ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿರ್ಸಿ ವೃತ್ತ ಮೇಲ್ಸೇತುವೆಯ ಇನ್ನೊಂದು ಬದಿಯ ದುರಸ್ತಿ ಕಾಮಗಾರಿ ಕೇಳೋರಿಲ್ಲ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ಮೆಜೆಸ್ಟಿಕ್-ಕೃಷ್ಣರಾಜ ಮಾರುಕಟ್ಟೆ ಸೇರಿದಂತೆ ಕೆಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಬಾಲಗಂಗಾಧರ ನಾಥ ಸ್ವಾಮೀಜಿ ಮೇಲ್ಸೇತುವೆ ಒಂದು ಭಾಗದ ದುರಸ್ತಿ ಕಾಮಗಾರಿ ಮುಗಿದು ಅರ್ಧ ವರ್ಷವೇ ಕಳೆದರೂ ಮತ್ತೊಂದು ಬದಿಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಇದರಿಂದ ದುರಸ್ತಿಯಾಗಿರುವ ಮಾರ್ಗದಲ್ಲಿ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದೆ. ಆದರೂ ಬಿಬಿಎಂಪಿ ಮಾತ್ರ ಈ ರಸ್ತೆ ದುರಸ್ತಿಗೆ ಟೆಂಡರ್ ನೀಡಿರುವ ಗುತ್ತಿಗೆದಾರರಿಂದ ಏಳೆಂಟು ತಿಂಗಳು ಕಳೆದರೂ ಇನ್ನೊಂದು ಬದಿ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸಲು ಮುಂದಾಗಿಲ್ಲ.

ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರೂ ಟೆಂಡರ್

ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರೂ ಟೆಂಡರ್

ಸಿರ್ಸಿ ಸರ್ಕಲ್ ಮೇಲ್ಸೇತುವೆ ದುರಸ್ತಿಗೆ 4.30 ಕೋಟಿ ರೂ ಟೆಂಡರ್ ನೀಡಿದ್ದ ಬಿಬಿಎಂಪಿ , 2018ರ ಡಿಸೆಂಬರ್‌ನಲ್ಲಿ ಪುರಭವನದ ಮುಂಭಾಗದಿಂದ ಮೈಸೂರು ರಸ್ತೆ ಕಡೆಗೆ ಹೋಗುವ ಒಂದು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಿ ಮಾರ್ಚ್ ವೇಳೆಗೆ ಮುಗಿಸಲಾಗಿತ್ತು. ಆ ನಂತರ 45 ದಿನಗಳಲ್ಲಿ ಮೈಸೂರು ರಸ್ತೆಯಿಂದ ಕೆಆರ್ ಮಾರುಕಟ್ಟೆ , ಪುರಭವನ ಕಡೆ ಬರುವ ಮಾರ್ಗದ ದುರಸ್ತಿ ನಡೆಯಬೇಕಿತ್ತು. ಆದರೆ, ಆರೇಳು ತಿಂಗಳಾದರೂ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಇದರಿಂದ ನಿತ್ಯ ನಗರವಷ್ಟೇ ಅಲ್ಲದೆ ಹೊರ ಜಿಲ್ಲೆಗಳಿಂದ ಬರುವ ಸವಾರರಿಗೂ ತೊಂದರೆಯಾಗುತ್ತಿದೆ.

ವೈಟ್‌ ಟಾಪಿಂಗ್ ಕಾಮಗಾರಿಗೆ ತಡೆ

ವೈಟ್‌ ಟಾಪಿಂಗ್ ಕಾಮಗಾರಿಗೆ ತಡೆ

ಈ ಕುರಿತು ಬಿಬಿಎಂಪಿಅಧಿಕಾರಿಗಳನ್ನು ಪ್ರಶ್ನಿಸಿದರೆ ಮೈಸೂರು ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದ ಕಾರಣಕ್ಕೆ ಮೇಲ್ಸೇತುವೆಯ ಎರಡೂ ಬದಿಯ ದುರಸ್ತಿಯನ್ನು ಒಂದೇ ಸಲ ನಡೆಸಿದರೆ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ತೀವ್ರಗೊಳ್ಳಲಿದೆ ಎಂಬ ಪೊಲೀಸರ ಸಲಹೆ ಮೇರೆಗೆ ಒಂದು ಬದಿಯ ದುರಸ್ತಿಯನ್ನು ಮಾತ್ರ ಮಾಡಲಾಗಿತ್ತು. ಮೈಸೂರು ರಸ್ತೆಯಲ್ಲಿ ಸ್ಥಗಿತಗೊಂಡಿದ್ದ ವೈಟ್‌ ಟಾಪಿಂಗ್ ಕಾಮಗಾರಿ ಮತ್ತೆ ಪ್ರಾರಂಭವಾಗಿದ್ದರಿಂದ ಮೇಲ್ಸೇತುವೆಯ ಮತ್ತೊಂದು ಬದಿಯ ದುರಸ್ತಿ ಆರಂಭಿಸಲು ಆಗಿರಲಿಲ್ಲ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಫ್ಲೈಓವರ್ ನ ಪಿಲ್ಲರ್ ಜೋಡಿಸುವ ಕೊಂಡಿಯಿಂದಲೇ ಅಪಾಯ

ಫ್ಲೈಓವರ್ ನ ಪಿಲ್ಲರ್ ಜೋಡಿಸುವ ಕೊಂಡಿಯಿಂದಲೇ ಅಪಾಯ

ಫ್ಲೈ ಓವರ್‌ನ ಪಿಲ್ಲರ್‌ಗಳನ್ನು ಒಂದಕ್ಕೊಂದು ಜೋಡಿಸುವ ಕೊಂಡಿಗಳೇ ಇಲ್ಲಿ ಪ್ರಾಣಕ್ಕೆ ಕಂಟಕವಾಗಿದೆ. ಒಂದು ಎತ್ತರವಿದ್ದರೆ , ಇನ್ನೊಂದು ತಗ್ಗು, ನಯ-ನಾಜೂಕಿಲ್ಲದ ಕೆಲಸ ಮಾಡಲಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೋಚರಿಸಲಿದೆ. ಕೆಲವು ಕೊಂಡಿಗಳಂತೂ ಕಿತ್ತೇ ಬರುತ್ತದೆ ಎನ್ನುವಷ್ಟು ಸಡಿಲವಾಗಿದೆ.

ಏಳು ತಿಂಗಳ ಹಿಂದೆ ಒಂದು ಬದಿ ಕಾಮಗಾರಿ ನಡೆದಿತ್ತು

ಏಳು ತಿಂಗಳ ಹಿಂದೆ ಒಂದು ಬದಿ ಕಾಮಗಾರಿ ನಡೆದಿತ್ತು

ಸಿರ್ಸಿ ಮೇಲ್ಸೇತುವೆಯ ಕಾಮಗಾರಿ ಮುಗಿದು ಆರೇಳು ತಿಂಗಳುಗಳು ಕಳೆದಿದೆ ಆದರೂ ಮತ್ತೊಂದು ಬದಿಯ ಕಾಮಗಾರಿಯನ್ನು ಆರಮಭಿಸಲು ಬಿಬಿಎಂಪಿ ಒಲವು ತೋರಿಸುತ್ತಿಲ್ಲ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

English summary
The Repair Works On The Other Side Of The Balaganadharanatha Flyover near Sirsi circle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X