ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮಾರ್ಚ್ 09ರಂದು ಶೈಕ್ಷಣಿಕ ಬೆಳವಣಿಗೆ ಶೃಂಗಸಭೆ

|
Google Oneindia Kannada News

ಬೆಂಗಳೂರು,ಜನವರಿ 27: ಬೆಂಗಳೂರಿನಲ್ಲಿ ಮಾರ್ಚ್ 2109

ಈ ಕುರಿತು ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಆಗುತ್ತಿದೆ. ಕೊರೊನಾ ಸೋಂಕು ಎಲ್ಲೆಡೆ ಆವರಿಸಿದ್ದ ಸಮಯದಲ್ಲಿ ದೂರದಿಂದಲೇ ಕಲಿಸುವ ವೇದಿಕೆಗಳ ಮಹತ್ವ ಹೆಚ್ಚಾಗಿದ್ದು, ಅವುಗಳ ಅನಿವಾರ್ಯತೆಯ ಮಹತ್ವ ತಿಳಿದಿದೆ.

ಈ ಕ್ಷೇತ್ರದಲ್ಲಿ ಡಿಜಿಟಲ್ ವ್ಯವಸ್ಥೆಯ ಅಗತ್ಯತೆ ಈಗ ಮಹತ್ವ ಪಡೆದುಕೊಂಡಿದೆ.ನೂತನ ರಾಷ್ಟ್ರೀಯ ಶೈಕ್ಷಣಿಕ ನೀತಿ ಕೂಡ ಶಿಕ್ಷಣ ವ್ಯವಸ್ಥೆಯ ಭವಿಷ್ಯದ ಬಗ್ಗೆ ಸ್ಪಷ್ಟತೆ ನೀಡುವಂತೆ ಸೂಚಿಸಿದೆ. ಇದರ ಪರಿಣಾಮ ಬಹಳಾ ಆಳಕ್ಕೆ ಇಳಿದಿದ್ದು, ಇದರಿಂದ ಅವಕಾಶಗಳು, ಚರ್ಚೆಗಳು ಮತ್ತು ಸಮಾಲೋಚನೆಗಳು ಹೆಚ್ಚಾಗಿವೆ. ಹೀಗಾಗಿ ಈ ಬಗ್ಗೆ ನೀತಿ ನಿರ್ಮಾಪಕರು, ಶಿಕ್ಷಣ ತಜ್ಞರು ಮತ್ತು ಇತರ ಮಧ್ಯಸ್ಥಗಾರರು ಒಗ್ಗೂಡಿ ಮಹತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಶೈಕ್ಷಣಿಕ ಬೆಳವಣಿಗೆ ಶೃಂಗಸಭೆ ವೇದಿಕೆ ಆಗಲಿದೆ.

The Education Growth Summit 2021 On March 21St In Bengaluru

ಶೈಕ್ಷಣಿಕ ಬೆಳವಣಿಗೆ ಶೃಂಗಸಭೆ (ಟಿಇಜಿಎಸ್‌, ದಿ ಎಜುಕೇಷನ್‌ ಗ್ರೋತ್‌ ಸಮಿತ್) ಕೆ2 ಲರ್ನಿಂಗ್ ರಿಸೋರ್ಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ತೆಗೆದುಕೊಂಡಿರುವ ಮಹತ್ವಾಂಕಾಂಕ್ಷೀಯ ಕಾರ್ಯಕ್ರಮವಾಗಿದೆ. ಇದು ನಿರ್ದೇಶಕರು, ಟ್ರಸ್ಟೀಗಳು, ಪ್ರಾಂಶುಪಾಲರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ನಿರ್ಣಯಗಾರರನ್ನು ಒಗ್ಗೂಡಿಸಲು ನಿರ್ಮಿಸಲಾಗಿರುವ ವೇದಿಕೆ ಆಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಸ್ಟಾರ್ಟ್‌ಅಪ್‌ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಇಲ್ಲಿ ಭಾಗವಹಿಸಿ ತಂತ್ರಜ್ಞಾನ ಅಳವಡಿಕೆ ಕುರಿತಾಗಿ ಚರ್ಚೆ ಮಾಡಲಿದ್ದಾರೆ.

