ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಕುದುರೆ ರೇಸ್ ಇರುತ್ತಾ? ಇಲ್ವಾ? ಹೈಕೋರ್ಟಿನತ್ತ ಚಿತ್ತ

|
Google Oneindia Kannada News

ಬೆಂಗಳೂರು, ಡಿಸೆಂಬರ್ 15 : ಬೆಂಗಳೂರು ಟರ್ಫ್ ಕ್ಲಬ್ ನ ಪರವಾನಗಿ ನವೀಕರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋಡಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಹೈಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಲಿದೆ.

ಬಿಟಿ ಪರವಾನಗಿ ನವೀಕರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಚ್.ಎನ್. ಚಂದ್ರೇಗೌಡ ಸೇರಿ 10 ಮಂದಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಅವರಿದ್ದ ಏಕಸದಸ್ಯ ಪೀಠ ಶುಕ್ರವಾರ ಅರ್ಜಿಯ ಕುರಿತು ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ವಾದ ಮಂಡಿಸಿ, ಕುದುರೆ ರೇಸ್ ನಡೆಸಲು ಅನುಮತಿ ಕೋರಿ ಬಿಟಿಸಿ ಅಜಿಲ್ಲ ಸಲ್ಲಿಸಿಲ್ಲ. ರೇಸ್ ಕೋರ್ಸ್ ಬೆಟ್ಟಿಂಗ್ ಪತ್ರ ನೀಡಿದ್ದು, ಅದು ಸಹ ಸರಿಯಾದ ಸ್ವರೂಪದಲ್ಲಿ ಇಲ್ಲ. ಆದ್ದರಿಂದ ಬಿಟಿಸಿ ಪರವಾನಗಿ ನವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

The club wants the Govt to grant licence to hold winter races

ಇದನ್ನು ಆಕ್ಷೇಪಿಸಿದ ಬಿಟಿಸಿ ಪರ ವಕೀಲರು, ಕುದುರೆ ರೇಸ್ ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಹಿಂದೆಯೂ ಈ ಬಾರಿ ಸಲ್ಲಿಸಿರುವ ಸ್ವರೂಪದಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಆಗ ಸರ್ಕಾರ ಯಾವುದೇ ಆಕ್ಷೇಪ ಎತ್ತಿರಲಿಲ್ಲ.

ಬಿಟಿಟಸಿಯ ಸರ್ಕಾರಕ್ಕೆ 50 ಸದಸ್ಯತ್ವ ನೀಡುತ್ತಿಲ್ಲ ಎಂಬ ದ್ವೇಶಷದಿಂದ ಸದ್ಯ ಈ ವರ್ತನೆ ತೋರುತ್ತಿದೆ. ಸದಸ್ಯತ್ವ ನೀಡಲು ನಮ್ಮದು ಯಾವುದೇ ತಕರಾರಿಲ್ಲ. ಆದರೆ ಸದಸ್ಯತ್ವ ಕೋಟಿ ಬಿಟಿಸಿ ನಿಯಮಗಳನ್ವಯ ಸರಿಯಾದ ಸ್ವರೂಪದಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಅಡ್ವೋಕೇಟ್ ಜನರಲ್ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರವು ರೇಸ್ ಕೋರ್ಸ್ ಬೆಟ್ಟಿಂಗ್ ಸಲ್ಲಿಸಿರುವ ಅರ್ಜಿಯನ್ನು ಕಾನೂನು ಪ್ರಕಾರ ಪರಿಶೀಲಿಸಿ ಪರಿಗಣಿಸಲಾಗುವುದು. ಅಲ್ಲದೆ, ಸರಿಯಾದ ಸ್ವರೂಪದಲ್ಲಿ ಕುದುರೆ ರೇಸ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಗಣಿಸಲು ಮುಕ್ತವಾಗಿರುವುದಾಗಿ ತಿಳಿಸಿದರು.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿ ಕುರಿತು ಶುಕ್ರವಾರ ಮಧ್ಯಂತರ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿತು.

English summary
The High Court of Karnataka will pass an interim order on Friday on the plea made by Bengaluru Turf club(BTC) For issuing an interim direction to the state Government to grant licence for holding winter races.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X