ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಗಳ ಪ್ರಿಯಕರನನ್ನು ಕೊಂದು ಅಪರಿಚಿತ ಎಂದಿದ್ದ ಅಪ್ಪ ಸೆರೆ!

|
Google Oneindia Kannada News

ಬೆಂಗಳೂರು, ಡಿ. 05: ಮಗಳ ಜತೆ ಅಸಭ್ಯವಾಗಿ ಕಾಣಿಸಿಕೊಂಡಿದ್ದ ಪ್ರಿಯಕರನ ತಲೆಗೆ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದ. ಅಪರಿಚಿತನೊಬ್ಬ ಸಾವನ್ನಪ್ಪಿದ್ದಾನೆ ಎಂದು ಮೃತ ಮಗಳ ಪ್ರಿಯಕರನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದ. ಇನ್ನೇನು ಅನಾಥ ದೇಹ ಎಂದು ವಿಲೇವಾರಿ ಮಾಡುವ ಸಮಯದಲ್ಲಿ ಹಂತಕ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ!

ನಾರಾಯಣ್ ಸಿಕ್ಕಿಬಿದ್ದ ಕೊಲೆ ಆರೋಪಿ. ನಿವೇಶ್ ಕುಮಾರ್ ಕೊಲೆಯಾದ ವ್ಯಕ್ತಿ. ನಾರಾಯಣ ಪುತ್ರಿಯನ್ನು ಪ್ರೀತಿ ಮಾಡುತ್ತಿದ್ದ ನಿವೇಶ್ ಕುಮಾರ್. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಿವೇಶ್ ಕುಮಾರ್ ಮತ್ತು ನಾರಾಯಣ್ ಪುತ್ರ ಏಕಾಂತವಾಗಿ ಕಾಲ ಕಳೆಯುತ್ತಿದ್ದರು. ಇತ್ತೀಚೆಗೆ ಕೆಲಸದ ನಿಮಿತ್ತ ಹೊರ ಹೊಗಿದ್ದ ನಾರಾಯಣ್ ಮನೆಗೆ ಬಂದಾಗ ತನ್ನ ಮಗಳ ಜತೆ ನಿವೇಶ್ ಅಸಭ್ಯ ರೀತಿಯಲ್ಲಿ ಇದ್ದಿದ್ದನ್ನು ನೋಡಿದ್ದಾರೆ. ಇದನ್ನು ಸಹಿಸಲಾಗದೇ ಕಟ್ಟಿಗೆಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ನಾರಾಯಣ್ ಕೊಟ್ಟ ಏಟಿಗೆ ನಿವೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ವಿಚಾರ ಯಾರಿಗಾದರೂ ಹೇಳಿದರೆ ನಿನ್ನ ಜೀವ ತೆಗೆಯುವುದಾಗಿ ಮಗಳಿಗೆ ಹೆದರಿಸಿದ್ದಾನೆ. ಹೀಗಾಗಿ ಆಕೆ ಯಾರಿಗೂ ವಿಷಯ ತಿಳಿಸಿಲ್ಲ.

ನಿವೇಶ್ ಕುಮಾರ್ ಮೃತ ದೇಹವನ್ನು ಸ್ವತಃ ನಿವೇಶ್ ಕುಮಾರ್ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾನೆ. ಅನಾಥ ಶವ ಎಂದು ಬರೆಸಿ ಹೊರ ಬಂದಿದ್ದಾನೆ. ಅಪರಿಚಿತ ಶವ ದೊರೆತ ಬಗ್ಗೆ ವಿವರ ಪಡೆದ ವಿಕ್ಟೋರಿಯಾ ಆಸ್ಪತ್ರೆ ಕಲಾಸಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

The missing case of a young man has turned into a murder case

ಅದಾಗಲೇ ನಿವೇಶ್ ಕುಮಾರ್ ಕಾಣೆಯಾಗಿದ್ದ. ಎರಡು ದಿನವಾದರೂ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಿವೇಶ್ ಕುಮಾರ್ ಕಾಣೆಯಾಗಿರುವ ಬಗ್ಗೆ ಅವರ ಪೋಷಕರು ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ವೇಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 19 ವರ್ಷ ವಯಸ್ಸಿನ ಅಪರಿಚಿತನ ಶವ ಇರುವ ವಿಷಯವನ್ನು ಕಲಾಸಿಪಾಳ್ಯ ಪೊಲೀಸರು ವಿವಿಪುರಂ ಪೊಲೀಸರಿಗೆ ನೀಡಿದ್ದಾರೆ. ನಿವೇಶ್ ಕುಮಾರ್ ಪೋಷಕರನ್ನು ಕರೆಸಿ ಮೃತ ದೇಹ ತೋರಿಸಿದಾಗ ಮೃತಪಟ್ಟಿರುವುದು ನಿವೇಶ್ ಕುಮಾರ್ ಎಂಬುದು ಗೊತ್ತಾಗಿದೆ. ಈ ವೇಳೆ ಅನುಮಾನಗೊಂಡು ನಾರಾಯಣ್ ನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ತನ್ನ ಮಗಳನ್ನು ಪ್ರೀತಿ ಮಾಡುವ ಹೆಸರಿನಲ್ಲಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಅದನ್ನು ಕಣ್ಣಾರೆ ನೋಡಲಾಗದೇ ನಾನೇ ಹತ್ಯೆ ಮಾಡಿದೆ. ಬಂಧನಕ್ಕೆ ಒಳಗಾಗುವ ಭೀತಿಯಿಂದ ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಅನಾಥ ಶವ ಎಂದು ಬರೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಾರಾಯಣ್ ನನ್ನು ವಿವಿಪುರಂ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಕುರಿತು ವಿವಿಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

The missing case of a young man has turned into a murder case

Recommended Video

ಮದುವೆಗೂ ಮುಂಚೆ ಧೋನಿ ಜೊತೆಗಿದ್ದ ರಿಲೇಷನ್ಶಿಪ್ ಬಗ್ಗೆ ಮಾತನಾಡಿದ ಲಕ್ಷ್ಮಿರೈ | Oneindia Kannada

ಎಂಎಲ್ ಸಿ ರಮೇಶ್ ಗೌಡ ವಿರುದ್ಧ ದೂರು: ಆಸ್ತಿ ವಿವಾದ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುನೀಲ್ ಮತ್ತು ಕೀರ್ತಿ ಎಂಬುವರು ರಮೇಶ್ ಗೌಡ ವಿರುದ್ಧ ದೂರು ನೀಡಿದ್ದಾರೆ. ಪ್ರಾಣ ಬೆದರಿಕೆ ಹಾಗೂ ಗನ್ ಇಟ್ಟು ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ರಮೇಶ್ ಗೌಡ ಜತೆ ಗುರುತಿಸಿಕೊಂಡಿದ್ದ ಜಾಯಿದ್ ಕುಮಾರ್ ಎಂಬಾತ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಧಮ್ಕಿ ಹಾಕಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿತ ಎಂಎಲ್ ಸಿ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ದೂರುದಾರರು ಮನವಿ ಮಾಡಿ ಪೊಲೀಸ್ ಠಾಣೆ ಮುಂದೆ ಮೊಕ್ಕಾಂ ಹೂಡಿದ್ದಾರೆ.

English summary
The missing case of a young man has turned into a murder case. VV puram police have arrested a man accused of murdering his daughter's lover know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X