ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾದಕ ವಸ್ತು ಮಾರಾಟ: ಸಿಸಿಬಿಗೆ ಸಿಕ್ಕಿಬಿದ್ದ ನೈಜೀರಿಯಾ ಪ್ರಜೆ

ಮಾದಕ ವಸ್ತುಗಳನ್ನು ಮಾರಾಟ ಮಾಡಲು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ ಬಳಿ ಓಡಾಡುತ್ತಿದ್ದ ನೈಜೀರಿಯಾದ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 5ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 16: ನಗರದ ಗಾರ್ಡನ್ ಸಿಟಿ ಕಾಲೇಜಿನ ಬಳಿ ಮಾದಕವಸ್ತುಗಳನ್ನು ಮಾರಾಟ ಮಾಡಲು ತಿರುಗಾಡುತ್ತಿದ್ದ ನೈಜೀರಿಯಾ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದ್ವಿಚಕ್ರ ವಾಹನ ಸೇರಿದಂತೆ 5ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಫ್ರ್ಯಾಕ್ ಆನ್ಯಡಿಕಾಚಿ (34) ಎಂಬಾತ ಬಂಧಿತ ಆರೋಪಿ. ಇವನು ನೈಜೀರಿಯಾದ ಎಲುಗು ರಾಜ್ಯದವನು ಎನ್ನಲಾಗಿದೆ. ಬೆಂಗಳೂರಿನ ಕೆಆರ್ ಪುರಂ ಠಾಣಾ ವ್ಯಾಪ್ತಿಯ ಭಟ್ರಳ್ಳಿ- ಕೀತಗನೂರು ಮುಖ್ಯ ರಸ್ತೆಯಲ್ಲಿರುವ ಗಾರ್ಡನ್ ಸಿಟಿ ಕಾಲೇಜಿನ ಬಳಿ ಹೋಂಡಾ ಆಕ್ಞಿವಾದಲ್ಲಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಲು ಯತ್ನಿಸುತ್ತಿದ್ದ ಎನ್ನಲಾಗಿದೆ.[ಮಂಗ್ಳೂರಿನಲ್ಲಿ ಕೋಕೆನ್ ಮಾರಾಟ ಮಾಡುತ್ತಿದ್ದ ಆಫ್ರಿಕಾ ವ್ಯಕ್ತಿ ಬಂಧನ]

The city crime branch (CCB)was arrested Nigeria citizen in bengaluru

ಈ ವೇಳೆ ಖಚಿತ ಆಧಾರದ ಮೇಲೆ ಸಿಸಿಬಿ(ನಗರ ಕೇಂದ್ರ ಅಪರಾಧ ವಿಭಾಗ) ಪೊಲೀಸರು ಅರೋಪಿಯನ್ನು ಬಂಧಿಸಿದ್ದು 35ಗ್ರಾಂ ಮಾದಕವನ್ನುವನ್ನು ಮತ್ತು ಕೃತ್ಯಕ್ಕೆ ಬಳಸುತ್ತಿದ್ದ 3 ಮೊಬೈಲ್ ಗಳು, 2 ಲ್ಯಾಪ್ ಟಾಪ್ ಗಳು ಮತ್ತು ಬಿಳಿ ಹೋಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳ ಒಟ್ಟು ಮೌಲ್ಯ ಸುಮಾರು ರು 5ಲಕ್ಷ ಎಂದು ಅಂದಾಜಿಸಲಾಗಿದೆ.

ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ನಗರದ ಕೇಂದ್ರ ಅಪರಾಧ ವಿಭಾಗದ ಎಸಿಪಿ ಶ್ರೀ ಸಿದ್ಧಲಿಂಗಪ್ಪ ರವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

English summary
The city crime branch (CCB)is arrested Nigeria citizen Frank(35) in bengaluru. The Frank trying to sell MDMA in front of Gorden city college. Police seized 35 grm of MDMA and other property worth Rs 5lac.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X