ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಜವಾದ ಅನರ್ಹರು ನಮ್ಮ ಶಾಸಕರಲ್ಲ ಸಿದ್ದರಾಮಯ್ಯ : ನಳಿನ್ ಕುಮಾರ್

|
Google Oneindia Kannada News

ಬೆಂಗಳೂರು, ನವೆಂಬರ್ 25: ಅನರ್ಹರು ನಮ್ಮ ಶಾಸಕರಲ್ಲ, ಸಿದ್ದರಾಮಯ್ಯ ನಿಜವಾದ ಅನರ್ಹರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಅವರ ಪರವಾಗಿ ಕ್ಯಾಲಸನಹಳ್ಳಿಯಲ್ಲಿ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಶಾಸಕರು ಅನರ್ಹರು ಅಲ್ಲ. ಸಿದ್ದರಾಮಯ್ಯ ನಿಜವಾದ ಅನರ್ಹರು.

ಧಮ್ಕಿ ಹಾಕುವ ಸಂಸ್ಕೃತಿ ಕಾಂಗ್ರೆಸ್‌ನವರದ್ದು, ಬಿಜೆಪಿಯದ್ದಲ್ಲ: ಅಶೋಕ್ ಧಮ್ಕಿ ಹಾಕುವ ಸಂಸ್ಕೃತಿ ಕಾಂಗ್ರೆಸ್‌ನವರದ್ದು, ಬಿಜೆಪಿಯದ್ದಲ್ಲ: ಅಶೋಕ್

ರಾಜ್ಯದ ಜನರೇ ಸಿದ್ದರಾಮಯ್ಯರನ್ನ ಅನರ್ಹರನ್ನಾಗಿ ಮಾಡಿದ್ದಾರೆ. ಅವ್ರ ಕ್ಷೇತ್ರದಲ್ಲೆ ಅವ್ರು ಅನರ್ಹರಾಗಿದ್ದಾರೆ ಎಂದು ಹೇಳಿದರು.

 ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿ

ಸಿದ್ದರಾಮಯ್ಯ ಅವರದ್ದು ಒಡೆದು ಆಳುವ ನೀತಿ

ಸಮಾಜದಲ್ಲಿ ಒಡೆದು ಆಳುವ ನೀತಿಯನ್ನು ಅನಸರಿಸುತ್ತಿರುವುದು ಸಿದ್ದರಾಮಯ್ಯ ಅವರು, ಬ್ರಿಟಿಷರ ಪದ್ಧತಿಯನ್ನು ಅನುಸರಿಸಿದ್ದು ಕೂಡ ಸಿದ್ದರಾಮಯ್ಯ ಅವರು,ಧಂಗೆ ಕೋರರು, ದಗಾ ಕೋರರು, ಹಲ್ಲೆ ಕೋರರ ಪರ ಸಿದ್ದರಾಮಯ್ಯ ನಿಂತಿದ್ದರು.

ಹೀಗಾಗಿ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ. ಅನರ್ಹರನ್ನಾಗಿ ಮಾಡಿದ್ದಾರೆ. ನಾನೊಬ್ಬನೇ ಕಾಂಗ್ರೆಸ್ ನಲ್ಲಿ ನಾಯಕನಾಗಬೇಕು ಅಂತ ಸಿದ್ದರಾಮಯ್ಯ ಇದ್ದಾರೆ ಎಂದು ಹೇಳಿದರು.

