ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Namma Metro 3ನೇ ಹಂತದ ಪ್ರಸ್ತಾವನೆ ಸ್ವೀಕರಿಸಿದ ಕೇಂದ್ರ

ಮೂರನೇ ಹಂತದ ಮೆಟ್ರೋ ಎರಡು ಕಾರಿಡಾರ್‌ಗಳೊಂದಿಗೆ 44.65 ಕಿ.ಮೀ. ಕಾರಿಡಾರ್-1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು ಹಂತ-II ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರುತ್ತದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 3: ನಮ್ಮ ಮೆಟ್ರೋ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸಲು ಕರ್ನಾಟಕದಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸಿದೆ.

ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ ಸಿ ಮೋಹನ್ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್, ಮೂರನೇ ಹಂತದ ಎರಡು ಕಾರಿಡಾರ್‌ಗಳೊಂದಿಗೆ 44.65 ಕಿ.ಮೀ. ಕಾರಿಡಾರ್-1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು ಹಂತ-II ಹೊಸಹಳ್ಳಿಯಿಂದ ಕಡಬಗೆರೆವರೆಗೆ ಇರುತ್ತದೆ. ಹಂತ-III ಯೋಜನೆಯ ಒಟ್ಟು ವೆಚ್ಚ 16,328 ಕೋಟಿ ರೂಪಾಯಿ ಎಂದು ಸಚಿವರು ಹೇಳಿದರು.

Namma metro: ಶೀಘ್ರದಲ್ಲೇ ಮೆಟ್ರೋ ನಿಲ್ದಾಣಕ್ಕೆ ಹೋಗಲು 2 ಕಿಲೋ ಮೀಟರ್ ಒಳಗೆ ಸಾರಿಗೆ ವ್ಯವಸ್ಥೆNamma metro: ಶೀಘ್ರದಲ್ಲೇ ಮೆಟ್ರೋ ನಿಲ್ದಾಣಕ್ಕೆ ಹೋಗಲು 2 ಕಿಲೋ ಮೀಟರ್ ಒಳಗೆ ಸಾರಿಗೆ ವ್ಯವಸ್ಥೆ

ಬೆಂಗಳೂರಿನ ನಮ್ಮ ಮೂರನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ಹಸಿರು ನಿಶಾನೆ ನೀಡಿತ್ತು. ಮೂರನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಸೆಪ್ಟೆಂಬರ್‌ನಲ್ಲಿ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬಳಿಕ ಅನುಮೋದನೆ ದೊರೆತು ಕೇಂದ್ರದ ಮಿನಿಸ್ಟ್ರಿ ಆಫ್ ಹೌಸಿಂಗ್ ಅಫೇರ್ಸ್ಗೆ ರಿಪೋರ್ಟ್ ಸಲ್ಲಿಸಲಾಗಿತ್ತು. ಈಗ ಮೂರನೇ ಹಂತಕ್ಕೆ ಅನುಮೋದನೆ ನೀಡಲಾಗಿದೆ.

The center received the proposal for phase 3 of namma metro

ನಮ್ಮ ಮೆಟ್ರೋ ಮೂರನೇ ಹಂತದ ಆರಂಭಕ್ಕೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಲಾಗಿತ್ತು. ಸರ್ವೆ ಕಾರ್ಯವು ನಡೆದು‌ ಮೆಟ್ರೋ ಮಾರ್ಗದ ಅಲೈನ್ಮೆಂಟ್ ನಲ್ಲಿ ಖಾಲಿ ಜಾಗ, ಸರ್ಕಾರಿ ಜಾಗ ಗಮನಿಸಿ ಭೂಸ್ವಾಧಿನಕ್ಕೂ ಸಿದ್ಧತೆ ಮಾಡಲಾಗಿತ್ತು.‌ ಜೊತೆಗೆ ಮೆಟ್ರೋ ಸಾಗುವ ಮಾರ್ಗದಲ್ಲಿ ಜಲಮಂಡಳಿ, ಬೆಸ್ಕಾಂ ಲೈನ್ ಇರುವಿಕೆಯನ್ನು ಪರಿಶೀಲನೆ ಮಾಡುವುದರ ಜೊತೆಗೆ ಟ್ರಾಫಿಕ್ ಸರ್ವೆ ಮಾಡಿ ನಿತ್ಯ ಪ್ರಯಾಣಿಕರು ಸಂಚರಿಸಬಹುದಾದ ರೈಡರ್ ಶಿಫ್ ಅಂದಾಜು ಮಾಡಲಾಗಿದೆ.

The center received the proposal for phase 3 of namma metro

ಮೆಟ್ರೊ ಮೂರನೇ ಹಂತದಲ್ಲಿ 44.65 ಕಿಲೋಮೀಟರ್ ಉದ್ದದ ಮಾರ್ಗ ಇರುತ್ತದೆ. ನಮ್ಮ ಮೆಟ್ರೊ ಮೂರನೇ ಹಂತದಲ್ಲಿಎರಡು ಕಾರಿಡಾರ್ ಗಳು ಇರಲಿದೆ. ಮೊದಲನೇ ಕಾರಿಡಾರ್ ಜೆಪಿ ನಗರ ನಾಲ್ಕನೇ ಹಂತದಿಂದ ಹೆಬ್ಬಾಳದವರೆಗೆ ಒಟ್ಟು 32 ಕಿಲೊಮೀಟರ್ ಉದ್ದವಿರುತ್ತದೆ. ಮೆಟ್ರೋ ಮೂರನೇ ಹಂತದ ಒಟ್ಟು ಕಾಮಗಾರಿ ವೆಚ್ಚ 13 ಸಾವಿರ ಕೋಟಿಯಿಂದ 16 ಸಾವಿರ ಕೋಟಿ ಎಂದು ಈಗಾಗಲೇ ಅಂದಾಜಿಸಲಾಗಿದೆ. ರಾಜ್‌ಕುಮಾರ್ ಸಮಾಧಿ, ಯಶವಂತಪುರ , ನ್ಯೂ ಬಿಇಎಲ್ ಸರ್ಕಲ್ ಮಾರ್ಗವಾಗಿ ಹೆಬ್ಬಾಳ ಸೇರಲಿದ್ದು ಒಟ್ಟು 22 ನಿಲ್ದಾಣಗಳನ್ನು ಇದು ಹೊಂದಿರಲಿದೆ.

English summary
The Union Government has informed the Parliament that a proposal has been received from Karnataka to implement the third phase of namma Metro project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X