ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ಲಕ್ಷದ ಗಡಿ ದಾಟಿದ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ

|
Google Oneindia Kannada News

ಬೆಂಗಳೂರು ಜುಲೈ 17: ಕೋವಿಡ್ ಪರಿಸ್ಥಿತಿಯ ನಂತರ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಏರಿಕೆ ಆಗಿದೆ. ಇತ್ತೀಚೆಗೆ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆ 5 ಲಕ್ಷ ಗಡಿ ದಾಟಿರುವ ಬಗ್ಗೆ ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ನಗರದ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರು ನಿತ್ಯ ನಮ್ಮ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಇದು ಕೊರೊನಾ ಲಾಕ್‌ಡೌನ್‌ಗಳ ನಂತರ ಮೆಟ್ರೋ ಬಳಕೆದಾರರ ಗರಿಷ್ಠ ಪ್ರಯಾಣಿಕರ ಸಂಖ್ಯೆ ಆಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಮೆಟ್ರೋ ಟ್ರೈನ್ ಎಲ್ಲಿದೆ, ನಿಮ್ಮ ಮೊಬೈಲ್‌ನಲ್ಲೇ ಟ್ರ್ಯಾಕ್ ಮಾಡಿಮೆಟ್ರೋ ಟ್ರೈನ್ ಎಲ್ಲಿದೆ, ನಿಮ್ಮ ಮೊಬೈಲ್‌ನಲ್ಲೇ ಟ್ರ್ಯಾಕ್ ಮಾಡಿ

ಬಿಎಂಆರ್‌ಸಿಎಲ್ 2020ರಂದು ನಮ್ಮ ಮೆಟ್ರೋ ಸೇವೆ ಪುನಾರಂಭಿಸಿತ್ತು. ಅಲ್ಲಿಂದ ಹಂತ ಹಂತವಾಗಿ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿತ್ತು. ಕಳೆದ ಜೂನ್ 4 ರಂದು ಒಂದೇ ದಿನ 5.7 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಜೂನ್ 6ರಂದು ಏಕದಿನ ಅತ್ಯಧಿಕ ಆದಾಯ ಅಂದರೆ ಒಂದೇ ದಿನ ಒಟ್ಟು ಸುಮಾರು 1.2 ಕೋಟಿ ರೂ. ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಮುಖ್ಯಸ್ಥರ ಯಶವಂತ ಚವ್ಹಾಣ್ ಮಾಹಿತಿ ನೀಡಿದ್ದಾರೆ.

The Number of Daily Namma Metro Users Has Corossed 5 Lakh

ಕೋವಿಡ್‌ನಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ; ಸಾಮಾನ್ಯವಾಗಿ ವಾರಾಂತ್ಯದ ದಿನಗಳು ಜತೆಗೆ ವಾರದ ಆರಂಭದ ದಿನವಾದ ಸೋಮವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಜನ ಕಚೇರಿ, ಕಾಲೇಜು, ಕಾರ್ಖಾನೆಗಳಿಗೆ ತೆರಳುತ್ತಾರೆ.

ಜೂನ್ 19ರಂದು ಮಧ್ಯರಾತ್ರಿವರೆಗೂ ನಮ್ಮ ಮೆಟ್ರೋ ಸಂಚಾರಜೂನ್ 19ರಂದು ಮಧ್ಯರಾತ್ರಿವರೆಗೂ ನಮ್ಮ ಮೆಟ್ರೋ ಸಂಚಾರ

ಒಟ್ಟಾರೆ ಕೋವಿಡ್ ಮುನ್ನದ ಪರಿಸ್ಥಿತಿಗೆ ಹೋಲಿಕೆ ಮಾಡಿದರೆ 5 ಲಕ್ಷ ಜನಪ್ರಯಾಣಿಕರು ಸಂಚರಿಸುವುದು ಕಡಿಮೆಯೇ ಎನ್ನಬಹುದು. ಇದಕ್ಕೆ ಕೋವಿಡ್ ನಂತರ ಐಟಿ ಕಂಪನಿಗಳು ತಮ್ಮ ಉದ್ಯೋಗಿಳಿಗೆ ಕೊರೊನಾ ಭೀತಿಯಿಂದಾಗಿ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಿರುವುದು ಕಾರಣವಾಗಿದೆ.

The Number of Daily Namma Metro Users Has Corossed 5 Lakh

ಕೆಲವರು ಕೊರೊನಾ ವೈರಸ್ ಭೀತಿಯಿಂದ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ನಿತ್ಯ ಸರಾಸರಿ 4.5 ಲಕ್ಷ ಜನ ಮೆಟ್ರೋ ಬಳಕೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, 2019ರ ಅಕ್ಟೋಬರ್‌ನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ರಸ್ತೆ ಸಂಚಾರ ದಟ್ಟಣೆ ತಪ್ಪಿಸಲು, ಮಳೆ ಇನ್ನಿತರ ಸಂದರ್ಭಗಳಲ್ಲಿ ಮೆಟ್ರೋ ಸಂಚಾರ ಅನುಕೂಲಕರ ಸಾರಿಗೆ ವ್ಯವಸ್ಥೆಯಾಗಿದೆ.

ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್ ಸಿಎಲ್ ತನ್ನ ಸೇವೆ ಹೆಚ್ಚಿಸಬೇಕು. ಮಧ್ಯರಾತ್ರಿವರೆಗೆ ಸೇವೆ ಒದಗಿಸಿದರೂ ಒಳಿತು ಎಂದು ಮೆಟ್ರೋ ಪ್ರಯಾಣಿಕರಾದ ಶಿಲ್ಪಾ ಎಂಬುವವರು ಅಭಿಪ್ರಾಯಪಟ್ಟರು.

ಬಿಎಂಆರ್‌ಸಿಎಲ್ ಸೋಮವಾರದಿಂದ ಶನಿವಾರದವರೆಗೆ ಹಾಲಿ ಬೆಳಗ್ಗೆ 5ಗಂಟೆಯಿಂದ ರಾತ್ರಿ 11ರವರೆಗೆ ಸೇವೆ ನೀಡುತ್ತಿದೆ. ಭಾನುವಾರ ಮಾತ್ರ ಸಂಚಾರ ದಟ್ಟಣೆ ಕಡಿಮೆ ಇರುವ ಕಾರಣಕ್ಕೆ ಬೆಳಗ್ಗೆ 7ಗಂಟೆಯಿಂದ ರಾತ್ರಿ 11ರವರೆಗೆ ಸೇವೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Daily Namma Metro users increase after Covid pandemic situation, Now the number of daily metro users has crossed 5 lakh. BMRCL official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X