ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹ್ಯಾರಿಸ್‌ ಇದ್ದ ವೇದಿಕೆಯಲ್ಲಿ ಸ್ಫೋಟ: ಆರ್ ಅಶೋಕ್ ಏನಂದ್ರು?

|
Google Oneindia Kannada News

ಬೆಂಗಳೂರು, ಜನವರಿ 23: ಕಾಂಗ್ರೆಸ್ ಸಚಿವ ಎನ್‌ಎ ಹ್ಯಾರಿಸ್ ಭಾಗವಹಿಸಿದ್ದ ಸಭೆಯಲ್ಲಿ ಸ್ಫೋಟ ಸಂಭವಿಸಿದ್ದು ಮುಂಚಿತವಾಗಿ ಸಂಚು ರೂಪಿಸಲಾಗಿತ್ತೇ ಎನ್ನುವ ಕುರಿತು ತನಿಖೆ ನಡೆಸಬೇಕಿದೆ ಎಂದು ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ನಗರದ ವಿವೇಕನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಲಘು ಸ್ಫೋಟ ಸಂಭವಿಸಿ ಶಾಸಕ ಹ್ಯಾರಿಸ್‌ ಗೆ ಗಾಯವಾಗಿತ್ತು. ಹ್ಯಾರಿಸ್ ಅವರನ್ನು ಸೆಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹ್ಯಾರಿಸ್ ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಹ್ಯಾರಿಸ್‌ ಅವರ ತೊಡೆ ಮತ್ತು ಕಿವಿ ಭಾಗಕ್ಕೆ ಗಾಯಗಳಾಗಿವೆ ಎಂದು ಹ್ಯಾರಿಸ್ ಪುತ್ರ ನಲಪಾಡ್ ಹೇಳಿದ್ದರು.

ಬೆಂಗಳೂರಿನಲ್ಲಿ ಲಘು ಸ್ಫೋಟ: ಶಾಸಕ ಹ್ಯಾರಿಸ್‌ ಗೆ ಗಾಯಬೆಂಗಳೂರಿನಲ್ಲಿ ಲಘು ಸ್ಫೋಟ: ಶಾಸಕ ಹ್ಯಾರಿಸ್‌ ಗೆ ಗಾಯ

ಕೆಲವರು ಅಣಕು ಪ್ರದರ್ಶನ ಅಂತಾರೆ ಇನ್ನು ಕೆಲವರು ಅದು ಪಟಾಕಿ ಎನ್ನುವ ಮಾತು ಕೇಳಿಬರ್ತಿದೆ. ಹ್ಯಾರಿಸ್ ಕ್ಷೇತ್ರದಲ್ಲಿ ಪ್ರಬಲ ನಾಯಕರಾಗಿದ್ದಾರೆ. ಹ್ಯಾರಿಸ್ ಕ್ಷೇತ್ರದಲ್ಲಿ ನಡೆದಿರುವುದು ಪ್ರೀ ಪ್ಲಾನಾ ಎನ್ನುವ ಕುರಿತು ಗೊಂಗಲ ಮೂಡಿದೆ.

The Explosion On The Stage Where Haris Was What Ashok Said

ಇನ್ನು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿರುವ ಆರ್ ಅಶೋಕ್ ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಗೆ ಹೋಗುತ್ತೆ ಅನ್ನೋ ಆತಂಕ ಹೆಚ್ಡಿಕೆಯನ್ನ ಕಾಡುತ್ತಿರಬೇಕು. ಅವರು ಅಧಿಕಾರ ದಲ್ಲಿರೋವಾಗ ಪೊಲೀಸರು ಬೇಕಿತ್ತು.ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ ಎಂದರು.

English summary
Shantinagar Congress Member of Legislative Assembly (MLA) NA Harris was injured along with three others in a suspected explosion at Vivek Nagar in the city on January 22 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X