ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಿಂದ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಶ

|
Google Oneindia Kannada News

ಬೆಂಗಳೂರು, ಆಗಸ್ಟ್‌ 12: ಬೆಂಗಳೂರಿನಿಂದ ಮಾಲೆ (ಮಾಲ್ಡೀವ್ಸ್) ಗೆ ಹೊರಟಿದ್ದ ಗೋ ಫಸ್ಟ್ ವಿಮಾನವು ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಅಲಾರಾಂ ರಿಂಗಣಿಸಿದ ನಂತರ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಶುಕ್ರವಾರ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಇಂಜಿನ್‌ನಲ್ಲಿ ಅಧಿಕ ಶಾಖ ಉತ್ಪಾದನೆಯಾಗಿದ್ದರಿಂದ ಎಚ್ಚರಿಕೆಯ ಅಲಾರಾಂ ಸದ್ದು ಮಾಡಿತು. ನಂತರ ವಿಮಾನ ಲ್ಯಾಂಡ್ ಮಾಡಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ನೀಡಿದ ಮಾಹಿತಿ ಅಂತೆ, ಏರ್‌ಬಸ್ 320 ಅನ್ನು ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇಳಿಸಲಾಯಿತು. ಅವಳಿ ಇಂಜಿನ್‌ಗಳು ಹೆಚ್ಚು ಬಿಸಿಯಾದ ನಂತರ ಅಲಾರಂ ಆಫ್ ಆಯಿತು. ಬಳಿಕ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಇಂಜಿನಿಯರ್‌ಗಳು ಇಂಜಿನ್‌ಗಳನ್ನು ಪರಿಶೀಲಿಸಿ ಅದರಲ್ಲಿ ದೋಷವಿದೆ ಎಂದರು. ಬಳಿಕ ವಿಮಾನವು ಪ್ರಯಾಣಿಸಲು ಯೋಗ್ಯವಾಗಿದೆ ಎಂದು ಘೋಷಿಸಿದರು.

ಬೆಂಗಳೂರು; ಕೆಐಎನಲ್ಲಿ 20 ಮೀಟರ್‌ ಉದ್ದದ ಸ್ಮಾರಕ ಶಿಲ್ಪ ನಿರ್ಮಾಣಬೆಂಗಳೂರು; ಕೆಐಎನಲ್ಲಿ 20 ಮೀಟರ್‌ ಉದ್ದದ ಸ್ಮಾರಕ ಶಿಲ್ಪ ನಿರ್ಮಾಣ

92 ಪ್ರಯಾಣಿಕರೊಂದಿಗೆ ವಿಮಾನವು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕರ್ನಾಟಕದ ಬೆಂಗಳೂರಿನಿಂದ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ಹೊರಟಿತ್ತು. ವಿಮಾನ ಟೇಕ್ ಆಫ್ ಆದ ಒಂದು ಗಂಟೆಯ ನಂತರ ಇಂಜಿನ್ ಹೆಚ್ಚು ಬಿಸಿಯಾಗಿ ಎಚ್ಚರಿಕೆ ಗಂಟೆ ಸದ್ದು ಮಾಡಿತು. ಇದರಿಂದ ಆಘಾತಕ್ಕೊಳಗಾದ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸಿ ಸಮೀಪದ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ಕೋರಿದರು. ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡಲಾಗಿದೆ. ವಿಮಾನ ಲ್ಯಾಂಡ್ ಆದ ನಂತರ ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡದವರು ಸನ್ನದ್ಧವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ಗಂಟೆಯ ನಂತರ ಮಾಲ್ಡೀವ್ಸ್‌ಗೆ ಪ್ರಯಾಣ

5 ಗಂಟೆಯ ನಂತರ ಮಾಲ್ಡೀವ್ಸ್‌ಗೆ ಪ್ರಯಾಣ

ಮಧ್ಯಾಹ್ನ 12.57ಕ್ಕೆ ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಪ್ರಯಾಣಿಕರನ್ನು ಇಳಿಸಲಾಯಿತು ಮತ್ತು ಇಡೀ ವಿಮಾನವನ್ನು ಪರಿಶೀಲನೆ ನಡೆಸಲಾಯಿತು. ವಿಮಾನದಲ್ಲಿ ದಹನದ ಯಾವುದೇ ಲಕ್ಷಣಗಳು ಕಂಡು ಬರಲಿಲ್ಲ. ಕೆಲವು ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿ ಸಂಜೆ 5 ಗಂಟೆಯ ನಂತರ ವಿಮಾನವು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ಹೊರಟಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ಮೆಮು ರೈಲು ಸೇವೆ ಆರಂಭ

