• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮುಂದಿನ ವಾಟ್ಸಾಪ್ ಭಾರತದಿಂದ ಬರಲಿದೆ': ಸಿಇಒ ಅಭಿಜಿತ್ ಬೋಸ್

|

ಬೆಂಗಳೂರು, ಮಾರ್ಚ್ 24: ನಗರದ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್‍ಐಟಿ) ತನ್ನ ವಾರ್ಷಿಕ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಸಾಂಸ್ಕೃತಿಕ, ತಾಂತ್ರಿಕ ಹಾಗೂ ವ್ಯವಸ್ಥಾಪನಾ ಉತ್ಸವ 'ಸಿಎಂಆರ್ ಕಲ್ಚರ್ 19' ತನ್ನ ಕ್ಯಾಂಪಸ್‍ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ವಾಟ್ಸಾಪ್ ಇಂಡಿಯಾದ ಸಿಇಒ ಮಿ. ಅಭಿಜಿತ್ ಬೋಸ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ, ಉದ್ಘಾಟನಾ ಸಮಾರಂಭ ನೆರವೇರಿಸಿಕೊಟ್ಟರು.

ಸಿಎಂಆರ್‍ಐಟಿ ಪ್ರಾಂಶುಪಾಲರಾದ ಡಾ. ಸಂಜಯ್ ಜೈನ್, ಉಪಪ್ರಾಂಶುಪಾಲರಾದ ಡಾ. ಬಿ. ನರಸಿಂಹಮೂರ್ತಿ, ಸಿಎಂಆರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ.ಎಸ್. ಶಿವಕುಮಾರ್, ಸಿಎಂಆರ್ ವಿವಿ ರಿಜಿಸ್ಟ್ರಾರ್ ಡಾ. ಪ್ರವೀಣ್ ಆರ್., ಸಿಎಂಆರ್ ಜನಧಾರಾ ಟ್ರಸ್ಟ್ ಕಾರ್ಯದರ್ಶಿ ಮಿ. ಕೆ.ಸಿ. ಜಗನ್ನಾಥ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Whatsapp ಗ್ರೂಪ್ ಕಿರಿಕಿರಿಗೆ ಸದ್ಯದಲ್ಲೇ ಗುಡ್ ಬೈ... ಹೇಗಂತೀರಾ?

ಸಮಾರಂಭ ಉದ್ಘಾಟಿಸಿ ಮಾತನಾಡಿದ ಅಭಿಜಿತ್ ಬೋಸ್, ತಂತ್ರಜ್ಞಾನದ ಇತಿಹಾಸ ಅಗಾಧ ಪ್ರಮಾಣದಲ್ಲಿ ವ್ಯಾಪಿಸಿದೆ. ನಾವೆಲ್ಲರೂ ಸಹ ಇದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ನಾವು ಅಪರಿಮಿತಿ ಅರಿವಿನ ಸಾಮರ್ಥ್ಯ ಹೊಂದುವ ಕಿಟಕಿಯ ಮುಂದೆ ಕುಳಿತಿದ್ದೇವೆ. ಮುಂದಿನ ಕೆಲ ವರ್ಷಗಳು ಯಾವ ರೀತಿ ಪ್ರಗತಿ ಕಾಣಲಿವೆ ಎಂದರೆ ಕಳೆದ 10 ವರ್ಷಗಳಲ್ಲಿ ನೀವೆಲ್ಲಾ ಪ್ರಗತಿಯನ್ನು ನೋಡಿದ್ದರೂ, ನಗರ ಹಾಗೂ ದೇಶಗಳ ಬೆಳವಣಿಗೆಯ ಪ್ರಗತಿ ಗಮನಿಸಿದ್ದರೂ, ಮುಂದಿನದನ್ನು ಊಹಿಸಲು ಕೂಡ ಸಾಧ್ಯವಿಲ್ಲ ಅಷ್ಟು ಮಾತ್ರದಲ್ಲಿ ಪ್ರಗತಿ ಹೊಂದಲಿದೆ. ನಾವು ವ್ಯಾಪಾರ ಕ್ಷೇತ್ರದ ಮುಖ್ಯಸ್ಥರಾಗಬೇಕಾದರೆ, ಎಂಜಿನಿಯರ್ ಆಗಬೇಕಾದರೆ ಭಾರತದಲ್ಲಿ ಮಾತ್ರವಲ್ಲದೇ ಜಗತ್ತಿನ ಎಲ್ಲೆಡೆಯೂ ಕೆಲಸ ಮಾಡಲು ಸಿಗುವ ಅವಕಾಶವನ್ನು ಬಳಸಿಕೊಳ್ಳಬೇಕು. ಇದು ಉತ್ತಮ ಪ್ರಗತಿಯನ್ನು ಕೊಡುತ್ತದೆ ಎಂದರು.

