ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ಮನೆಯೂ ಒಡೆದಿದೆ ಮನಸ್ಸುಗಳೂ ಒಡೆದಿವೆ: ಲಿಂಬಾವಳಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 3: ಕಾಂಗ್ರೆಸ್‌ ಎನ್ನುವ ಮನೆಯೂ ಒಡೆದಿದೆ, ಮನಸ್ಸುಗಳೂ ಒಡೆಯುತ್ತಿವೆ ಎಂದು ಬಿಜೆಪಿ ಉಪ ಚುನಾವಣಾ ಉಸ್ತುವಾರಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಉಪಚುನಾವಣೆ ಬಳಿಕ ರಾಜಕೀಯ ಬದಲಾವಣೆಗಳು ನಿಶ್ಚಿತವಾಗಿ ಆಗುವುದಿದೆ,ಪಕ್ಷದ ಎಲ್ಲಾ ಮುಖಂಡರೂ, ಎಂಟು ಮೋರ್ಚಾಗಳ ಮುಖಂಡರೂ ಪ್ರಚಾರ ನಡೆಸಿದ್ದಾರೆ.

ಜೆಡಿಎಸ್‌ ವರಿಷ್ಠರಿಗೆ ಶಾಕ್ ಕೊಟ್ಟ ಅರವಿಂದ ಲಿಂಬಾವಳಿಜೆಡಿಎಸ್‌ ವರಿಷ್ಠರಿಗೆ ಶಾಕ್ ಕೊಟ್ಟ ಅರವಿಂದ ಲಿಂಬಾವಳಿ

ಸಿದ್ದರಾಮಯ್ಯ ಹೊರತಾದ ಕಾಂಗ್ರೆಸ್ ಉನ್ನತಮಟ್ಟದ ನಿಯೋಗವೊಂದು ಅವರ ಹೈಕಮಾಂಡ್ ಭೇಟಿ ಮಾಡಲು ಹೋಗುತ್ತದೆ ಎಂಬ ಮಾಹಿತಿ ಇದೆ ಎಂದರು.

ಕಾಂಗ್ರೆಸ್ ಕನಸು ಶೀಘ್ರ ಭಗ್ನ

ಕಾಂಗ್ರೆಸ್ ಕನಸು ಶೀಘ್ರ ಭಗ್ನ

ಕಾಂಗ್ರೆಸ್ ನಲ್ಲಿ ಯಾರು ಸಿಎಂ ಆಗಬೇಕು ಅಂತಾ ಈಗಾಗಲೇ ಚರ್ಚೆ ಆಗಿದೆ.ಆದರೆ ಅವರೆಲ್ಲರ ಕನಸುಗಳು ಭಗ್ನ ಆಗಲಿದೆ.ಬೇರೆ ಪಕ್ಷದ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ.ಅವರನ್ನು ಸೇರ್ಪಡೆ ಮಾಡಿಕೊಳ್ಳುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.

ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಗಂಭೀರ ಆಗಲಿದೆ

ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಗಂಭೀರ ಆಗಲಿದೆ

ಮುಂದಿನ ದಿನಗಳ ಕಾಂಗ್ರೆಸ್, ಜೆಡಿಎಸ್ ಸ್ಥಿತಿ ಗಂಭೀರ ಆಗಲಿದೆ,ನಮಗೆ ಬೇರೆ ಪಕ್ಷದ ಶಾಸಕರ ಅವಶ್ಯಕತೆ ಇಲ್ಲ.ಆದರೆ ಪಕ್ಷ ಬಲಪಡಿಸುವ ದೃಷ್ಟಿಯಿಂದ ಬರುವವರನ್ನು ಬೇಡ ಎನ್ನಲು ಸಾಧ್ಯವಾಗುವುದಿಲ್ಲ.

15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ

15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ

15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ನಮಗಿದೆ, ಉಪಚುನಾವಣೆ ಬಳಿಕ ಏಕ ಪಕ್ಷದ ಸುಭದ್ರ ಸರ್ಕಾರ ಸ್ಥಾಪನೆಯ ವಿಶ್ವಾಸವಿದೆ.ಮಹಾರಾಷ್ಟ್ರ ಘಟನೆಯ ಬಳಿಕ ಕರ್ನಾಟಕದಲ್ಲಿ ವಿರೋಧಪಕ್ಷಗಳಿಂದ ಹೇಳಿಕೆ ಗಳು ಬರ್ತಿವೆ.ನಾನೂ ಸಿಎಂ ಆಗಬಹುದು ಎಂಬ ಆಸೆ ಕಾಂಗ್ರೆಸ್ ಮುಖಂಡರಿಗೆ ಹುಟ್ಟಿಕೊಂಡಿದೆ.ಆರಂಭದಲ್ಲಿ ಸರ್ಕಾರ ಬೀಳಿಸಲು ಬಿಡಲ್ಲ ಎಂದು ಹೇಳಿದ್ದ ಜೆಡಿಎಸ್ ಈಗ ಮಹಾರಾಷ್ಟ್ರ ಬೆಳವಣಿಗೆ ಬಳಿಕ ಯೂ ಟರ್ನ್ ಹೊಡೆದಿದೆ.

ಎರಡೂ ಪಕ್ಷಗಳು ಜನರನ್ನು ಕನ್‌ಫ್ಯೂಷನ್ ಮಾಡಲು ಹೋಗಿ ಅವರೇ ಕನ್ ಫ್ಯೂಷನ್ ಆಗಿದ್ದಾರೆ.ಅವರೇ ಕನ್ ಫ್ಯೂಷನ್ ಆಗಿ ಬಿಜೆಪಿಗೆ ಅನುಕೂಲ ಮಾಡಿದ್ದಾರೆ.ಅವರು ಬಟ್ಟೆಗಳನ್ನು ಹೊಲಿಸಿಕೊಂಡು ಸಿದ್ದರಾಗಿದ್ದಾರಂತೆ.ಸಮ್ಮಿಶ್ರ ಸರ್ಕಾರ ಮಾಡ್ತೇವೆ ಎಂಬ ಹೇಳಿಕೆಗೆ ವ್ಯತಿರಿಕ್ತವಾಗಿ ರಾಜ್ಯಸಭಾ ಉಪಚುನಾವಣೆ ನಡೆದಿದೆ.

ಉಪ ಚುನಾವಣೆ ಬಗ್ಗೆ ಮಾಹಿತಿ

ಉಪ ಚುನಾವಣೆ ಬಗ್ಗೆ ಮಾಹಿತಿ

ಕರ್ನಾಟಕದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯುತ್ತಿದ್ದು, ಡಿಸೆಂಬರ್ 9ರಂದು ಫಲಿತಾಂಶ ಹೊರ ಬೀಳಲಿದೆ. ಇಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ಮುಳುಗಿದ್ದಾರೆ.

English summary
Arvind Limbavali Said that Already Congress House is broken.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X