ಸುರಕ್ಷತೆಗೆ ಯಾವುದೇ ರಾಜಿ ಮಾಡಿಕೊಳ್ಳಬೇಡಿ

ಸುರಕ್ಷತೆಗೆ ಯಾವುದೇ ರಾಜಿ ಮಾಡಿಕೊಳ್ಳಬೇಡಿ

ಇದಕ್ಕೂ ಮುನ್ನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಳೆದ 48 ಗಂಟೆಗಳಲ್ಲಿ ದೇಶದ ವಿಮಾನ ನಿಲ್ದಾಣಗಳಲ್ಲಿ ಮೂರು ತುರ್ತು ಲ್ಯಾಂಡಿಂಗ್‌ಗಳ ನಂತರ ವಾಯು ಸುರಕ್ಷತೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಪ್ರಯಾಣಿಕರ ಸುರಕ್ಷತೆಗೆ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಿಂಧ್ಯಾ ನಿರ್ದೇಶನ ನೀಡಿದರು.

ಸುರಕ್ಷತಾ ಮಾನದಂಡ ಅನುಸರಿಸಲು ಸೂಚನೆ

ಸುರಕ್ಷತಾ ಮಾನದಂಡ ಅನುಸರಿಸಲು ಸೂಚನೆ

ಪ್ರಯಾಣಿಕರ ಸುರಕ್ಷತೆ ಅತ್ಯಂತ ಪ್ರಮುಖ ಆದ್ಯತೆಯಾಗಿದೆ. ಸುರಕ್ಷತಾ ವಿಷಯಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಅತ್ಯುನ್ನತ ಸುರಕ್ಷತಾ ಮಾನದಂಡಗಳನ್ನು ನಿರ್ವಹಿಸಲು ಸಚಿವಾಲಯವು ನಿರ್ದೇಶನವನ್ನು ನೀಡಿದೆ ಎಂದು ಅವರು ಹೇಳಿದರು.

ಇತ್ತೀಚಿಗೆ ಒಂದೇ ದಿನದಲ್ಲಿ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ವಾಹಕಗಳ ಮೂರು ವಿಮಾನಗಳು ತುರ್ತು ಭೂಸ್ಪರ್ಶ ಮಾಡಿದ್ದು, ಇದು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ತಾಂತ್ರಿಕ ತುರ್ತು ಪರಿಸ್ಥಿತಿಯ ದಿನವಾಗಿದೆ. ಶುಕ್ರವಾರ ಮತ್ತು ಶನಿವಾರದಂದು ಕ್ಯಾಲಿಕಟ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ತುರ್ತು ಲ್ಯಾಂಡಿಂಗ್‌ಗಳನ್ನು ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಅರೇಬಿಯಾ ವಿಮಾನ ತುರ್ತು ಲ್ಯಾಂಡಿಂಗ್‌

ಏರ್ ಅರೇಬಿಯಾ ವಿಮಾನ ತುರ್ತು ಲ್ಯಾಂಡಿಂಗ್‌

ವಿವಿಧ ತಾಂತ್ರಿಕ ಸಮಸ್ಯೆಗಳಿಂದಾಗಿ ಎಲ್ಲಾ ತುರ್ತು ಲ್ಯಾಂಡಿಂಗ್‌ಗಳು ಸಂಭವಿಸಿವೆ. ಏರ್ ಅರೇಬಿಯಾ ವಿಮಾನವು ಶಾರ್ಜಾದಿಂದ ಕೊಚ್ಚಿನ್‌ಗೆ ಜಿ9-426 ಹಾರಾಟ ನಡೆಸುತ್ತಿದ್ದಾಗ ಹೈಡ್ರಾಲಿಕ್ ವೈಫಲ್ಯಕ್ಕೆ ಒಳಗಾಯಿತು. ವಿಮಾನವು ರನ್‌ವೇಯಲ್ಲಿ ಸುರಕ್ಷಿತವಾಗಿ ಇಳಿಯಿತು.

English summary
A GoFirst flight from Bengaluru to Male (Maldives) made an emergency landing at the Coimbatore airport after an engine malfunction and an alarm sounded, officials said on Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X