ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶರತ್ ಬಚ್ಚೇಗೌಡ ಉಚ್ಛಾಟನೆ?: ಮುಂದಿರುವ ಷರತ್ತುಗಳೇನು

|
Google Oneindia Kannada News

ಬೆಂಗಳೂರು, ನವೆಂಬರ್ 17: ಇವತ್ತು ಸಂಜೆಯೊಳಗೆ ಶರತ್ ಬಚ್ಚೇಗೌಡ ನಿಗಮ ಮಂಡಳಿಗೆ ರಾಜೀನಾಮೆ ಕೊಡಲಿ, ಇಲ್ಲವಾದಲ್ಲಿ ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ನೂರಕ್ಕೆ ನೂರು ಪಾಲು ಸೋಲ್ತಾರೆ,ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡ್ತೇವೆ,ಅವರಿಗೆ ಕೊಟ್ಟಿರುವ ಹೌಸಿಂಗ್ ಬೋರ್ಡ್ ಅಧ್ಯಕ್ಷ ಸ್ಥಾನ ವಾಪಸ್ ಪಡೆಯುತ್ತೇವೆ.

ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸೋದು ಗೊತ್ತಿತ್ತು: ಯಡಿಯೂರಪ್ಪಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸೋದು ಗೊತ್ತಿತ್ತು: ಯಡಿಯೂರಪ್ಪ

ಹೊಸಕೋಟೆಯಲ್ಲಿ ಎಂಟಿಬಿ ಗೆಲ್ಲೋದು ನಿಶ್ಚಿತ,ಇವತ್ತು ಸಂಜೆಯೊಳಗೆ ಶರತ್ ಬಚ್ಚೇಗೌಡ ನಿಗಮ ಮಂಡಳಿಗೆ ರಾಜೀನಾಮೆ ಕೊಡಲಿ ಎಂದು ಹೇಳಿದ್ದಾರೆ.

ಎಂಟಿಬಿ ನಾಗರಾಜ್ ಪ್ರಾಮಾಣಿಕ ವ್ಯಕ್ತಿ

ಎಂಟಿಬಿ ನಾಗರಾಜ್ ಪ್ರಾಮಾಣಿಕ ವ್ಯಕ್ತಿ

ಎಂಟಿಬಿ ನಾಗರಾಜ್ ಅವರಂತಹ ಪ್ರಾಮಾಣಿಕ ವ್ಯಕ್ತಿ ಮತ್ತೊಬ್ಬರು ಸಿಗಲ್ಲ,ಎಂಟಿಬಿ ವಿರುದ್ಧ ಕಾಂಗ್ರೆಸ್ ನವ್ರು ಏನೇನೋ ಆರೋಪ ಮಾಡ್ತಿದಾರೆ,ಎಂಟಿಬಿ ಹೊಸಕೋಟೆಯಲ್ಲಿ ಗೆಲ್ಲೋದು ನಿಶ್ಚಿತ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಸಿದ್ದರಾಮಯ್ಯ ಮತ್ತು ಟೀಮ್ ಗೆ ದೂರು ಕೊಡೋದೆ ಕೆಲಸ

ಸಿದ್ದರಾಮಯ್ಯ ಮತ್ತು ಟೀಮ್ ಗೆ ದೂರು ಕೊಡೋದೆ ಕೆಲಸ

ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿರುವ ವಿಚಾರ ಕುರಿತು ಮಾತನಾಡಿರುವ ಅವರು, ಸಿದ್ದರಾಮಯ್ಯ ಮತ್ತು ಟೀಮ್ ಗೆ ದೂರು ಕೊಡೋದೆ ಕೆಲಸ,ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ,ಅನರ್ಹ ಶಾಸಕನ್ನು ಮಂತ್ರಿ ಮಾಡ್ತೇನೆ ಎನ್ನೋದು ಮುಖ್ಯಮಂತ್ರಿ ಆಗಿ ಹೇಳೋದು ನನ್ನ ಕರ್ತವ್ಯ,ಪ್ರತಿ ಕ್ಷೇತ್ರಕ್ಕೆ ಹೋದಾಗಲೂ ಇದನ್ನೆ ಹೇಳ್ತೇನೆ.ಅವರು ತ್ಯಾಗ ಮಾಡಿದ್ದಾರೆ. ಅವರನ್ನು ಮಂತ್ರಿ ಮಾಡೆ ಮಾಡ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

15 ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುತ್ತೇವೆ

15 ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುತ್ತೇವೆ

15 ಕ್ಕೆ 15 ಕ್ಷೇತ್ರದಲ್ಲೂ ಗೆಲ್ಲುತ್ತೇವೆ,ಎಲ್ಲ ಕಡೆ ಹೋಗಿ ಪ್ರಚಾರ ಮಾಡ್ತೇನೆ,ಅವರನ್ನು ಗೆಲ್ಲಿಸಬೇಕು ಅಂತ ಎಲ್ಲಾರಿಗೂ ಮನವಿ ಮಾಡುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಅಭ್ಯರ್ಥಿಗಳಿದ್ದಾರೆ ನಾವು ಗೆದ್ದೇ ಗೆಲ್ತೀವಿ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಶಮನವಾಗದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಬಂಡಾಯ

ಶಮನವಾಗದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಬಂಡಾಯ

ರಾಣೆಬೆನ್ನೂರು ಟಿಕೆಟ್ ಬಿಜೆಪಿ ಮುಖಂಡ ಡಾ.ಬಸವರಾಜ ಕೆಲಗಾರಗೆ ನೀಡುವಂತೆ ಆಗ್ರಹ ಮಾಡಿದ್ದಾರೆ. ಸಿಎಂ ಭೇಟಿ ಮಾಡಿ ಟಿಕೆಟ್ ಗೆ ಒತ್ತಾಯ ಮಾಡಿದ್ದಾರೆ. ಈಗ ಟಿಕೆಟ್ ಕೊಟ್ಟಿರುವ ಅರುಣ್ ಕುಮಾರ್ ಎಂ ಜಿ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಅರುಣ್ ಕುಮಾರ್ ಗೆಲ್ಲುವ ಸಾಧ್ಯತೆಯೂ ಇಲ್ಲ,ಅರುಣ್ ಕುಮಾರ್ ಪರ ನಾವೆಲ್ಲ ಕೆಲಸ ಮಾಡಲ್ಲ.ಸಿಎಂ ಎದುರು ಬಸವರಾಜ ಕೆಲಗಾರರ ಬೆಂಬಲಿಗರಿಂದ ಆಗ್ರಹ. ನಾವ್ಯರೂ‌ ಅಭ್ಯರ್ಥಿ ಅರುಣ್ ಕುಮಾರ್ ಪರ ಕೆಲಸ ಮಾಡಲ್ಲ ಎಂದು ಸಿಎಂಗೇ ಹೇಳಿ ಹೋದ ಕೆಲಗಾರ ಬೆಂಬಲಿಗರು,ಬಸವರಾಜ ಕೆಲಗಾರ ಬೆಂಬಲಿಗರ‌ರ ಜೊತೆ ಸಿಎಂ ಮನವೊಲಿಕೆ ವಿಫಲವಾಗಿದೆ.

English summary
Chief Minister BS Yediyurappa said Sharath Bache Gowda Should Resign corporation Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X