ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್‌ನಲ್ಲಿದ್ದ ತಬ್ಲಿಘಿಗಳು ರೇಸಾರ್ಟ್‌ಗೆ, ಸ್ಥಳೀಯರ ವಿರೋಧ

|
Google Oneindia Kannada News

ಬೆಂಗಳೂರು, ಏ. 24: ಬೆಂಗಳೂರಿನ ಯಲಹಂಕದ ಮಧ್ಯ ಭಾಗದ ಅಳ್ಳಾಳಸಂದ್ರದಲ್ಲಿರುವ ರಾಯಲ್ ಆರ್ಕಿಡ್ ರೆಸಾರ್ಟ್‌ನಲ್ಲಿ ಹಜ್ ಭವನದಲ್ಲಿ ಕ್ವಾರಂಟೈನ್‌ನಲ್ಲಿದ್ದ ತಬ್ಲಿಘಿಗಳನ್ನು ತೆಗೆದುಕೊಂಡು ಬಂದು ಇಟ್ಟಿರುವುದನ್ನು ಸ್ಥಳೀಯ ಶಾಸಕ ಎಸ್.ಆರ್. ವಿಶ್ವನಾಥ್ ವಿರೋಧಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಜನವಸತಿ ಪ್ರದೇಶದಲ್ಲಿ ಇರುವ ರಾಯಲ್ ಆರ್ಕಿಡ್ ರೆಸಾರ್ಟ್‌ನಲ್ಲಿ ಅಕ್ರಮವಾಗಿ ತಬ್ಲಿಘಿಗಳನ್ನು ತಂದು ಏಕಾಏಕಿ ಇಡಲಾಗಿದೆ. ಇದಕ್ಕೂ ಮೊದಲು ಯಾವುದೇ ಮುನ್ಸೂಚನೆಯನ್ನೂ ಕೊಟ್ಟಿಲ್ಲ. ಜನವಸತಿ ಪ್ರದೇಶದಲ್ಲಿ ಇರುವ ರೆಸಾರ್ಟ್‌ಗೆ ಕ್ವಾರಂಟೈನ್‌ನಲ್ಲಿದ್ದ ತಬ್ಲಿಘಿಗಳನ್ನು ಸ್ಥಳಾಂತರಿಸಿರುವುದನ್ನು ಸ್ಥಳೀಯ ನಾಗರಿಕರು ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಪ್ರತಿಭಟನೆ ಮಾಡುವುದರ ಮೂಲಕ ವಿರೋಧಿಸಿದ್ದಾರೆ.

ಯಲಹಂಕದ ಜನತೆ ಚಾಚೂ ತಪ್ಪದೆ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುತ್ತಾ, ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದಾರೆ. ಇಂತಹ ಸಂಣದರ್ಭದಲ್ಲಿ ತಬ್ಲಿಘಿ ತಂದು ಕ್ಷೇತ್ರದ ಜನತೆಗೆ ಮಾರಕವಾಗುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಶಾಸಕ ವಿಶ್ವನಾಥ್ ಹರಿಹಾಯ್ದಿದ್ದಾರೆ.

The locals have opposed the relocation of Tablighis to the resort in Yelhanka

ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪಾದರಾಯನಪುರ ವಾರ್ಡ್‌ ಪುಂಡರು ಪರೋಕ್ಷವಾಗಿ ಮತ್ತಷ್ಟು ಸಮಸ್ಯೆಗಳು ಹುಟ್ಟಲು ಕಾರಣವಾಗಿದ್ದಾರೆ.

The locals have opposed the relocation of Tablighis to the resort in Yelhanka

ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದವರಿಗೆ ಹಜ್‌ಭವನದಲ್ಲಿ ರಾಜಾತಿಥ್ಯ ಮೊಡಲಾಗುತ್ತಿದೆ. ಅಲ್ಲಿದ್ದ ತಬ್ಲಿಘಿಗಳನ್ನು ಜನವಸತಿ ಪ್ರದೇಶಗಳಿಗೆ ಸ್ಥಳಾಂತರ ಮಾಡಿರುವುದು ಸರಿಯಲ್ಲ ಎಂದು ಸ್ಥಳೀಯರು ವಿರೋಧಿಸಿದ್ದಾರೆ.

English summary
The locals have opposed the relocation of Tablighis to the resort in Yelhanka. The natives have objected that the relocation of Tablighi to residential areas is inappropriate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X