ಮುಂದಿನ ವಾಟ್ಸಪ್, ಎಝೆಟಾಪ್, ಫ್ಲಿಫ್‍ಕಾರ್ಟ್

ಮುಂದಿನ ವಾಟ್ಸಪ್, ಎಝೆಟಾಪ್, ಫ್ಲಿಫ್‍ಕಾರ್ಟ್

ಮುಂದಿನ ವಾಟ್ಸಪ್, ಎಝೆಟಾಪ್, ಫ್ಲಿಫ್‍ಕಾರ್ಟ್ ಅಮೆರಿಕದಿಂದ ಬರುತ್ತಿಲ್ಲ, ಬದಲಾಗಿ ಭಾರತದಿಂದ ಬರಲಿದೆ ಎಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ. ನಾನು ಮತ್ತು ನಮ್ಮ ಪತ್ನಿ ಇಬ್ಬರೂ ಕ್ಯಾಲಿಫೋರ್ನಿಯಾದವರು, 14 ವರ್ಷದ ಹಿಂದೆಯೇ ಆ ನಗರ ಬಿಟ್ಟು ಬಂದಿದ್ದರಿಂದ ಮುಂದಿನ 100 ವರ್ಷಗಳು ಏಷ್ಯಾ ಹಾಗೂ ಭಾರತದ ಕೇಂದ್ರಿತವಾಗಿರಲಿದೆ ಎಂದು ಊಹಿಸಿದ್ದೇವೆ. ಇದು 14 ನೇ ವರ್ಷ ನಾವಿಲ್ಲಿ ಕಳೆಯುತ್ತಿರುವುದು. 10 ವರ್ಷದ ಹಿಂದೆಯೇ ನಾನು ಸ್ಯಾನ್‍ಫ್ರಾನ್ಸಿಸ್ಕೋಗೆ ತೆರಳಲು ಭಾವಿಸಿದ್ದೆ. ಆದರೆ ಇಂದಿಗೂ ನಾನು ಇಲ್ಲಿಯೇ ಇದ್ದೇನೆ. ನಮ್ಮ ಮುಂದಿರುವ ಅವಕಾಶಗಳು ಅಪಾರವಾಗಿದೆ. ಇವು ಅಂದು ನಮಗೆ ಸಿಕ್ಕಿಲ್ಲವೆಂದು ಅಸೂಯೆ ಪಡುವ ಜತೆಗೆ ಮುಂದಿನ ಜನಾಂಗದವರಾದ ನಿಮಗೆ ಅಭಿನಂದಿಸುತ್ತೇನೆ. ಇದು ಜೀವಿತಾವಧಿಗೆ ಅತ್ಯದ್ಭುತ ಆಯ್ಕೆಯಾಗಲಿದೆ. ಮೈಕ್ರೊ ಪ್ರೊಸೆಸರ್, ಬೃಹತ್ ಕಂಪ್ಯೂಟಿಂಗ್, ಖಾಸಗಿ ಗಣಕಯಂತ್ರಗಳು, ಸಾಫ್ಟ್‍ವೇರ್‍ಗಳು ಮತ್ತು ಇಂಟರ್‍ನೆಟ್ ಆವಿಷ್ಕಾರವಾಗಿದ್ದರೂ ಇವು ಮುಂದಿನ ಹಾಗೂ ಇಂದಿನ ಪೀಳಿಗೆಯನ್ನು ಜತೆಯಲ್ಲಿ ಪ್ರಗತಿಯತ್ತ ಕೊಂಡೊಯ್ಯುವ ಕಾರ್ಯ ಮಾಡುತ್ತಿವೆ' ಎಂದರು.

