• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒರಾಯನ್ ಮಾಲ್ ನಲ್ಲಿ ಫುಟ್ಬಾಲ್ ಹಬ್ಬ - 2014

By Rajendra
|

ಬೆಂಗಳೂರು, ಜು.2: ಹಾಲಿ ಚಾಂಪಿಯನ್ ಸ್ಪೇನ್ ಟೂರ್ನಿಯಿಂದಲೇ ಹೊರಬಿದ್ದಿದ್ದು, ಜರ್ಮನಿ ಹ್ಯಾಟ್ರಿಕ್ ಗೋಲು ಬಾರಿಸಿದ್ದು, ಪೋರ್ಚುಗಲ್ ಆಟಗಾರನಿಗೆ ರೆಫರಿ ರೆಡ್ ಕಾರ್ಡ್ ತೋರಿಸಿದ್ದು, ಯಾವುದೇ ಗೋಲಿಲ್ಲದೆ 2 ಪಂದ್ಯಗಳು ಡ್ರಾ ಆದದ್ದು ಸೇರಿದಂತೆ ಹತ್ತು ಹಲವು ಕುತೂಹಲಗಳೊಂದಿಗೆ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ- 2014 ಮುಂದುವರಿಯುತ್ತಿದೆ.

ಇದಕ್ಕಿಂತ ಕುತೂಹಲಕಾರಿ ಅಂಶಗಳನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಪ್ರೇಮಿಗಳು ಜುಲೈ 13 ರಂದು ನಡೆಯಲಿರುವ ಫೈನಲ್ ವರೆಗೆ ಪ್ರತಿ ಪಂದ್ಯವನ್ನು ತುದಿಗಾಲ ಮೇಲೆ ನಿಂತು ನೋಡುತ್ತಿದ್ದಾರೆ. ಆದರೆ, ದುರಾದೃಷ್ಟವಶಾತ್ ಭಾರತೀಯ ಪ್ರೇಕ್ಷಕರಿಗೆ ಹೆಚ್ಚು ಆನಂದ ಸಿಗದಂತಾಗಿದೆ.

ಏಕೆಂದರೆ, ಬಹುತೇಕ ಪ್ರಮುಖ ಪಂದ್ಯಗಳು ಮಧ್ಯರಾತ್ರಿ (ಭಾರತೀಯ ಕಾಲಮಾನದಂತೆ) ನಡೆಯುತ್ತಿವೆ. ಆದರೆ, ಈಗ ಪ್ರಮುಖ ಪಂದ್ಯಗಳನ್ನು ನೋಡಲು ಸಾಧ್ಯವಾಗಲಿಲ್ಲ ಎಂಬ ಚಿಂತೆ ಮಾಡುವ ಅಗತ್ಯವಿಲ್ಲ. ಫಿಫಾ ವಿಶ್ವಕಪ್ ಬ್ರೆಜಿಲ್ ಇದೀಗ ಬ್ರಿಗೇಡ್ ಗೇಟ್ ವೇಯಲ್ಲಿರುವ ಒರಾಯನ್ ಮಾಲ್ ಗೆ ಲಗ್ಗೆ ಇಟ್ಟಿದೆ.

ಇಲ್ಲಿ 6 ಅಡಿ ಉದ್ದ 6 ಅಡಿ ಅಗಲದ 'ಫುಟ್ಬಾಲ್ - 2014' ಎಂದು ಬರೆದಿರು, ಆಟದ ವಿವಿಧ ಬಣ್ಣಗಳನ್ನು ಒಳಗೊಂಡಿರುವ ಕಟೌಟ್ ಜನರನ್ನು ಮಾಲ್ ಒಳಗೆ ಸ್ವಾಗತಿಸುತ್ತದೆ. ಇದರ ಜೊತೆಗೆ ಒಂದು ಬೃಹತ್ ಗಾತ್ರದ ಫುಟ್ಬಾಲ್ ಕೂಡಾ ಇಡಲಾಗಿದೆ. ಟೂರ್ನಿಯಲ್ಲಿ ಪಾಲ್ಗೊಂಡಿರುವ ಎಲ್ಲಾ 32 ದೇಶಗಳ ರಾಷ್ಟ್ರಧ್ವಜಗಳು ಮಾಲ್ ನ ಕಂಬಗಳಲ್ಲಿ ರಾರಾಜಿಸುತ್ತಿವೆ.

ಚಿನ್ನದ ಫೀಫಾ ವರ್ಲ್ಡ್ ಕಪ್ ಇತಿಹಾಸದಲ್ಲಿ ಅನೇಕ ಬಾರಿ ಕಳೆದು ಹೋಗಿರಬಹುದು. ಅಥವಾ ನೀವು ಅದನ್ನು ನೋಡದೆಯೂ ಇರಬಹುದು. ಈಗ ಒರಾಯನ್ ಮಾಲ್ ನತ್ತ ಬಂದರೆ ಇಲ್ಲಿನ 12 ಅಡಿಯ ಟ್ರೋಫಿಯನ್ನು ನೋಡಿ ಖುಷಿ ಪಡುವ ಅವಕಾಶ ನಿಮಗೆ ಸಿಗುತ್ತದೆ.