"ಶಿಕ್ಷಣ ಕ್ಷೇತ್ರದ ಕಡೆಗೆ ನಮ್ಮ ಗಮನ ಹೆಚ್ಚಿರುವ ಅಗತ್ಯವಿದೆ. ಸಾಮಾಜಿಕವಾಗಿಯೂ ಮತ್ತು ಸರ್ಕಾರದ ದೃಷ್ಟಿಯಿಂದಲೂ ಈ ಕಡೆಗೆ ಗಮನ ನೀಡಬೇಕು. ದೇಶದ ಯುವ ಪೀಳಿಗೆ ಜಾಗತಿಕ ಮಟ್ಟದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಮರ್ಥವಾಗುವಂತೆ ಮಾಡಲು ಎಲ್ಲರೂ ಶ್ರಮಿಸಬೇಕಿದೆ," ಎಂದು ಬೆಂಗಳೂರು ದಕ್ಷಿಣ ವಲಯದಿಂದ ಸಂಸತ್‌ಗೆ ಚುನಾಯಿತರಾಗಿರುವ ಸಂಸದ ತೇಜಸ್ವಿ ಸೂರ್ಯ ಟಿಇಜಿಎಸ್‌ 2019 ಶೃಂಗಸಭೆಯಲ್ಲಿ ಹೇಳಿದ್ದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಎದುರಾಗಿರುವ ಎಲ್ಲಾ ರೀತಿಯ ಸಮಸ್ಯೆಗಳ ಕುರಿತಾಗಿ ಆಳವಾಗಿ ಚರ್ಚೆ ಮಾಡಲು ಇದು ಅತ್ಯುತ್ತಮ ವೇದಿಕೆ ಆಗಿದೆ. ಟಿಇಜಿಎಸ್‌ ಮೂಲಕ ಶಿಕ್ಷಣ ತಜ್ಞರಿಗೆ ಉತ್ತಮ ಶೈಕ್ಷಣಿಕ ವ್ಯವಸ್ಥೆ ನೀಡಲು ನೆರವಾಗುವ ಪ್ರಯತ್ನ ಮಾಡಲಾಗುತ್ತಿದೆ. ಇಡೀ ಪ್ರಪಂಚವೇ ಸೋಂಕಿನ ಕಾರಣ ಅಲ್ಲೋಲ ಕಲ್ಲೋಲವಾಗಿರುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಶೈಕ್ಷಣಿಕ ಕ್ಷೇತ್ರವನ್ನು ಮರಳಿ ಚೇತರಿಸುವಂತೆ ಮಾಡುವುದು ಈ ಶೃಂಗಸಭೆಯ ಉದ್ದೇಶವಾಗಿದೆ.

Recommended Video

ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

ಇನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಅಲ್ಲ. ಟಿಇಜಿಎಸ್‌-21 ಬೆಂಗಳೂರಿನಲ್ಲಿ ಮಾರ್ಚ್‌ 09ರಂದು ನಡೆಯಲಿದ್ದು, ವಿವಿಧ ಶಿಕ್ಷಣ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ 60 ಮಂದಿ ಪ್ರಬಲ ನಾಯಕರು 12 ವಿಭಿನ್ನ ವಿಷಯಗಳ ಬಗ್ಗೆ ಈ ಶೃಂಗಸಭೆಯಲ್ಲಿ ಮಾತನಾಡಲಿದ್ದಾರೆ. ದಿನವಿಡೀ ನಡೆಯಲಿರುವ ಶೃಂಗಸಭೆಯಲ್ಲಿ ಕೆ12 ಮತ್ತು ಉನ್ನತ ಶಿಕ್ಷಣದ ಬಗ್ಗೆ ಚರ್ಚೆಯಾಗಲಿದೆ.

English summary
The Education Growth Summit 2021 Will be held on March 09 In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X