ನಾನು ಮತ್ತೆ ಸಿಎಂ ಆಗ್ತೀನಿ ಇದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ: ಸಿದ್ದರಾಮಯ್ಯನಾನು ಮತ್ತೆ ಸಿಎಂ ಆಗ್ತೀನಿ ಇದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ: ಸಿದ್ದರಾಮಯ್ಯ

 ಅನಿವಾರ್ಯವಾಗಿ ಉಪ ಚುನಾವಣೆ ಬಂದಿದೆ

ಅನಿವಾರ್ಯವಾಗಿ ಉಪ ಚುನಾವಣೆ ಬಂದಿದೆ

ಅನಿವಾರ್ಯವಾಗಿ ಉಪ ಚುನಾವಣೆ ಬಂದಿದೆ,ರಾಜ್ಯದಲ್ಲಿ ಬಿಜೆಪಿ ಪರ ಅಲೆ ಜೋರಾಗಿ ಇದೆ.ಬಿಜೆಪಿ ಈಗಾಗಲೇ ವರದಿ ಪಡೆದುಕೊಂಡಿದೆ, ರಾಜ್ಯದ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ. ಅತಿ ಹೆಚ್ಚು ಬಹುಮತದಿಂದ ಭೈರತಿ ಬಸವರಾಜ್ ಗೆಲ್ತಾರೆ. ಅವ್ರ ಸಾಧನೆ, ಅಭಿವೃದ್ಧಿ ಕೆಲಸ, ಯಡಿಯೂರಪ್ಪನವರ ಅಭಿವೃದ್ಧಿ ಕೆಲಸದಿಂದ ಬಿಜೆಪಿ ಅಭೂತಪೂರ್ವವಾಗಿ ಗೆಲ್ಲುತ್ತೆ ಎಂದು ಹೇಳಿದರು.

 ಬಿಜೆಪಿ ಯಾವತ್ತೂ ದ್ವೇಷದ ರಾಜಕಾರಣ ಮಾಡಲ್ಲ

ಬಿಜೆಪಿ ಯಾವತ್ತೂ ದ್ವೇಷದ ರಾಜಕಾರಣ ಮಾಡಲ್ಲ

ಬಿಜೆಪಿ ಯಾವತ್ತು ದ್ವೇಷದ ರಾಜಕಾರಣ ಮಾಡೊಲ್ಲ, ಜೆಡಿಎಸ್, ಕಾಂಗ್ರೆಸ್ ಪ್ರಜಾಪ್ರಭುತ್ವದಲ್ಲಿ ಅವರದ್ದೇ ಆದ ರೀತಿಯಲ್ಲಿ ಕೆಲಸ ಮಾಡಬಹುದು.ಬಿಜೆಪಿ ನಮ್ಮದೆ ರೀತಿ ಕೆಲಸ ಮಾಡ್ತೀವಿ. ನಮಗೆ ವಿಶ್ವಾಸ ಇದೆ. 15 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿ 15 ಜನರನ್ನ ಗೆಲ್ಲಿಸುತ್ತೆ ಎಂದು ಹೇಳಿದರು.

 ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಇರಲ್ಲ

ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಇರುವುದಿಲ್ಲ,ಸಿದ್ದರಾಮಯ್ಯ ಮನೆಗೆ ಹೋಗ್ತಾರೆ. ಈ ಚುನಾವಣೆ ಬಳಿಕ ಕರ್ನಾಟಕ ಕಾಂಗ್ರೆಸ್ ಮುಕ್ತ ಆಗುತ್ತೆ. ಜನರು ಕಷ್ಟ ಅಂತ ಹೇಳಿದ್ರೆ ಅವತ್ತಿನ ಸಿಎಂ ಫೈವ್ ಸ್ಟಾರ್ ಹೊಟೇಲ್ ನಲ್ಲಿ ನಿದ್ರೆ ಮಾಡ್ತಿದ್ದರು. ಶಾಸಕರು ಮಾತಾಡಲು ಅವ್ರು ಸಿಗುತ್ತಿರಲಿಲ್ಲ. ಹೀಗಾಗಿ 17 ಜನ ಶಾಸಕರು ರಾಜೀನಾಮೆ ಕೊಟ್ಟರು. ಕುಮಾರಸ್ವಾಮಿ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿರಲಿಲ್ಲ ಎಂದರು.

English summary
Nalin Kumar Kateel Says Our MLAs is not disqualifiers siddaramaiah is a True disqualifier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X