ರಾಜ್ಯದ ವಿವಿಧ ನಗರಸಭೆ ವ್ಯಾಪ್ತಿಯಲ್ಲಿ ನಿವೇಶನದ ಬದಲಿಗೆ ಫ್ಲ್ಯಾಟ್ ಎಂದು ನಮೂದಿಸಿ ಉಪ ನೋಂದಣಾಧಿಕಾರಿಗಳು ಕಂದಾಯ ನಿವೇಶನಗಳ ಅಕ್ರಮ ನೋಂದಣಿ ಮುಂದುವರೆಸಿದ್ದಾರೆ. ಪ್ರಮುಖವಾಗಿ ಬಿಬಿಎಂಪಿ ಹಾಗೂ ಬಿಡಿಎ ವ್ಯಾಪ್ತಿಯಲ್ಲಿಯೇ ಅಕ್ರಮವಾಗಿ ಕಂದಾಯ ನಿವೇಶನದಗಳ ನೋಂದಣಿ ಮುಂದುವರೆದಿದೆ.

English summary
Registration of a site under a flat name will no longer be barred. E-asset integration with Kaveri software Soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X