ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪ್ರವೀಣ್ ಗೋಡ್ಖಿಂಡಿ ಗಾಡ್ಸ್ ಬನ್ಸಿ ತರಂಗ

By Mahesh
|
Google Oneindia Kannada News

ಬೆಂಗಳೂರು, ಜ.5: ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬಾನ್ಸುರಿ ನಿನಾದ ಕೇಳಿ ಬರಲಿದೆ. ನಾಡಿನ ಹೆಮ್ಮೆಯ ಸಂಗೀತಗಾರ ಪ್ರವೀಣ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಕಾರ್ಯಕ್ರಮ ಜ.9ರಂದು ಆಯೋಜನೆಗೊಂಡಿದೆ.

ಗೋಡ್ಖಿಂಡಿ ಸಂಗೀತ ಹಾಗೂ ಶಿಕ್ಷಣ ಮನರಂಜನೆ ಪ್ರೈ ಲಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಆಯೋಜನೆಯ ಎಸ್ ಬಿಐ ಪಿಂಕಾಥಾನ್ 'ದಿ ಫ್ಲೂಟ್ ರಾಕ್ಸ್' ಕಾರ್ಯಕ್ರಮ ಲೈನ್ ಇನ್ ಕಾನ್ಸರ್ಟ್ ಆಗಿದ್ದು ಜ.9 ರಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 7 ಗಂಟೆ ನಂತರ ಆರಂಭಗೊಳ್ಳಲಿದೆ.

ಈ ಸಂಗೀತ ಕಾರ್ಯಕ್ರಮದ ನಿರೂಪಣೆಯನ್ನು ನಟ ವಿನಾಯಕ್ ಜೋಶಿ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರವೀಣ್ ಗೋಡ್ಖಿಂಡಿ ಅಲ್ಲದೆ ಕಿರಣ್ ಗೋಡ್ಖಿಂಡಿ, ಪ್ರದ್ಯುಮ್ನ, ಉಮೇಶ್, ಷಡ್ಜ ಗೋಡ್ಖಿಂಡಿ ಹಾಗೂ ಹೆಸರಾಂತ ಮ್ಯಾಜಿಷಿಯನ್ ಪ್ರಹ್ಲಾದ್ ಆಚಾರ್ಯ ಅವರು ನಿಮ್ಮನ್ನು ರಂಜಿಸಲಿದ್ದಾರೆ. [ಪ್ರವೀಣ್ ಗೊಡ್ಖಿಂಡಿ 'ಗಾಡ್ಸ್ ಬನ್ಸಿ']

ವಿಶೇಷ ಕೊಳಲು ವಾದನ ಕಾರ್ಯಕ್ರಮ : ಸದಾ ಹೊಸತನದ ಹುಡುಕಾಟದಲ್ಲಿರುವ ಪ್ರಸಿದ್ಧ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ವಿಶೇಷ ಕೊಳಲು ವಾದನ ಕಾರ್ಯಕ್ರಮದ ಮೂಲಕ ಹೊಸ ವರ್ಷದ ಆರಂಭವಾಗಲಿದೆ.

The Flute Rocks SBI Pinkathon Pravin Godkhindi

"ಕೆಂಟಾಬಾಸ್ ಫ್ಲೂಟ್" ಎಂದೇ ಹೆಸರಾದ ಸಂಗೀತ ಲೋಕದ ವಿಶಿಷ್ಟ ವಾದ್ಯ ಉಕ್ಕು, ಪಿವಿಸಿಗಳಿಂದ ತಯಾರಾದ ಎಂಟು ಅಡಿ ಎತ್ತರ 5 ಇಂಚು ಅಗಲದ ಈ ದೈತ್ಯ ಕೊಳಲು ವಾದನವನ್ನು ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ ಪ್ರವೀಣ್ ಅವರಿಗೆ ಸಲ್ಲುತ್ತದೆ.

ದೇವರ ಕೊಳಲು ಎಂಬರ್ಥದಲ್ಲಿ ಇದಕ್ಕೆ ಗಾಡ್ಸ್ ಬನ್ಸಿ ಎಂದು ಪ್ರವೀಣ್ ಅವರೇ ಹೆಸರಿಟ್ಟಿದ್ದಾರೆ. ಪ್ರೀತಿಯಿಂದ ಗೆಳೆಯರು ನನ್ನನ್ನ ಕರೆಯೋದು 'ಗಾಡ್ಸ್' ಅಂತ ಹಾಗಾಗಿ ಈ ಹೆಸರು-ಗಾಡ್ಸ್ ಬನ್ಸಿ. ಬನ್ಸಿ ಅಂದರೆ ಬಾನ್ಸುರಿ. ದೇವರ ಕೊಳಲು ದೇವರಿಗೆ ಸಮರ್ಪಿತ ಎಂಬ ಅರ್ಥ ಎಂದು ಪ್ರವೀಣ್ ಹೇಳಿದ್ದಾರೆ.