ನಿರೀಕ್ಷೆಯಂತೆ ನಾವು ಸೂಕ್ತ ರೀತಿಯಲ್ಲಿ ಸಾಗಿದ್ದೇವೆ

ನಿರೀಕ್ಷೆಯಂತೆ ನಾವು ಸೂಕ್ತ ರೀತಿಯಲ್ಲಿ ಸಾಗಿದ್ದೇವೆ

ಮೊಬೈಲ್ ಇಂಟರ್ಟ್ ನೆಟ್ ನಲ್ಲಿ ಅಪ್ಲಿಕೇಷನ್‍ಗಳು ಮತ್ತು ವಿಚಾರಣೆಗಳು ಮುಂದಿನ ಹಂತದ ಪ್ರಗತಿಯಾಗಿದೆ. ಒಂದು ಹಾಕಿ ಬ್ಯಾಟ್‍ನ ತಿರುವಿನಂತೆ ಯಾವುದೇ ಕಂಪನಿಯ ನಿರೀಕ್ಷೆ ಇರುತ್ತದೆ. ಕಡಿಮೆ ಹೂಡಿಕೆಯಲ್ಲಿ ಅತಿ ಹೆಚ್ಚಿನ ಲಾಭ ಪಡೆಯುವ ಗುರಿ ಹೊಂದಿರುತ್ತವೆ. ಎಝೆಟಾಪ್ ಹಾಗೂ ಹೆಚ್ಚಿನ ಭಾರತೀಯ ಕಂಪನಿಗಳು ಈ ಮಾದರಿಯಲ್ಲಿ ತೆರಳುವುದಿಲ್ಲ. ಈ ಮಟ್ಟದಲ್ಲಿ ಮೇಲೇಳದೇ ಕೆಳಮುಖವಾಗಿ ಹಾಗೂ ಪಕ್ಕದ ಮಾರ್ಗದಲ್ಲಿ ತೆರಳುತ್ತಿವೆ. ಆದರೆ ನಿರೀಕ್ಷೆಯಂತೆ ನಾವು ಸೂಕ್ತ ರೀತಿಯಲ್ಲಿ ಸಾಗಿದ್ದೇವೆ.

ಇಂದಿನ ಜನ ನಿರೀಕ್ಷೆ ಮಾಡುವಂತೆ ನಾವು ಹೈಪರ್ ವೇಗದಲ್ಲಿ ಪ್ರಗತಿ ಸಾಧಿಸಲು ಮುಂದಾದರೆ ನೀವು ಅತ್ಯಂತ ಪ್ರಮುಖವಾದ ಕಠಿಣತೆಯ ಪಾಠವನ್ನು ಕಲಿಯದೇ ತಪ್ಪಿಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹೆಚ್ಚಿನ ಕಂಪನಿಗಳು ತಮಗೆ ವ್ಯತಿರಿಕ್ತ ಬೆಳವಣಿಗೆ ಆದಾಗ ಅದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ಅರಿಯದೇ ಹೋಗಿವೆ. ಇದು ವ್ಯಕ್ತಿಗಳಲ್ಲಿ ಇರಬಹುದು ಇಲ್ಲವೇ ಕಂಪನಿಗಳಲ್ಲಿ ಇರಬಹುದು. ಎರಡಲ್ಲೂ ವ್ಯತ್ಯಾಸವಿಲ್ಲದಂತಾಗಿದೆ. ಕಾಲಾನಂತರದಲ್ಲಿ ನೀವು ತೊಂದರೆಯನ್ನು ಎದುರಿಸಿದರೆ, ಅದು ನಿಮ್ಮನ್ನೇ ಹಿಂಬಾಲಿಸಿ ಬರುತ್ತಿದ್ದರೆ ಕೂಡ ಭಯಪಡದೇ ಮುನ್ನಡೆಯಿರಿ. ಇದು ಭವಿಷ್ಯದಲ್ಲಿ ನಿಮಗೆ ಅಸಾಧ್ಯ ಅನ್ನುವುದರಿಂದ ಅಂತರ ಕಾಪಾಡಿಕೊಳ್ಳಲು ಸಹಕರಿಸುತ್ತದೆ.

90ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿದ್ದರು

90ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿದ್ದರು

ಸ್ಪರ್ಧಾತ್ಮಕ ಪ್ರಗತಿ ಪಡೆಯಲು ಹಾಗೂ ಕಂಪನಿಯನ್ನು ಉಳಿಸಿಕೊಳ್ಳಲು ಈ ಡಿಎನ್‍ಎ ನಿಮಗೆ ಸಾಮರ್ಥ್ಯವನ್ನು ತಂದುಕೊಡಲಿದೆ. ನಾವು ಅನೇಕ ಸಂದರ್ಭದಲ್ಲಿ ಹಣದ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿರುತ್ತೇವೆ. ಎಷ್ಟು ಹಣವನ್ನು ನಾವು ಗಳಿಸಿದ್ದೇವೆ, ಎಷ್ಟು ಜನರನ್ನು ನಾವು ಹೊಂದಿದ್ದೇವೆ, ನಾವು ಗಳಿಸಿದವರನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಯೋಚನೆಯಲ್ಲೇ ಇರುತ್ತೇವೆ. ಮಹತ್ವದ ಕಂಪನಿಗಳು ಜನರಿಗೆ ಮೌಲ್ಯವನ್ನು ತಲುಪಿಸುತ್ತವೆ. ಅಲ್ಲದೇ ಅವರು ಎಲ್ಲಾ ವಿಷಯವನ್ನೂ ಕೇಂದ್ರೀಕರಿಸುವುದಿಲ್ಲ ಎನ್ನುವುದನ್ನು ಗಮನಿಸಬೇಕು. ನಾವು ಆರಂಭದಲ್ಲಿಯೇ ಬಹುತೇಕವಾಗಿ ನಕಾರಾತ್ಮಕ ವಿಚಾರಗಳ ಮೇಲೆ ಗಮನ ಹರಿಸುತ್ತೇವೆ. ಅದನ್ನೇ ಏಕೆ ಎಂದು ಪ್ರಶ್ನಿಸಿಕೊಳ್ಳಬೇಕು' ಎಂದರು. ಎರಡು ದಿನದ ಕಾರ್ಯಕ್ರಮಕ್ಕೆ ಕರ್ನಾಟಕದ ಸುಮಾರು 90 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ.

ಸಿಎಂಆರ್‍ಐಟಿ ಕುರಿತು

ಸಿಎಂಆರ್‍ಐಟಿ ಕುರಿತು

ಸಂಸ್ಥೆಯು 2000 ನೇ ಇಸವಿಯಲ್ಲಿ ಕಾರ್ಯಾರಂಭ ಮಾಡಿದೆ. ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್‍ಐಟಿ)ಯು ಕುಂದಲಹಳ್ಳಿಯ ಎಇಸಿಎಸ್ ಬಡಾವಣೆಯಲ್ಲಿದ್ದು, ಬೆಂಗಳೂರಿನಲ್ಲಿ ನ್ಯಾಕ್ ಸಂಸ್ಥೆಯಿಂದ ಎ+ ಗ್ರೇಡ್ ಪಡೆದ ಏಕೈಕ ಪ್ರೀಮಿಯರ್ ಎಂಜನಿಯರಿಂಗ್ ಕಾಲೇಜಾಗಿದೆ. ಬೆಂಗಳೂರಿನ ಐಟಿ ಕಾರಿಡಾರ್‍ನಲ್ಲಿ ಸ್ಥಾಪಿತವಾಗಿದ್ದು, ಸಿಎಂಆರ್‍ಐಟಿ ಭಾರತೀಯ ಐಟಿ ಕೈಗಾರಿಕೆಗಳಿಗೆ ಹೇರಳ ಸಂಖ್ಯೆಯ ನುರಿತ ಸಿಬ್ಬಂದಿಯನ್ನು ಒದಗಿಸುವ ಕಾರ್ಯ ಮಾಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
City-based CMR Institute of Technology (CMRIT) inaugurated its annual national-level inter-collegiate Cultural, Technical & Management fest ‘CMR Cultura'19’ at their campus today. Mr. Abhijit Bose, CEO, WhatsApp India was the Chief Guest of the inaugural function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more