ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ನೃತ್ಯ ಕೂಪಕ್ಕೆ ಸಿಲುಕಿದ್ದ 36 ಯುವತಿಯರ ರಕ್ಷಣೆ

By Vanitha
|
Google Oneindia Kannada News

ಬೆಂಗಳೂರು, ಜುಲೈ, 11 :ಯುವತಿಯರಿಗೆ ಅಸಭ್ಯ ಉಡುಪುಗಳನ್ನು ಬಲವಂತವಾಗಿ ತೊಡಿಸಿ ಅಶ್ಲೀಲ ನೃತ್ಯ ಮಾಡಲು ಪ್ರೇರೇಪಣೆ ನೀಡುತ್ತಿದ್ದ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು 40 ಜನರನ್ನು ಬಂಧಿಸಿ ಹೊರರಾಜ್ಯಗಳ 36 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಕಬ್ಬನ್ ಪಾರ್ಕ್ ವ್ಯಾಪ್ತಿಯ ಲೆಸ್ ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್ ಮೇಲೆ ದಾಳಿ ಮಾಡಲಾಗಿದ್ದು ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.[ದಾವತ್ ಬಾರ್ ಅಂಡ್ ಪಬ್ ಮಾಲಿಕನಿಗೆ ಪೊಲೀಸರ 'ದಾವತ್]

The attack on the live band : 36 Women Protection

ಪಬ್ ಮೇಲೆ ದಾಳಿ ನಡೆಸಿದಾಗ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವತಿಯರು ಪಂಜಾಬ್, ಪಶ್ಚಿಮಬಂಗಾಳ, ಜಾರ್ಖಂಡ್, ಉತ್ತರಾಖಂಡ್ ರಾಜ್ಯದವರು ಎಂದು ತಿಳಿದು ಬಂದಿದೆ. ಬಾರ್ ಮಾಲೀಕರಾದ ಕುಮಾರ್, ಕಟ್ಟಡ ಮಾಲೀಕರಾದ ನಯೀಮುದ್ದೀನ್, ಉಸ್ತುವಾರಿ ಕೇಶವ, ಮ್ಯಾನೇಜರ್ ಶಾಜೀದ್ ತಪ್ಪಿಸಿಕೊಂಡಿದ್ದಾರೆ. ಮಾಲೀಕರ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಶೋಧ ಮುಂದುವರೆದಿದೆ.

ಆರೋಪಿಗಳಾದ ರಮೇಶ್ ಕುಮಾರ್, ವಾಸು ಮತ್ತು ಮುಜೀಬ್ ಎಂಬುವರು 'ಕೆಲಸ ಕೊಡಿಸುವುದಾಗಿ ಕರೆತಂದು ನಮ್ಮನ್ನು ಬಾರ್ ಗರ್ಲ್ ಕೆಲಸಕ್ಕೆ ಸೇರಿಸಿದ್ದಾರೆ. ಅಸಭ್ಯ ಉಡುಪು ಧರಿಸುವುದಿಲ್ಲವೆಂದರೂ ಕೇಳಲಿಲ್ಲ. ಅಶ್ಲೀಲ ಉಡುಪುಗಳನ್ನು ತೊಡಿಸಿ ಗಿರಾಕಿಗಳ ಮುಂದೆ ನೃತ್ಯ ಮಾಡುವಂತೆ ಒತ್ತಾಯಪಡಿಸುತ್ತಿದ್ದರು' ಎಂದು ರಕ್ಷಿಸಲ್ಪಟ್ಟ ಯುವತಿಯರು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

English summary
Cubbon Park police have seized less family bar and restaurant and arrested owners. everytime owners are forced to girls wearing very short dresses. Then the cubbon park police have gathered information about illegal activities.Within in hours police had attacked the bar and secured 36 girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X