ಪಾಶ್ಚಾತ್ಯ ಸಂಗೀತವಲ್ಲದೆ ಭಾರತೀಯ ಶಾಸ್ತ್ರೀಯ ಸಂಗೀತದ ರಾಗಗಳನ್ನು ಗಮಕ, ಮೀಂಡ್ ಗಳನ್ನು ಈ ದೈತ್ಯ ವಾದ್ಯದಿಂದ ನುಡಿಸಬಲ್ಲದು ಎಂಬುದನ್ನು ಪ್ರವೀಣ್ ತೋರಿಸಿಕೊಟ್ಟಿದ್ದಾರೆ.

ಶಾಸ್ತ್ರೀಯ ಸಂಗೀತಕ್ಕೆ ಬೇಕಾಗುವ ಮೀಂಡು ಗಳು ಮತ್ತಿ ಗಮಕ್ ಗಳನ್ನು ಹೊರಡಿಸಲು ಪ್ರಯತ್ನ ಪಟ್ಟಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ಶಾಸ್ತ್ರೀಯ ಸಂಗೀತವಲ್ಲದೆ Fusion ಸಂಗೀತದಲ್ಲೂ ಇದನ್ನು ಬಳಸುವ ಯೋಚನೆಗಳನ್ನ ಹೊಂದಿದ್ದೇನೆ ಎಂದು ಪ್ರವೀಣ್ ಹೇಳಿದ್ದಾರೆ.

ಬಾಲ ಪ್ರತಿಭೆ ಪುತ್ರ ಷಡ್ಜನೊಂದಿಗೆ ಜುಗಲ್ ಬಂದಿ, ಫ್ಲೂಟ್ ಅಂಡ್ ಶ್ಯಾಡೋ ಆಟ, ಪ್ರಹ್ಲಾದ್ ಆಚಾರ್ಯ ಅವರ ಮ್ಯಾಜಿಕ್ ಶೋ ಅಲ್ಲದೆ ಕೆಲವು ಅಚ್ಚರಿಗಳನ್ನು ಕೇಳುಗರಿಗೆ ನೀಡುವ ತವಕ ಪ್ರವೀಣ್ ರಲ್ಲಿದೆ.

ಈ ಸುಂದರ ಕಾರ್ಯಕ್ರಮಕ್ಕೆ ಎಸ್ ಬಿಐ ಪಿಂಕಾಥಾನ್ ಪ್ರಯೋಜಕತ್ವ ಒದಗಿಸಿದೆ.ಎಸ್ ಬಿಐ ಪಿಂಕಾಥಾನ್ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಎಸ್ ಬಿಐ ಹಮ್ಮಿಕೊಂಡಿರುವ ಮ್ಯಾರಥಾನ್ ಆಗಿದೆ. ಇದಲ್ಲದೆ ಏರ್ ಟೆಲ್, ಹಂಗರಿ ಬೆಲ್ಸ್, ಮೆರಾಜ್ ಡಿಸೈನರ್ ಸ್ಟುಡಿಯೋ ಸಂಸ್ಥೆಗಳ ಸಹ ಪ್ರಾಯೋಜಕತ್ವವಿದೆ.

ಟಿಕೆಟ್ ಬೆಲೆ: Rs. 250/-, Rs. 500/- and Rs. 1000/-

ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಬುಕ್ ಮಾಡಲು
www.bookurevent.com,
www.bookmyshow.com and www.indianstage.in

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
9845824725

English summary
Godkhindi Music and Edutainment Private Limited and State Bank of India in aid of SBI Pinkathon presents – ‘The Flute Rocks’, a grand fusion concert featuring PravinGodkhindi, live in concert on the 9th of January 2015, 7 p.m. onwards at Chowdaiah Memorial Hall, Bengaluru. The event is hosted by Vinayak Joshi and also features Kiran Godkhindi, Pradyumna, Umesh, ShadajGodkhindi and renowned magician Prahalad Acharya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X