ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೂತನ ಶಿಕ್ಷಣ ನೀತಿ ಕಾರ್ಯಾಗಾರ: ನೀವೂ ಭಾಗವಹಿಸಬಹುದು!

|
Google Oneindia Kannada News

ಬೆಂಗಳೂರು, ಆ. 24: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅಳವಡಿಸಿಕೊಳ್ಳಲು ಮಹತ್ವದ ಪ್ರಯತ್ನಗಳು ಆರಂಭವಾಗಿವೆ. ಬೆಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಐದು ದಿನಗಳ ಕಾಲ ನಡೆಯುವ ಕಾರ್ಯಗಾರ ಇಂದಿನಿಂದ (ಆಗಸ್ಟ್ 24) ಆಗಷ್ಟ್‌ 28ರ ವರೆಗೆ ನಡೆಯಲಿದೆ. ಜೂಮ್ ಆ್ಯಪ್‌ ಮೂಲಕ ಕಾರ್ಯಾಗಾರ ನಡೆಯಲಿದ್ದು, ಆಸಕ್ತರು ಭಾಗವಹಿಸ ಬಹುದಾಗಿದೆ.

Recommended Video

Sindhya ತೊರೆದ ನಂತರ ಕಾಂಗ್ರೆಸ್ ಪುನರುಜ್ಜೀವನಗೊಂಡಿದೆ-Digvijay singh!?! | Oneindia Kannada

ಐದು ದಿನಗಳ ಕಾರ್ಯಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಸಂಪೂರ್ಣ ಮಾಹಿತಿಯನ್ನು ಹಾಗೂ ಅದರ ಅನುಷ್ಠಾನದ ಬಗ್ಗೆ ಸವಿವರವಾಗಿ ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಗೆ, ಸಂಶೋಧನಾ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಅಧಿಕಾರಿಗಳಿಗೆ ಪೋಷಕರುಗಳಿಗೆ ಹಾಗೂ ಎಲ್ಲಾ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಮೊದಲ ಬಾರಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನಿರ್ದೇಶನದಂತೆ ಕಾರ್ಯಾಗಾರ ನಡೆಸುತ್ತಿದೆ.

ಹತ್ತು ಸಾವಿರ ಜನರು ಭಾಗಿ

ಹತ್ತು ಸಾವಿರ ಜನರು ಭಾಗಿ

ಈ ಐದು ದಿನಗಳ ಕಾರ್ಯಕ್ರಮಕ್ಕೆ ಈಗಾಗಲೇ ಹತ್ತು ಸಾವಿರ ಜನ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ಹಾಗೂ ಪೋಷಕರು, ಸಾರ್ವಜನಿಕರೆಲ್ಲರೂ ದೇಶದ ವಿವಿಧ ಭಾಗಗಳಿಂದ ಭಾಗವಹಿಸುತ್ತಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ವೇಣುಗೋಪಾಲ್ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಆರ್ ಎಸ್ಎಸ್: ಎಲ್ಲಿಂದೆಲ್ಲಿ ನಂಟು?ರಾಷ್ಟ್ರೀಯ ಶಿಕ್ಷಣ ನೀತಿ-2020 ಮತ್ತು ಆರ್ ಎಸ್ಎಸ್: ಎಲ್ಲಿಂದೆಲ್ಲಿ ನಂಟು?

ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಅವರು ಉದ್ಘಾಟನೆ ಮಾಡಲಿದ್ದು, ದೆಹಲಿಯ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ಡಿ. ಪಿ. ಸಿಂಗ್ ಮುಖ್ಯ ಭಾಷಣ ಮಾಡಲಿದ್ದಾರೆ.

ಭಾಗವಹಿಸುವುದು ಹೇಗೆ?

ಭಾಗವಹಿಸುವುದು ಹೇಗೆ?

ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಕಾರ್ಯಾಗಾರ ನಡೆಯುವ ಐದು ದಿನಗಳಲ್ಲೂ ಜೂಮ್ ಐಡಿ 8710528 4169 ಹಾಗೂ ಪಾಸ್ವರ್ಡ್ BUB123 ಬಳಸಿ ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗಾಗಿ ಡಾ. ವಾಹಿನಿ ಹಾಗೂ ಡಾ. ಎನ್. ಸತೀಶ್ ಗೌಡ ಅವರ 94822 18980/9916007211 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಸಂಪನ್ಮೂಲ ವ್ಯಕ್ತಿಗಳು

ಸಂಪನ್ಮೂಲ ವ್ಯಕ್ತಿಗಳು

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಕೌನ್ಸಿಲ್ನ ಅಧ್ಯಕ್ಷ ಪ್ರೊ. ಅನಿಲ್ ಸಹಸ್ರ ಬುಂಡೆ, ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಭೂಷಣ ಪ್ರೊ. ಬಲರಾಮ್, ನ್ಯಾಕ್ ನಿರ್ದೇಶಕ ಪ್ರೊ. ಎಸ್. ಸಿ. ಶರ್ಮ, ಡಿ.ಆರ.ಡಿ.ಓ ವಿಶ್ರಾಂತ ಕುಲಪತಿ ಪ್ರೊ. ಎಲ್ ಎಂ. ಪಾಟ್ನಾಯಕ್, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಹಾಗೂ ರಾಷ್ಟ್ರೀಯ ಶಿಕ್ಷಣ ಕರಡು ನೀತಿಯ ಸದಸ್ಯ ಪ್ರೊಫೆಸರ್ ಎಂ ಕೆ. ಶ್ರೀಧರ್, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಸ್ ಸಚ್ಚಿದಾನಂದ, ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಕೆ. ಸೂರಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ ಸಿದ್ದಪ್ಪ, ಪ್ರೊ. ಎಚ್.ಎ‌. ರಂಗನಾಥ, ಪ್ರೊ. ಬಿ. ತಿಮ್ಮೇಗೌಡ ಅವರುಗಳು ಭಾಗವಹಿಸಲಿದ್ದಾರೆ.

ಪ್ರಮುಖ ಭಾಷಣಕಾರರು

ಪ್ರಮುಖ ಭಾಷಣಕಾರರು

ಜೈನ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಂದೀಪ ಶಾಸ್ತ್ರಿ, ಕರ್ನಾಟಕ ರಾಜ್ಯ ಇನ್ನೋವೇಟಿವ್ ಕೌನ್ಸಿಲ್ ಅಧ್ಯಕ್ಷ ಪ್ರೊಫೆಸರ್ ಎಚ್ಪಿ ಕಿಂಚ, ರಾಷ್ಟ್ರೀಯ ಕಾನೂನು ಶಾಲೆಯ ಮಾಜಿ ಕುಲಪತಿ ಪ್ರೊ.ಕೆ.ಆರ್ ವೆಂಕಟರಾವ್, ಅಕಾಡೆಮಿ ಕ್ರಿಯೇಟಿವ್ ಟೀಚಿಂಗ್ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಗುರುರಾಜ್ ಕರ್ಜಗಿ, ಬಯೋಕಾನ್ ನಿರ್ದೇಶಕರಾದ ಪ್ರತಿಮ ರಾವ್, ಜಿ .ಆರ್. ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ. ಗೀತಾ ರಾಮಾನುಜಂ, ಎಸ್ಎಸ್ ಬಿಆರ್ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಮಾನಸ ನಾಗಭೂಷಣಂ, ಅಜೀಮ್ ಪ್ರೇಮ್‌ಜೀ ವಿಶ್ವವಿದ್ಯಾಲಯದ ಪ್ರೊಫೆಸರ್ ರಿಷಿಕೇಶ್, ಇವರೆಲ್ಲ ಸಂಪನ್ಮೂಲ ವ್ಯಕ್ತಿಗಳು ಐದು ದಿನಗಳ ಕಾರ್ಯಾಗಾರದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸುತ್ತಿದ್ದಾರೆ.

English summary
Significant efforts have begun to adopt the National Education Policy 2020 in the state. The National Education Policy 2020 Symposium is being held under the auspices of the Bengaluru University. The five-day workshop will run from today (August 24) to August 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X