ನೀವು ಬೆಂಬಲಿಸುವ ತಂಡದ ಬಣ್ಣಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ನೀವು ಬಯಸಿದರೆ- ಫುಟ್ ಬಾಲ್ ಹಬ್ಬ 2014 ಭಾಗವಹಿಸುತ್ತಿರುವ ತಂಡಗಳು ಮತ್ತು ಜೆರ್ಸಿಗಳ ಬಣ್ಣಗಳೊಂದಿಗೆ ಅನೇಕ ಫೋಟೋ-ಆಪ್ ಅವಕಾಶಗಳಿವೆ. ಇಲ್ಲಿ ನೀವು ನಿಮ್ಮ ಫೋಟೋ ತೆಗೆಸಿಕೊಂಡು ಆನಂದ ಪಡಬಹುದು. ಬ್ರೆಜಿಲ್ ಗೆ ಹೋಗದೆಯೇ ಫುಟ್ಬಾಲ್ ಮಜಾ ಅನುಭವಿಸುವ ಸಂದರ್ಭ ನಿಮಗೆ ಇಲ್ಲಿ ಸಿಗುತ್ತದೆ - ಫ್ಯಾನ್ ಚೀಯರಿಂಗ್ ಫೋಟೋ ಬೂತ್ ಗೆ ಹೋಗಿ, ಫಿಫಾ ಫ್ಯಾನ್ ಮೆಮೊರಬಿಲ್ಲಾದಲ್ಲಿ ಎಷ್ಟು ಸಾಧ್ಯವೋ ಅಷ್ಟು ಛಾಯಾಚಿತ್ರಗಳನ್ನು ಕೂಡಾ ತೆಗೆಸಿಕೊಳ್ಳಬಹುದು.

ಕಸ್ಟಮೈಸೇಶನ್ ಸ್ಟೇಶನ್ ಗಳನ್ನು ಈ ಮಾಲ್ ನಾದ್ಯಂತ ರಚಿಸಲಾಗಿದೆ. ಅದರೊಳಗೆ ಹೆಜ್ಜೆ ಇಟ್ಟು ನೀವು ಬೆಂಬಲಿಸುವ ತಂಡದ ಬಣ್ಣಗಳನ್ನು ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವಂತೆ ಪ್ರತಿಯೊಂದು ರೀತಿಯಲ್ಲಿ- ತಲೆಕೂದಲಿನಿಂದ ಹಿಡಿದು ಉಗುರಿನ ಬಣ್ಣದಿಂದ, ಬಟ್ಟೆಗಳು ಹಾಗೂ ಇನ್ನಷ್ಟು ಸಂಗತಿಗಳ ಮೂಲಕ ಸಿಂಗರಿಸಿಕೊಳ್ಳಬಹುದು.

ಫಿಫಾ ವಿಶ್ವ ಕಪ್ ನ ಹಾಡಿಗೆ ಜತೆಯಾಗಲು ನೀವು ಬಯಸಿದರೆ, ಆಟಕ್ಕೆ ಜತೆಯಾಗುವುದಕ್ಕಿಂತ ಉತ್ತಮವಾದ ಬೇರೆ ವಿಧಾನವಿಲ್ಲ. ಇಲ್ಲಿನ ಮಾಲ್ ನ ಫುಟ್‍ಬಾಲ್ ಹಬ್ಬದಲ್ಲಿ, ಅದಕ್ಕಾಗಿ ನಿಮಗೆ ಅನೇಕ ವಿನೂತನವಾದ ದಾರಿಗಳಿವೆ. ಯಾವುದಾದರೊಂದು ವಾರಾಂತ್ಯದಲ್ಲಿ ಒಬ್ಬ ಕ್ಯಾಮರಾಮನ್ ಮಾಲ್‍ನಾದ್ಯಂತ ನಿಮ್ಮನ್ನು ಹಿಂಬಾಲಿಸುತ್ತಾ ನೀವು ಭಾಗವಹಿಸುವ ವಿವಿಧ ಫುಟ್‍ಬಾಲ್ ಆಧರಿತ ಚಟುವಟಿಕೆಗಳನ್ನು ಹಾಗೂ ನಿಮ್ಮ ಎಲ್ಲಾ ಉದ್ವೇಗ, ಖುಷಿಗಳ ಕ್ಷಣಗಳನ್ನು ನೇರವಾಗಿ ಸೆರೆಹಿಡಿಯುತ್ತಾನೆ. ಈ ವೀಡಿಯೊಗಳು ನಿಮ್ಮ ನೆನಪಿನ ಭಾಗವಾಗುತ್ತವೆ ಮತ್ತು ವಿಶ್ವವೇ ಇದನ್ನು ನೋಡುವ ಸಲುವಾಗಿ ಆನ್‍ಲೈನ್‍ನಲ್ಲಿ ಕೂಡಾ ನೀವು ಇದನ್ನು ಶೇರ್ ಮಾಡಬಹುದು.

ನೆಟ್ಟೆಡ್ ಗೋಲ್ ಆಟವಾಡಿ ಇಲ್ಲಿ ಒಂದು ಗರಿಷ್ಠ ಸೆಟ್ ಗೆಲ್ಲುವವರು ಪುಮಾ ದಿಂದ ಬಹುಮಾನ ಗೆಲ್ಲಬಹುದು. ಅಥವಾ ಗೆಳೆಯರ ಜತೆ ಮುಖಾಮುಖಿಯಾಗಲು ಬಯಸಿದರೆ ಕೇಜ್ ಫುಟ್‍ಬಾಲ್ ಅರೇನಾದೊಳಕ್ಕೆ ಹೋಗಿ, ಕಾರ್ಪೆಟ್ ನ ಮೇಲೆ ಹಾಗೂ ಬೇಲಿಯೊಳಗಿರುವ ಫುಟ್‍ಬಾಲ್ ಮೈದಾನದಲ್ಲಿ ಆರು ಆಟಗಾರರು ಆಡಬಹುದಾಗಿದೆ. (ಒನ್ಇಂಡಿಯಾ ಕನ್ನಡ)

English summary
f you feel you are missing out on the World Cup party, there is no reason to fret. The spirit of the ‘FIFA World Cup Brasil’ has come to Orion Mall at the Brigade Gateway – so brace yourselves for the biggest Football Carnival ever!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X